ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐನಿಂದ 'ಕ್ಯಾಶ್ ಬ್ಯಾಕ್' ಕೊಡುಗೆ  Search similar articles
ಸರಕಾರಿ ವಲಯದ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗಾಗಿ ಹಣ ಮರುಪಾವತಿ ಕೊಡುಗೆ(ಕ್ಯಾಶ್ ಬ್ಯಾಕ್ )ಯನ್ನು ಬುಧವಾರ ಪ್ರಾರಂಭಿಸಿದೆ.

ಈ ಕೊಡುಗೆಯ ಪ್ರಕಾರ, ಎಸ್‌ಬಿಐ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರು ರೂ.501 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದರೆ, ಪಾವತಿಸಿದ ಮೊತ್ತದಲ್ಲಿ ಶೇ.ಐದನ್ನು ಗ್ರಾಹಕರಿಗೆ ಹಿಂತಿರುಗಿಸಲಾಗುತ್ತದೆ ಎಂದು ಬ್ಯಾಂಕ್ ಪ್ರಕಟಣೆಗಳು ತಿಳಿಸಿವೆ.

ರೂ.501ಕ್ಕಿಂತ ಹೆಚ್ಚು ಮತ್ತು ರೂ.5,001ಕ್ಕಿಂತ ಕಡಿಮೆ ಮೊತ್ತದ ಹಣ ಪಾವತಿಗೆ ಶೇ.ಮೂರರಷ್ಟು ಮತ್ತು ರೂ.5001ಕ್ಕಿಂತ ಹೆಚ್ಚು ಹಾಗೂ ರೂ.10,001ಕ್ಕಿಂತ ಕಡಿಮೆ ಮೊತ್ತವನ್ನು ಡೆಬಿಟ್ ಕಾರ್ಡ್ ಮೂಲಕ ಪಾವತಿಸುವ ಗ್ರಾಹಕರಿಗೆ ಶೇ.ನಾಲ್ಕರಷ್ಟು ಹಣವನ್ನು ಹಿಂತಿರುವುಗಿಸಲಾಗುವುದು ಎಂದು ಬ್ಯಾಂಕ್ ಮೂಲಗಳು ಹೇಳಿವೆ.

ಜುಲೈ ಒಂದರಿಂದಲೇ ಈ ಕೊಡುಗೆಯು ಪ್ರಾರಂಭಗೊಂಡಿದ್ದು, ಆಗಸ್ಟ್ 31ಕ್ಕೆ ಅಂತ್ಯಗೊಳ್ಳಲಿದೆ. ಮರುಪಾವತಿ ಮಾಡುವ ಮೊತ್ತವನ್ನು ಗ್ರಾಹಕರ ಖಾತೆಗೆ ಕೊಡುಗೆ ಅಂತ್ಯಗೊಳ್ಳುವ ನಾಲ್ಕರಿಂದ ಆರು ವಾರಗಳ ಮುನ್ನ ಜಮಾ ಮಾಡಲಾಗುವುದು.

ಪ್ರತಿ ಡೆಬಿಟ್ ಕಾರ್ಡ್‌ಗೆ ಮರು ಪಾವತಿ ಮಾಡುವ ಗರಿಷ್ಠ ಮೊತ್ತವು ರೂ.1000 ಆಗಿದೆ ಎಂದು ಬ್ಯಾಂಕ್ ಮೂಲಗಳು ಸ್ಪಷ್ಟಪಡಿಸಿವೆ.
ಮತ್ತಷ್ಟು
ಹೊಸ ತಂತ್ರಜ್ಙಾನ, ಬೀಜಗಳ ಬಳಕೆಗೆ ಚಿದು ಕರೆ
ವಿದ್ಯುತ್ ಕಾಮಗಾರಿ ತ್ವರಿತ ಮುಕ್ತಾಯಕ್ಕೆ ಸೂಚನೆ
ಭಾರತ ಬಿಗಿ ಹಣಕಾಸು ನೀತಿ ಅನುಸರಿಸಲಿ: ಐಎಂಎಫ್
ಅಟೋಮೊಬೈಲ್ ಉದ್ದಿಮೆಗೆ ತಟ್ಟದ ಪೆಟ್ರೊಲ್ ಬಿಸಿ
ತೆರಿಗೆಗಳ್ಳರ ಆಸ್ತಿ ವಶಕ್ಕೆ ಆದೇಶ
ಗೋಡಾನಿನಲ್ಲಿ ಕೊಳೆತ 10ಲಕ್ಷ ಟನ್ ಆಹಾರ ಧಾನ್ಯ