ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಟೋಮೊಬೈಲ್ ಉದ್ದಿಮೆಗೆ ತಟ್ಟದ ಪೆಟ್ರೊಲ್ ಬಿಸಿ  Search similar articles
PTI
ಇಂಧನ ಬೆಲೆ ಏರಿಕೆ ದೇಶದ ಅಟೋಮೊಬೈಲ್ ಉದ್ದಿಮೆ ಮೇಲೆ ಕೆಟ್ಟ ಪರಿಣಾಮ ಬೀರಬಹುದೆಂಬ ಊಹೆ ಸುಳ್ಳಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಚೇತರಿಕೆ ಕಂಡಿದೆ.

ದೇಶದ ಕಾರು ಉತ್ಪಾದಕರಲ್ಲಿ ಎರಡನೇ ಸ್ಥಾನದಲ್ಲಿರುವ ಹುಂಡೈ ಮೋಟರ್ ಇಂಡಿಯಾ ಕಳೆದ ವರ್ಷದ ಜೂನ್‌ ಹೊತ್ತಿಗೆ 16,335 ಕಾರು ಮಾರಾಟ ಮಾಡಿದ್ದರೆ, ಈ ವರ್ಷ ಇವರೆಗೆ 21,881 ಕಾರು ಮಾರಾಟ ಮಾಡಿ ಶೇ.34ರ ಪ್ರಗತಿ ದಾಖಲಿಸಿದೆ.

ಈ ಕಂಪೆನಿಯ ಕಾರುಗಳ ಒಟ್ಟು ಮಾರಾಟದಲ್ಲಿ 45.3 ಶೇಕಡ ಪ್ರಗತಿ ದಾಖಲಿಸಿದ್ದು 40,182 ಕಾರುಗಳನ್ನು ಮಾರಾಟ ಮಾಡಿದ್ದು ಕಳೆದ ವರ್ಷ ಜೂನ್‌ನ ಹೊತ್ತಿಗೆ 27,653 ಕಾರುಗಳನ್ನು ಮಾರಿತ್ತು.

ದೇಶದ ಮುಂಚೂಣಿ ಕಾರು ಉತ್ಪಾದಕ ಕಂಪೆನಿಯಾಗಿರುವ ಮಾರುತಿ ಸುಜುಕಿ ಇಂಡಿಯಾ 2.22 ಶೇಕಡರ ಅಭಿವೃಧ್ಢಿ ದಾಖಲಿಸಿದ್ದು ಜೂನ್ ಅಂತ್ಯಕ್ಕೆ ಒಟ್ಟಾರೆ 61,247 ವಾಹನ ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಅದು 59,917 ವಾಹನಗಳನ್ನು ಮಾರಿತ್ತು.

ಮಾರುತಿಯ ದೇಶೀಯ ಮಾರಾಟ 0.7 ಶೇಕಡ ಹೆಚ್ಚಗಿದ್ದು 56,411 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಸಮಯಕ್ಕೆ ಅದು 56,000 ಕಾರುಗಳ ಮಾರಾಟ ಮಾಡಿತ್ತು.

ದೇಶದ ಅಗ್ರಗಣ್ಯ ದ್ವಿಚಕ್ರ ಉತ್ಪಾದಕ ಕಂಪೆನಿಯಾಗಿರುವ ಹೀರೊ ಹೊಂಡ ತನ್ನ ಮಾರಾಟದಲ್ಲಿ 16 ಶೇಕಡದ ಪ್ರಗತಿ ಸಾಧಿಸಿದೆ.

ಈ ಜೂನ್ ಅಂತ್ಯಕ್ಕೆ 2,95,675 ಹೀರೊ ಹೊಂಡ ಬೈಕ್ ಮಾರಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 2,55,200 ಬೈಕ್‌ಗಳ ಮಾರಾಟವಾಗಿತ್ತು.

ದ್ವಿಚಕ್ರ ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಬಜಾಜ್ ಅಟೊ 8 ಶೇಕಡ ಪ್ರಗತಿ ಸಾಧಿಸಿದ್ದು ಈ ಜೂನ್ ಅಂತ್ಯಕ್ಕೆ 1,75,903 ಬೈಕ್ ಮಾರಿದೆ.ಕಳೆದ ವರ್ಷ ಇದೇ ಅವಧಿಯಲ್ಲಿ 1,62,730 ಬೈಕ್‌ಗಳನ್ನು ಮಾರಿತ್ತು.
ಮತ್ತಷ್ಟು
ತೆರಿಗೆಗಳ್ಳರ ಆಸ್ತಿ ವಶಕ್ಕೆ ಆದೇಶ
ಗೋಡಾನಿನಲ್ಲಿ ಕೊಳೆತ 10ಲಕ್ಷ ಟನ್ ಆಹಾರ ಧಾನ್ಯ
ಸಾಲಮನ್ನಾ: ಪಿಎಸ್‌ಯು ಬ್ಯಾಂಕ್‌ಗಳಿಗೆ ಚಿದು ಶ್ಲಾಘನೆ
ಬಜೆಟ್ ಮಿತಿಯೊಳಗೆ ಹಣಕಾಸು ಕೊರತೆ: ಚಿದಂಬರಂ
ವಿಮಾನ ಪ್ರಯಾಣ ಮತ್ತಷ್ಟು ತುಟ್ಟಿ ಸಾಧ್ಯತೆ
ಸ್ಟೀಲ್, ಇಂಧನ ಕ್ಷೇತ್ರಗಳ ಉದ್ಯೋಗ ಪ್ರಮಾಣ ಹೆಚ್ಚಳ