ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಾಯನ್ಸ್-ಎಂಟಿಎನ್: ಮಾತುಕತೆ ಮುಂದುವರಿಕೆ ಸಾಧ್ಯತೆ  Search similar articles
ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಕಮ್ಯುನಿಕೇಶನ್ಸ್ ಮತ್ತು ದಕ್ಷಿಣ ಆಫ್ರಿಕಾದ ಎಂಟಿಎನ್ ನಡುವಿನ ಒಪ್ಪಂದವು ಅಂಬಾನಿ ಸಹೋದರರ ನಡುವಿನ ಕಲಹದಿಂದಾಗಿ ಅಸ್ಥಿರತೆಯಿಂದ ಕೂಡಿರುವುದರೊಂದಿಗೆ, ಒಪ್ಪಂದದ ಕುರಿತಾಗಿ ಪ್ರಾರಂಭಗೊಂಡ 45 ದಿನಗಳ ಮಾತುಕತೆಯನ್ನು ಇನ್ನೂ ಕೆಲವು ವಾರಗಳವರೆಗೆ ಮುಂದುವರಿಸುವ ಸಾಧ್ಯತೆಯಿದೆ ಎಂಬುದಾಗಿ ತಿಳಿದುಬಂದಿದೆ.

ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಧ್ವನಿ ಎತ್ತಿರುವ ಕಾನೂನು ವಿವಾದದ ಕುರಿತಾಗಿ ಎರಡೂ ಕಂಪನಿಗಳ ಹೂಡಿಕೆದಾರರು ಆತಂಕದಲ್ಲಿದ್ದು, ಎರಡೂ ಕಂಪನಿಗಳ ನಿರಂತರ ಶೇರು ಮೌಲ್ಯ ಕುಸಿತವು ಕೂಡಾ ಇದನ್ನೇ ಪ್ರತಿಬಿಂಬಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆಫ್ರಿಕನ್ ಟೆಲಿಕಾಂ ದೈತ್ಯ ಎಂಟಿಎನ್ ಶೇರುಗಳು ಕಳೆದ ಮೂರು ತಿಂಗಳಲ್ಲೇ ಅಧಿಕ ಮಟ್ಟದಲ್ಲಿ ಇಳಿಕೆಗೊಂಡಿದ್ದು, ರಿಲಾಯನ್ಸ್ ಕಮ್ಯುನಿಕೇಶನ್ಸ್ ಶೇರುಗಳು ಕೂಡಾ ಕುಸಿತಗೊಂಡಿವೆ.

ಇಂದಿನ ಶೇರುಪೇಟೆಯ ವಹಿವಾಟಿನಲ್ಲಿ ರಿಲಾಯನ್ಸ್ ಕಮ್ಯುನಿಕೇಶನ್ಸ್ ಶೇರುಗಳು ಶೇ.4.72 ಇಳಿಕೆಗೊಂಡಿದ್ದು, 398.65ಕ್ಕೆ ವಹಿವಾಟು ನಡೆಸುತ್ತಿದೆ.

ಮೇ 26ರಂದು 45 ದಿನಗಳ ಮಾತುಕತೆಯನ್ನು ಎರಡೂ ಕಂಪನಿಗಳು ಪ್ರಾರಂಭಿಸಿದ್ದು, ಈ ಮಾತುಕತೆಯು ಜುಲೈ ಎಂಟರಂದು ಮುಕ್ತಾಯಗೊಳ್ಳಲಿದೆ ಎಂಬುದಾಗಿ ರಿಲಾಯನ್ಸ್ ಕಮ್ಯುನಿಕೇಶನ್ಸ್ ಮತ್ತು ಎಂಟಿಎನ್ ಘೋಷಿಸಿತ್ತು.

ಏನೇ ಆದರೂ, ಮಾತುಕತೆಯಲ್ಲಿ ಈ ವರೆಗಿನ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರ ನೀಡಲು ರಿಲಾಯನ್ಸ್ ಕಮ್ಯುನಿಕೇಶನ್ಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.
ಮತ್ತಷ್ಟು
ಬ್ಯಾರಲ್‌ಗೆ 144 ಡಾಲರ್‌ಗೇರಿದ ಕಚ್ಛಾತೈಲ ಬೆಲೆ
ಎಸ್‌ಬಿಐನಿಂದ 'ಕ್ಯಾಶ್ ಬ್ಯಾಕ್' ಕೊಡುಗೆ
ಹೊಸ ತಂತ್ರಜ್ಙಾನ, ಬೀಜಗಳ ಬಳಕೆಗೆ ಚಿದು ಕರೆ
ವಿದ್ಯುತ್ ಕಾಮಗಾರಿ ತ್ವರಿತ ಮುಕ್ತಾಯಕ್ಕೆ ಸೂಚನೆ
ಭಾರತ ಬಿಗಿ ಹಣಕಾಸು ನೀತಿ ಅನುಸರಿಸಲಿ: ಐಎಂಎಫ್
ಅಟೋಮೊಬೈಲ್ ಉದ್ದಿಮೆಗೆ ತಟ್ಟದ ಪೆಟ್ರೊಲ್ ಬಿಸಿ