ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ಪ್ರಯಾಣ ಮತ್ತಷ್ಟು ತುಟ್ಟಿ ಸಾಧ್ಯತೆ  Search similar articles
ತೈಲ ಕಂಪನಿಗಳು ವಿಮಾನ ಇಂಧನ(ಎಟಿಎಫ್)ದ ಬೆಲೆಯನ್ನು ಶೇ.4.3ರಷ್ಟು ಸೋಮವಾರ ರಾತ್ರಿ ಏರಿಸಿದ್ದು, ಇದರಿಂದಾಗಿ ವಿಮಾನ ದರವು ಇನ್ನಷ್ಟು ಹೆಚ್ಚಳಗೊಳ್ಳುವ ಸಾಧ್ಯತೆಯಿದೆ.

ಸುಮಾರು 750 ಕಿಲೋ ಮೀಟರ್‌ ಅಂತರದಲ್ಲಿ ಪ್ರಯಾಣಿಸುವ ಪ್ರಾದೇಶಿಕ ವಿಮಾನಗಳಿಗೆ 2,250 ರೂಪಾಯಿ ಇಂಧನ ಸರ್ಚಾರ್ಜ್ ರೂ.100ರಿಂದ 200ರವರೆಗೆ ಏರಿಕೆಗೊಳ್ಳಲಿದ್ದು, ಮಧ್ಯಮ ದೂರ ದೇಶೀಯ ವಿಮಾನಗಳ ಪ್ರಸಕ್ತವಿರುವ 2,250 ರೂ. ಸರ್ಜಾರ್ಜ್ ರೂ.200-300ರಷ್ಟು ಹೆಚ್ಚಳಗೊಳ್ಳಲಿದೆ.

ಪೂರ್ಣ ಸೇವೆಯನ್ನು ಒದಗಿಸುವ ವಿಮಾನಗಳ ಮೂಲದರವು 1,000ದಿಂದ 3,000ದವರೆಗಿದ್ದು, ತೆರಿಗೆ ಮತ್ತು ಸರ್ಚಾರ್ಜ್ ಪ್ರಮಾಣವು ರೂ.2,725ರಿಂದ ರೂ.3575ರವರೆಗಿದೆ. ಒಟ್ಟಾರೆ, ದೆಹಲಿಯಿಂದ ಯಾವುದೇ ಮೆಟ್ರೋ ನಗರಗಳಿಗೆ ಸಂಚರಿಸುವ ವಿಮಾನಗಳ ಕನಿಷ್ಟ ದರವು ರೂ.6,500ರಷ್ಟಾಗಿರುತ್ತದೆ.

ಈ ಬೆಲೆ ಹೆಚ್ಚಳದ ಪರಿಣಾಮದ ಕುರಿತಾಗಿ ಮಂಗಳವಾರ ಪರಿಶೀಲನೆ ನಡೆಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ವಿಮಾನ ಸಂಸ್ಥೆಗಳಾದ ಏರ್ ಇಂಡಿಯಾ, ಕಿಂಗ್‌ಫಿಶರ್ ಮತ್ತು ಇಂಡಿಗೋ ತಿಳಿಸಿದೆ.

ಈ ನಡುವೆ, ಪ್ರಸಕ್ತವಿರುವ 750 ಕಿ.ಮೀಗಿಂತ ಕಡಿಮೆ ಅಂತರದ ಹಾಗೂ ಹೆಚ್ಚು ಅಂತರದ ವಿಮಾನಗಳ ಸರ್ಚಾರ್ಜ್ ಏರಿಕೆಯ ಬದಲು ಮೂರು ಹಂತಗಳಲ್ಲಿನ ಸರ್ಚಾರ್ಡ್ ಹೆಚ್ಚಳವನ್ನು ತಾನು ಬೆಂಬಲಿಸುವುದಾಗಿ ಸ್ಪೈಸ್‌ಜೆಟ್ ಕಾರ್ಯನಿರ್ವಾಹಕ ಅಧ್ಯಕ್ಷ ಸಿದ್ಧಾಂತ ಶರ್ಮ ತಿಳಿಸಿದ್ದು, ರೂ.100,ರೂ.150 ಮತ್ತು ರೂ.200 ಮೂರು ಸ್ಲಾಬ್‌ಗಳಲ್ಲಿ ಸರ್ಚಾರ್ಜ್‌ನ್ನು ಹೆಚ್ಚಳಗೊಳಿಸಬಹುದು. ಏನೇ ಆದರೂ ಈ ಕುರಿತಾಗಿ ಮಂಗಳವಾರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮತ್ತಷ್ಟು
ಸ್ಟೀಲ್, ಇಂಧನ ಕ್ಷೇತ್ರಗಳ ಉದ್ಯೋಗ ಪ್ರಮಾಣ ಹೆಚ್ಚಳ
ಎಚ್‌ಡಿಎಫ್‌ಸಿ, ಐಸಿಐಸಿಐಗಳಿಂದ ಬಡ್ಡಿದರ ಹೆಚ್ಚಳ
ಬಿಗ್ ಬಜಾರ್‌ನಿಂದ 61 ನೂತನ ಮಳಿಗೆ ಪ್ರಾರಂಭ
ಆಹಾರ ಬಿಕ್ಕಟ್ಟು: ಜಿ8 ನಾಯಕರಿಂದ ಕಾರ್ಯಪಡೆ
ಎಸ್‌ಬಿಐನಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ ಪ್ರಾರಂಭ
141 ಡಾಲರ್‌ಗೇರಿದ ಕಚ್ಛಾತೈಲ ಬೆಲೆ