ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಗ್ ಬಜಾರ್‌ನಿಂದ 61 ನೂತನ ಮಳಿಗೆ ಪ್ರಾರಂಭ  Search similar articles
ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 5000 ಕೋಟಿ ವಹಿವಾಟು ನಡೆಸುವ ಗುರಿಯೊಂದಿಗೆ, ಪ್ಯೂಚರ್ ಸಮೂಹದ ರಖಂ ವ್ಯಾಪಾರ ಸಂಸ್ಥೆ ಬಿಗ್ ಬಜಾರ್ ಹೆಚ್ಚುವರಿ 61 ಮಳಿಗೆಗಳನ್ನು ಈ ವರ್ಷಾಂತ್ಯದೊಳಗೆ ಪ್ರಾರಂಭಿಸಲಿದೆ ಎಂದು ಬಿಗ್ ಬಜಾರ್ ತಿಳಿಸಿದೆ.

ಕಂಪನಿಯು ಪ್ರಸಕ್ತ ಹಣಕಾಸು ವರ್ಷಗಲ್ಲಿ ಸುಮಾರು 5000 ಕೋಟಿ ವಹಿವಾಟು ನಡೆಸುವ ಗುರಿಯನ್ನು ಹೊಂದಿದ್ದು, ಯೋಜನೆಯ ಭಾಗವಾಗಿ, ದೇಶದಾದ್ಯಂತ 61 ಮಳಿಗೆಗಳನ್ನು ಬಿಗ್ ಬಜಾರ್ ಪ್ರಾರಂಭಿಸಲಿದೆ ಎಂದು ಬಿಗ್ ಬಜಾರ್ ಮೂಲಗಳು ಹೇಳಿವೆ.

ಸುಮಾರು 30,000-1,25,000 ಚದರ ಅಡಿ ಜಾಗದಲ್ಲಿ ನೂತನ ಬಿಗ್ ಬಜಾರ್ ಮಳಿಗೆಗಳು ಸ್ಥಾಪನೆಗೊಳ್ಳಲಿದ್ದು, ನೂತನ ಮಳಿಗೆ ಪ್ರಾರಂಭದ ನಂತರ ದೇಶದಲ್ಲಿ ಒಟ್ಟು ಬಿಗ್ ಬಜಾರ್ ಮಳಿಗೆಗಳ ಸಂಖ್ಯೆಯು 150ಕ್ಕೆ ಏರಲಿದೆ ಎಂದು ಬಿಗ್ ಬಜಾರ್ ತಿಳಿಸಿದೆ.

ಹೆಚ್ಚಿನ ನೂತನ ಮಳಿಗೆಗಳನ್ನು ಟೈಯರ್ 2 ನಗರಗಳಲ್ಲಿ ಮತ್ತು ಸಣ್ಣ ನಗರಗಳಲ್ಲಿ ಸ್ಥಾಪಿಸಲಾಗುವುದು. ಪ್ರಸಕ್ತ ಬಿಗ್ ಬಜಾರ್ 16 ಟಯರ್ 2 ನಗರಗಳಲ್ಲಿ ಮತ್ತು ಸಣ್ಣ ನಗರಗಳಲ್ಲಿ ವಹಿವಾಟನ್ನು ನಡೆಸುತ್ತಿದೆ.
ಮತ್ತಷ್ಟು
ಆಹಾರ ಬಿಕ್ಕಟ್ಟು: ಜಿ8 ನಾಯಕರಿಂದ ಕಾರ್ಯಪಡೆ
ಎಸ್‌ಬಿಐನಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ ಪ್ರಾರಂಭ
141 ಡಾಲರ್‌ಗೇರಿದ ಕಚ್ಛಾತೈಲ ಬೆಲೆ
ಸಾಲಮನ್ನಾ ಯೋಜನೆ ಇಂದು ಕಾರ್ಯರೂಪಕ್ಕೆ
ಹಣದುಬ್ಬರ: ಭಾರತದ ಉದ್ಯಮ ವಿಶ್ವಾಸಕ್ಕೆ ಧಕ್ಕೆ
ಚೀನಾ ಭೂಕಂಪ: ನಷ್ಟದಲ್ಲಿ ರೇಶ್ಮೆ ಉದ್ಯಮ