ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಧಿಕ ತೈಲಬೆಲೆ ಕಾಲಕ್ಕೆ ಸಿದ್ಧಗೊಂಡಿರಿ: ಅಹ್ಲುವಾಲಿಯಾ  Search similar articles
ಜಾಗತಿಕ ಕಚ್ಛಾತೈಲ ಬೆಲೆಯ ನಿರಂತರ ಏರಿಕೆ ಪ್ರವೃತ್ತಿಯ ಮುಂದುವರಿಕೆಯ ಮುಂದಾಗಿ, ಅಧಿಕ ತೈಲ ಬೆಲೆ ಕಾಲಕ್ಕೆ ದೇಶವು ಸಿದ್ಧವಾಗಿರಬೇಕು ಎಂದು ಯೋಜನಾ ಆಯೋಗವು ಕರೆ ನೀಡಿದೆ.

ಅಧಿಕ ತೈಲ ಬೆಲೆ ಕಾಲದತ್ತ ದೇಶವು ಸಾಗಬೇಕಾಗಿದೆ ಎಂದು ಯೋಜನಾ ಆಯೋಗದ ಮುಖ್ಯಸ್ಥ ಮಾಂಟೆಕ್ ಸಿಂಗ್ ಆಹ್ಲುವಾಲಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏನೇ ಆದರೂ, ಕಚ್ಛಾತೈಲ ಬೆಲೆ ಏರಿಕೆ ಮತ್ತು ಹಣದುಬ್ಬರ ವರ್ಧನೆಯಿಂದಾಗಿ ಆರ್ಥಿಕ ಅಭಿವೃದ್ಧಿಯ ಪ್ರಮಾಣವು ಶೇ.ಎಂಟಕ್ಕೆ ಇಳಿಕೆಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹದಿಮೂರು ವರ್ಷಗಳಲ್ಲೇ ಅಧಿಕ ಮಟ್ಟದಲ್ಲಿ ಏರಿಕೆ ಕಂಡಿರುವ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಸರಕಾರವು ಜೂನ್ ಐದರಂದು ಇಂಧನ ಬೆಲೆಯನ್ನು ಹೆಚ್ಚುಗೊಳಿಸಿತ್ತು.

ಈ ನಡುವೆ, ರಖಂ ತೈಲ ಬೆಲೆಯನ್ನು ಅಕ್ಟೋಬರ್ ತಿಂಗಳ ಮೊದಲು ಪರಿಶೀಲನೆ ನಡೆಸಲಾಗುವುದು ಎಂದು ಸರಕಾರವು ತಿಳಿಸಿದ್ದು, ಅಕ್ಟೋಬರ್ ತಿಂಗಳ ಮುನ್ನ ಯಾವುದೇ ಪರಿಶೀಲನೆಯನ್ನು ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮತ್ತಷ್ಟು
ಸ್ಟೀಲ್ ಬೆಲೆ ಶೇ.10ರಷ್ಟು ಇಳಿಕೆ
ಅಕ್ಟೋಬರ್‌ನಲ್ಲಿ ತೈಲಬೆಲೆ ಪರಿಶೀಲನೆ: ಸರಕಾರ
ರಿಲಾಯನ್ಸ್-ಎಂಟಿಎನ್: ಮಾತುಕತೆ ಮುಂದುವರಿಕೆ ಸಾಧ್ಯತೆ
ಬ್ಯಾರಲ್‌ಗೆ 144 ಡಾಲರ್‌ಗೇರಿದ ಕಚ್ಛಾತೈಲ ಬೆಲೆ
ಎಸ್‌ಬಿಐನಿಂದ 'ಕ್ಯಾಶ್ ಬ್ಯಾಕ್' ಕೊಡುಗೆ
ಹೊಸ ತಂತ್ರಜ್ಙಾನ, ಬೀಜಗಳ ಬಳಕೆಗೆ ಚಿದು ಕರೆ