ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಬ್ಬರಿಸಿದ ಹಣದುಬ್ಬರ: ಶೇ.11.63ಕ್ಕೆ ಏರಿಕೆ  Search similar articles
ದೇಶದ ಸಗಟು ಬೆಲೆ ಆಧಾರಿತ ಹಣದುಬ್ಬರವು ಜೂನ್ 21ಕ್ಕೆ ಕೊನೆಗೊಂಡ ವಾರದಲ್ಲಿ ಶೇ.11.63ರಷ್ಟು ಏರಿಕೆ ಕಂಡಿದ್ದು, ಕಳೆದ ವಾರಕ್ಕಿಂತ ಶೇ.0.21ರಷ್ಟು ಹೆಚ್ಚಳ ಉಂಟಾಗುವ ಮೂಲಕ ಬೆಲೆ ಏರಿಕೆ ಬಿಸಿ ಇನ್ನಷ್ಟು ಕಾವೇರಿದಂತಾಗಿದೆ.

ಕಳೆದ ವಾರ ಹಣದುಬ್ಬರ ಪ್ರಮಾಣವು ಶೇ.11.42ರಷ್ಟಿದ್ದು, ಹಣದುಬ್ಬರವು ಶೇ.13ರವರೆಗೆ ತಲುಪಲಿದೆ ಎಂದು ಹಣಕಾಸು ಸಚಿವ ಚಿದಂಬರಂ ಈ ಮೊದಲೇ ಊಹಿಸಿದ್ದರು.

ರಾಸಾಯನಿ ಉತ್ಪನ್ನಗಳು, ಯಂತ್ರ , ಆಹಾರ ಉತ್ಪನ್ನಗಳು ಮತ್ತು ಚಹಾ ಮುಂತಾದವುಗಳ ಬೆಲೆ ಏರಿಕೆಯು ಹಣದುಬ್ಬರ ಏರಿಕೆಗೆ ಮುಖ್ಯ ಕಾರಣವಾಗಿದೆ ಎಂಬುದಾಗಿ ತಿಳಿದುಬಂದಿದೆ.

ಅಲ್ಲದೆ, ಪ್ರಾಥಮಿಕ ಉತ್ಪನ್ನಗಳಾದ ಹಾಲು, ಮೀನು, ಹತ್ತಿ, ಕಬ್ಬಿಣ ಮತ್ತು ಸ್ಟೀಲ್ ಉತ್ಪನ್ನಗಳ ಬೆಲೆ ಏರಿಕೆಯು ಕೂಡಾ ಹಣದುಬ್ಬರ ವರ್ಧನೆಗೆ ಪುಷ್ಠಿ ನೀಡಿವೆ ಎಂದು ಸರಕಾರಿ ಮೂಲಗಳು ಹೇಳಿವೆ.

ಹಣದುಬ್ಬರ ನಿಯಂತ್ರಣವು ಅಲ್ಪಾವಧಿಯ ಸವಾಲಾಗಿದ್ದು, ಇದನ್ನು ಸರಿಯಾಗಿ ನಿಭಾಯಿಸಿದಲ್ಲಿ ಸರಾಸರಿ ಶೇ.9ರಷ್ಟು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ತಿಳಿಸಿದ್ದರು.

ಹಣದುಬ್ಬರ ನಿಯಂತ್ರಣಕ್ಕಾಗಿ ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ ರೇಪೋ ದರ ಹಾಗೂ ನಗದು ಮೀಸಲು ಪ್ರಮಾಣವನ್ನು ಶೇ.0.50ರಷ್ಟು ಏರಿಕೆಗೊಳಿಸಿತ್ತು. ಇದರ ಫಲವಾಗಿ ಎಲ್ಲಾ ಬ್ಯಾಂಕುಗಳೂ ಸಾಲ ಬಡ್ಡಿದರವನ್ನು ಏರಿಸಿದ್ದವು.
ಮತ್ತಷ್ಟು
ಅಧಿಕ ತೈಲಬೆಲೆ ಕಾಲಕ್ಕೆ ಸಿದ್ಧಗೊಂಡಿರಿ: ಅಹ್ಲುವಾಲಿಯಾ
ಸ್ಟೀಲ್ ಬೆಲೆ ಶೇ.10ರಷ್ಟು ಇಳಿಕೆ
ಅಕ್ಟೋಬರ್‌ನಲ್ಲಿ ತೈಲಬೆಲೆ ಪರಿಶೀಲನೆ: ಸರಕಾರ
ರಿಲಾಯನ್ಸ್-ಎಂಟಿಎನ್: ಮಾತುಕತೆ ಮುಂದುವರಿಕೆ ಸಾಧ್ಯತೆ
ಬ್ಯಾರಲ್‌ಗೆ 144 ಡಾಲರ್‌ಗೇರಿದ ಕಚ್ಛಾತೈಲ ಬೆಲೆ
ಎಸ್‌ಬಿಐನಿಂದ 'ಕ್ಯಾಶ್ ಬ್ಯಾಕ್' ಕೊಡುಗೆ