ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾರಲ್‌ಗೆ 144 ಡಾಲರ್‌ಗೇರಿದ ಕಚ್ಛಾತೈಲ ಬೆಲೆ  Search similar articles
ಅಮೆರಿಕ ಕಚ್ಚಾತೈಲ ಸಂಗ್ರಹಣೆಯಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಇಳಿಕೆ ಉಂಟಾದ ಪರಿಣಾಮವಾಗಿ ಮತ್ತು ಇರಾನ್‍ನೊಂದಿಗಿನ ಅಮೆರಿಕದ ಬಿಕ್ಕಟ್ಟಿನ ಕುರಿತಾಗಿ ವ್ಯಾಪಾರಿಗಳಲ್ಲಿ ಉಂಟಾದ ಭೀತಿಯ ಹೆಚ್ಚಳದ ಹಿನ್ನೆಲೆಯಲ್ಲಿ, ಜಾಗತಿಕ ಕಚ್ಛಾತೈಲ ಬೆಲೆಯು ಬ್ಯಾರಲ್‌ಗೆ 144 ಡಾಲರ್‌ಗೆ ಏರುವ ಮೂಲಕ ನೂತನ ದಾಖಲೆ ಸೃಷ್ಟಿಸಿದೆ.

ಆಗಸ್ಟ್ ತಿಂಗಳ ವಿತರಣೆಗಾಗಿ ಇರುವ ಸ್ವೀಟ್ ಲೈಟ್ ಕಚ್ಛಾತೈಲ ಬೆಲೆಯು ನ್ಯೂಯಾರ್ಕ್‌ನ ಮರ್ಚಂಟೈಲ್ ವಿನಿಮಯ ಕೇಂದ್ರದಲ್ಲಿ 144.32 ಡಾಲರ್‌ಗೆ ಏರಿದೆ.
ಲಂಡನ್‌ನ ಬ್ರೆಂಟ್ ಕಚ್ಛಾತೈಲವು 3.59 ಡಾಲರ್‌ಗಳಷ್ಟು ಏರಿಕೆ ಕಂಡು, ಬ್ಯಾರಲ್‌ಗೆ 144.26 ಡಾಲರ್‌ಗೆ ತಲುಪಿದೆ.

ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಭಾರತ ಮತ್ತು ಚೀನಾದ ತೈಲ ಬೆಲೆ ಬೇಡಿಕೆಯಲ್ಲಿನ ಹೆಚ್ಚಳ ಉಂಟಾಗುವುದರೊಂದಿಗೆ, 2002ರ ವೇಳೆಗಿಂತ ಜಾಗತಿಕ ಕಚ್ಛಾತೈಲ ಬೆಲೆಯು ಏಳುಪಟ್ಟು ಏರಿಕೆ ಕಂಡಿದೆ.

ಕಳೆದ ವಾರ ಕಚ್ಛಾತೈಲ ಪೂರೈಕೆಯು ಎರಡು ಮಿಲಿಯನ್ ಬ್ಯಾರಲ್‌ಗಳಷ್ಟು ಇಳಿಕೆಗೊಂಡಿತ್ತು ಎಂದು ಸಮೀಕ್ಷೆಯನ್ನು ಆಧರಿಸಿ ಇಂಧನ ಇಲಾಖೆಯು ಹೇಳಿದೆ.
ಮತ್ತಷ್ಟು
ಎಸ್‌ಬಿಐನಿಂದ 'ಕ್ಯಾಶ್ ಬ್ಯಾಕ್' ಕೊಡುಗೆ
ಹೊಸ ತಂತ್ರಜ್ಙಾನ, ಬೀಜಗಳ ಬಳಕೆಗೆ ಚಿದು ಕರೆ
ವಿದ್ಯುತ್ ಕಾಮಗಾರಿ ತ್ವರಿತ ಮುಕ್ತಾಯಕ್ಕೆ ಸೂಚನೆ
ಭಾರತ ಬಿಗಿ ಹಣಕಾಸು ನೀತಿ ಅನುಸರಿಸಲಿ: ಐಎಂಎಫ್
ಅಟೋಮೊಬೈಲ್ ಉದ್ದಿಮೆಗೆ ತಟ್ಟದ ಪೆಟ್ರೊಲ್ ಬಿಸಿ
ತೆರಿಗೆಗಳ್ಳರ ಆಸ್ತಿ ವಶಕ್ಕೆ ಆದೇಶ