ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಚ್‌ಡಿಎಫ್‌ಸಿ, ಐಸಿಐಸಿಐಗಳಿಂದ ಬಡ್ಡಿದರ ಹೆಚ್ಚಳ  Search similar articles
ಭಾರತೀಯ ರಿಸರ್ವ್ ಬ್ಯಾಂಕ್ ಬಿಗಿ ಹಣಕಾಸು ಧೋರಣೆಯನ್ನು ತಾಳಿರುವುದರ ಹಿನ್ನೆಲೆಯಲ್ಲಿ, ಪ್ರಮುಖ ಬ್ಯಾಂಕುಗಳಾದ ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಎಸ್‌ಬಿಐ , ಗೃಹ, ಆಟೋ ಮತ್ತು ಇತರ ಸಾಲಗಳ ಬಡ್ಡಿದರವನ್ನು ಸೋಮವಾರ ಶೇ.0.75ರಷ್ಟು ಹೆಚ್ಚಳಗೊಳಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಕನಿಷ್ಟ ಬಡ್ಡಿದರವನ್ನು (ಮಿನಿಮಮ್ ಫ್ಲೋಟಿಂಗ್ ರೇಟ್) ನೂತನ ಗ್ರಾಹಕರಿಗೆ ಶೇ.10.25ರಿಂದ ಶೇ.11ಕ್ಕೆ ಏರಿಸಿದರೆ, ಖಾತೆ ಹೊಂದಿರುವ ಗ್ರಾಹಕರಿಗೆ ಶೇ.0.50ರಷ್ಟು ಏರಿಕೆಗೊಳಿಸಿದೆ. ಅಲ್ಲದೆ, ಬ್ಯಾಂಕಿನ ನೂತನ ಫಿಕ್ಸ್‌ಡ್ ದರವು ಶೇ.14ಕ್ಕೆ ಏರಲಿದೆ.

ಐಸಿಐಸಿಐ ಬ್ಯಾಂಕ್ ಕೂಡಾ ಗೃಹ ಸಾಲ ಖರೀದಿಗಾರರು ಸೇರಿದಂತೆ ಎಲ್ಲಾ ಸಾಲ ಖರೀದಿ ಗ್ರಾಹಕರ ಕನಿಷ್ಟ ದರವನ್ನು ಶೇ.0.75ರಷ್ಟು ಹೆಚ್ಚಳಗೊಳಿಸಿದೆ.

ಈಗಾಗಲೇ ಖಾತೆ ಹೊಂದಿರುವ ಗ್ರಾಹಕರಿಗೆ ಈ ಬದಲಾವಣೆಯು ಇಂದಿನಿಂದ ಅನ್ವಯವಾಗಲಿದೆ ಎಂದು ಬ್ಯಾಂಕ್ ತಿಳಿಸಿದೆ.

ಸಾಲಬಡ್ಡಿದರ ಹೆಚ್ಚಳದೊಂದಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಠೇವಣಿ ದರವನ್ನೂ ಶೇ.0.50ರಷ್ಟು ಏರಿಸಿದೆ. ಐಸಿಐಸಿಐ ಬ್ಯಾಂಕ್ 15 ಲಕ್ಷಕ್ಕಿಂತ ಕಡಿಮೆ ಮೊತ್ತದ ಫಿಕ್ಸೆಡ್ ಠೇವಣಿಗಳ ದರವನ್ನು ಶೇ.0.50-ಶೇ.1ಕ್ಕೆ ಏರಿಸಿದ್ದು, ಇಂದಿನಿಂದ ಇದು ಜಾರಿಗೆ ಬರಲಿದೆ.
ಮತ್ತಷ್ಟು
ಬಿಗ್ ಬಜಾರ್‌ನಿಂದ 61 ನೂತನ ಮಳಿಗೆ ಪ್ರಾರಂಭ
ಆಹಾರ ಬಿಕ್ಕಟ್ಟು: ಜಿ8 ನಾಯಕರಿಂದ ಕಾರ್ಯಪಡೆ
ಎಸ್‌ಬಿಐನಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ ಪ್ರಾರಂಭ
141 ಡಾಲರ್‌ಗೇರಿದ ಕಚ್ಛಾತೈಲ ಬೆಲೆ
ಸಾಲಮನ್ನಾ ಯೋಜನೆ ಇಂದು ಕಾರ್ಯರೂಪಕ್ಕೆ
ಹಣದುಬ್ಬರ: ಭಾರತದ ಉದ್ಯಮ ವಿಶ್ವಾಸಕ್ಕೆ ಧಕ್ಕೆ