ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಸ ತಂತ್ರಜ್ಙಾನ, ಬೀಜಗಳ ಬಳಕೆಗೆ ಚಿದು ಕರೆ  Search similar articles
PTI
ಕೃಷಿಕರು ಮನವರಿ ಕೃಷಿ ಸಂಶೋಧನ ಸಂಸ್ಥೆ ಸಂಶೋಧಿಸಿರುವ ಹೊಸ ತಂತ್ರಜ್ಙಾನ ಮತ್ತು ಬೀಜಗಳನ್ನು ಬಳಸಿ ಕೃಷಿಯನ್ನು ಹೆಚ್ಚು ಲಾಭದಾಯಕ ಮಾಡಿಕೊಳ್ಳುವಂತೆ ಕೇಂದ್ರದ ಹಣಕಾಸು ಮಂತ್ರಿ ಪಿ. ಚಿದಬರಂ ತಮ್ಮ ಜಿಲ್ಲೆಯಾದ ಶಿವಗಂಗದ ರೈತರಿಗೆ ಕರೆ ನೀಡಿದ್ದಾರೆ.

ರೈತರು ಆತ್ಮವಿಶ್ವಾಸದಿಂದ ಹೊಸ ತಂತ್ರಜ್ಙಾನ ಮತ್ತು ಬೀಜಗಳನ್ನು ಬಳಸಿ ಕೃಷಿ ಚಟುವಟಿಕೆ ನಡೆಸಿದಲ್ಲಿ ಲಾಭ ಖಂಡಿತ. ರಾಜ್ಯದ 52 ಶೇಕಡ ಭೂಮಿ ಮಳೆ ರಹಿತ ಭೂಮಿಯಾಗಿದ್ದು ಇದನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ ಆಹಾರೋತ್ಪದನೆಯಲ್ಲಿ ಹೆಚ್ಚಳ ಸಾಧಿಸಬೇಕು ಆ ಗುರಿ ತಲುಪಲು ಈ ಸಂಸ್ಥೆ ಸಹಕಾರಿ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ ಮೂರು ಲಕ್ಷ ಕೋಟಿ ರೂಪಾಯಿಗಳ ಕೃಷಿ ಸಾಲ ನೀಡಲಿದೆ ಎಂದು ತಿಳಿಸಿದ ಹಣಕಾಸು ಸಚಿವರು, ತಮಿಳು ನಾಡು ಸರ್ಕಾರ ನಲವತ್ತು ಕೋಟಿ ರೂಪಾಯಿಗಳ ಬೆಳೆ ವಿಮೆ ಒದಗಿಸಲಿದ್ದು ಇದು ರೈತರಲ್ಲಿ ಚೈತನ್ಯ ತುಂಬಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಈ ಸಂಶೋಧನ ಸಂಸ್ಠೆ ಸ್ಥಾಪಿಸಲು ಕೇಂದ್ರ ಸರ್ಕಾರವು ತಮಿಳು ನಾಡು ಕೃಷಿ ವಿಶ್ವವಿದ್ಯಾಲಯಕ್ಕೆ ಐವತ್ತು ಕೋಟಿ ರೂಪಾಯಿಗಳ
ಧನ ಸಹಾಯ ಮಾಡಿದೆ.
ಮತ್ತಷ್ಟು
ವಿದ್ಯುತ್ ಕಾಮಗಾರಿ ತ್ವರಿತ ಮುಕ್ತಾಯಕ್ಕೆ ಸೂಚನೆ
ಭಾರತ ಬಿಗಿ ಹಣಕಾಸು ನೀತಿ ಅನುಸರಿಸಲಿ: ಐಎಂಎಫ್
ಅಟೋಮೊಬೈಲ್ ಉದ್ದಿಮೆಗೆ ತಟ್ಟದ ಪೆಟ್ರೊಲ್ ಬಿಸಿ
ತೆರಿಗೆಗಳ್ಳರ ಆಸ್ತಿ ವಶಕ್ಕೆ ಆದೇಶ
ಗೋಡಾನಿನಲ್ಲಿ ಕೊಳೆತ 10ಲಕ್ಷ ಟನ್ ಆಹಾರ ಧಾನ್ಯ
ಸಾಲಮನ್ನಾ: ಪಿಎಸ್‌ಯು ಬ್ಯಾಂಕ್‌ಗಳಿಗೆ ಚಿದು ಶ್ಲಾಘನೆ