ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಲಮನ್ನಾ: ಪಿಎಸ್‌ಯು ಬ್ಯಾಂಕ್‌ಗಳಿಗೆ ಚಿದು ಶ್ಲಾಘನೆ  Search similar articles
ಯುಪಿಎ ಸರಕಾರದ ಮಹತ್ವಾಕಾಂಕ್ಷೆಯ ಸಾಲಮನ್ನಾ ಯೋಜನೆಯ ವಿವರಗಳನ್ನು ಹಣಕಾಸು ಸಚಿವಾಲಯದ ಅಂತಿಮ ಗಡುವಿನೊಳಗೆ ಒದಗಿಸಿರುವುದಕ್ಕೆ, ತಮ್ಮ ಕಳಪೆ ಸೇವೆಗಳಿಗಾಗಿ ಪದೇ ಪದೇ ಗ್ರಾಹಕರಿಂದ ದೂಷಣೆಗೊಳಪಡುತ್ತಿದ್ದ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಹಣಕಾಸು ಸಚಿವ ಪಿ.ಚಿದಂಬರಂ ಶ್ಲಾಘಿಸಿದ್ದಾರೆ.

ಸಾಲ ಮನ್ನಾ ಯೋಜನೆಯ ವಿವರ ಸಂಗ್ರಹವು ದೀರ್ಘ ಪ್ರಕ್ರಿಯೆಯಾಗಿದ್ದರೂ, ನಿಗದಿತ ದಿನಾಂಕದೊಳಗೆ ಸಾಲಮನ್ನಾ ಯೋಜನೆಯ ಅರ್ಹ ರೈತರ ಪಟ್ಟಿಯನ್ನು ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳ ಸಿದ್ಧಪಡಿಸಿದ್ದು, ಇದು ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿನ ನೌಕರರ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಚಿದಂಬರಂ ನವದೆಹಲಿಯಲ್ಲಿ ತಿಳಿಸಿದ್ದಾರೆ.

ಸಾಲ ಮನ್ನಾ ಯೋಜನೆಯ ಅರ್ಹ ರೈತರ ಪಟ್ಟಿ ಸೇರಿದಂತೆ ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಂಗ್ರಹಿಸಲು ಜೂನ 25ರವರೆಗೆ 30 ದಿನಗಳ ಗಡುವನ್ನು ಸರಕಾರವು ಸಾರ್ವಜನಿಕ ವಲಯಗಳ ಬ್ಯಾಂಕುಗಳಿಗೆ ನೀಡಿತ್ತು.

ಕೃಷಿ ವಲಯವನ್ನು ಪುನಶ್ಚೇತನಗೊಳಿಸುವ ಗುರಿಯನ್ನು ಹೊಂದಿರುವ ಈ ಯೋಜನೆಯಿಂದ ಸುಮಾರು ನಾಲ್ಕು ಕೋಟಿ ರೈತರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ಉತ್ತಮ ತರಬೇತಿಯು ಕೂಡಾ ಬ್ಯಾಂಕುಗಳ ದಾಖಲೆ ನಿರ್ವಹಣಾ ಪದ್ಧತಿಯನ್ನು ಅಭಿವೃದ್ಧಿಗೊಳಿಸಲು ಸಹಾಯವಾಗಿದೆ ಎಂದು ಚಿದಂಬರಂ ತಿಳಿಸಿದ್ದಾರೆ.
ಮತ್ತಷ್ಟು
ಬಜೆಟ್ ಮಿತಿಯೊಳಗೆ ಹಣಕಾಸು ಕೊರತೆ: ಚಿದಂಬರಂ
ವಿಮಾನ ಪ್ರಯಾಣ ಮತ್ತಷ್ಟು ತುಟ್ಟಿ ಸಾಧ್ಯತೆ
ಸ್ಟೀಲ್, ಇಂಧನ ಕ್ಷೇತ್ರಗಳ ಉದ್ಯೋಗ ಪ್ರಮಾಣ ಹೆಚ್ಚಳ
ಎಚ್‌ಡಿಎಫ್‌ಸಿ, ಐಸಿಐಸಿಐಗಳಿಂದ ಬಡ್ಡಿದರ ಹೆಚ್ಚಳ
ಬಿಗ್ ಬಜಾರ್‌ನಿಂದ 61 ನೂತನ ಮಳಿಗೆ ಪ್ರಾರಂಭ
ಆಹಾರ ಬಿಕ್ಕಟ್ಟು: ಜಿ8 ನಾಯಕರಿಂದ ಕಾರ್ಯಪಡೆ