ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಟೀಲ್, ಇಂಧನ ಕ್ಷೇತ್ರಗಳ ಉದ್ಯೋಗ ಪ್ರಮಾಣ ಹೆಚ್ಚಳ  Search similar articles
ದೇಶದ ಇಂಧನ ಮತ್ತು ಸ್ಟೀಲ್ ಉದ್ಯಮವು ನುರಿತ ಮತ್ತು ಅನುಭವಿ ನೌಕರರ ಕೊರತೆಯನ್ನು ಎದುರಿಸುತ್ತಿರುವುದರೊಂದಿಗೆ, ಈ ಎರಡೂ ಕ್ಷೇತ್ರಗಳು ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 40,000 ಉದ್ಯೋಗವನ್ನು ನಿರ್ಮಿಸುವ ಸಾಧ್ಯತೆ ಇದೆ ಎಂದು ಉದ್ಯಮ ಮಂಡಳಿ ಅಸೋಚಾಂ ವರದಿಗಳು ತಿಳಿಸಿವೆ.

ಇಂಧನ ಮತ್ತು ಸ್ಟೀಲ್ ಕ್ಷೇತ್ರದಲ್ಲಿರುವ ಹೆಚ್ಚಿನ ಸಂಖ್ಯೆಯ ಅಸೋಚಾಂ ಸದಸ್ಯರು, ನುರಿತ ಮತ್ತು ಅನುಭವಿ ನೌಕರರ ಕೊರತೆಯನ್ನು ಉದ್ಯಮಗಳು ಎದುರಿಸುತ್ತಿದೆ ಎಂದು ಅಸೋಚಾಂಗೆ ವರದಿ ಮಾಡಿರುವುದಾಗಿ ಅಸೋಚಾಂ ಅಧ್ಯಕ್ಷ ಸಜ್ಜನ್ ಜಿಂದಾಲ್ ತಿಳಿಸಿದ್ದು, ಈ ಕ್ಷೇತ್ರಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಗೊಳಿಸಲು ಯೋಜನೆ ನಡೆಸುತ್ತಿರುವುದರೊಂದಿಗೆ ಉದ್ಯೋಗಗಳ ಪ್ರಮಾಣವು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಸುಮಾರು 16,000 ಮೆಗಾ ವ್ಯಾಟ್ ಸಾಮರ್ಥ್ಯದ ನಾಲ್ಕು ಅಲ್ಟ್ರಾ ಮೆಗಾ ಇಂಧನ ಯೋಜನೆಯು ಈ ವರ್ಷ ಪ್ರಾರಂಭಗೊಳ್ಳುವ ನಿರೀಕ್ಷೆಯಿದ್ದು, ಇದು ಉದ್ಯೋಗ ಪ್ರಮಾಣವು ಇನ್ನಷ್ಟು ಹೆಚ್ಚಳಗೊಳಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಸ್ಟೀಲ್ ಕ್ಷೇತ್ರಗಳಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ಸಾಮರ್ಥ್ಯ ವೃದ್ಧಿಯ ಯೋಜನೆಯನ್ನು ಹೊಂದಿದ್ದು, ಈಗಾಗಲೇ ನೌಕರರ ಕೊರತೆಯನ್ನು ಎದುರಿಸುತ್ತಿರುವುದರಿಂದ ಕಾರ್ಯನಿರ್ವಹಣೆ ಕಷ್ಟಕರವಾಗಲಿದೆ ಎಂದು ಜಿಂದಾಲ್ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ಎಚ್‌ಡಿಎಫ್‌ಸಿ, ಐಸಿಐಸಿಐಗಳಿಂದ ಬಡ್ಡಿದರ ಹೆಚ್ಚಳ
ಬಿಗ್ ಬಜಾರ್‌ನಿಂದ 61 ನೂತನ ಮಳಿಗೆ ಪ್ರಾರಂಭ
ಆಹಾರ ಬಿಕ್ಕಟ್ಟು: ಜಿ8 ನಾಯಕರಿಂದ ಕಾರ್ಯಪಡೆ
ಎಸ್‌ಬಿಐನಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ ಪ್ರಾರಂಭ
141 ಡಾಲರ್‌ಗೇರಿದ ಕಚ್ಛಾತೈಲ ಬೆಲೆ
ಸಾಲಮನ್ನಾ ಯೋಜನೆ ಇಂದು ಕಾರ್ಯರೂಪಕ್ಕೆ