ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸದ್ಯದಲ್ಲೇ 3ಜಿ, ವಿಮಾಕ್ಸ್ ಸಲಹಾಸೂತ್ರ  Search similar articles
ವಿಮಾಕ್ಸ್ ಮತ್ತು 3ಜಿಗಳಿಗೆ ಸಲಹಾಸೂತ್ರವನ್ನು ಸರಕಾರವು ಸದ್ಯದಲ್ಲಿಯೇ ಘೋಷಿಸಲಿದ್ದು, ಬ್ಲಾಕ್‌ಬೆರಿ ನೆಟ್ವರ್ಕಿಂಗ್ ಸಂಪರ್ಕದ ಕುರಿತಾದ ರಕ್ಷಣಾ ಆತಂಕವನ್ನು ಪರಿಹರಿಸಲು ಮೂರನೇ ಪಕ್ಷದ ಸಹಾಯ ಪಡೆಯುವುದಾಗಿ ತಿಳಿಸಿದೆ.

3ಜಿ ಸಲಹಾಸೂತ್ರವನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಇದಕ್ಕೆ ಹಣಕಾಸು ಸಚಿವಾಲಯದಿಂದ ಕೆಲವು ಅಂಶ ಸೇರ್ಪಡೆಯ ಆವಶ್ಯಕತೆಯಿದೆ. ನಂತರ ಸಲಹಾಸೂತ್ರವನ್ನು ಟೆಲಿಕಾಂ ಆಯೋಗಕ್ಕೆ ಕಳುಹಿಸಲಾಗುವುದು ಎಂದು ಟೆಲಿಕಾಂ ಸಚಿವ ಎ.ರಾಜ ತಿಳಿಸಿದ್ದಾರೆ.

ಬ್ಲಾಕ್‍‌ಬೆರಿ ಸೇವೆಯನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ಆದರೆ,ಬ್ಲಾಕ್‌ಬೆರಿ ರಕ್ಷಣಾ ಕುರಿತಾಗಿ ಆತಂಕವಿದೆ. ವಿಸ್ತೃತವಾಗಿ ಬ್ಲಾಕ್‌ಬೆರಿ‌ಗೆ ರಕ್ಷಣಾ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಬ್ಲಾಕ್‌ಬೆರಿ ವಿಚಾರದ ಕುರಿತಾಗಿ ಅವರು ಪ್ರತಿಕ್ರಯಿಸಿದ್ದರು.

ಬ್ಲಾಕ್‌ಬೆರಿ ರಕ್ಷಣಾ ಪರಿಹಾರದ ಕುರಿತಾಗಿ ಬ್ಲಾಕ್‌ಬೆರಿ ಪರವಾನಗಿ ಸಂಸ್ಥೆ ರಿಮ್‌ನೊಂದಿಗೆ ಮಾತುಕತೆ ನಡೆಸಲಾಗುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಿಮ್ ಕೆಲವು ಪರಿಹಾರಗಳನ್ನು ತಿಳಿಸುತ್ತಿದೆ. ಇದರೊಂದಿಗೆ, ಇತರ ಕಂಪನಿಗಳಿಂದ ಬೇರೆ ಪರಿಹಾರಗಳನ್ನು ಸರಕಾರವು ಕಂಡುಕೊಳ್ಳುತ್ತಿದೆ ಎಂಬುದಾಗಿ ಉತ್ತರಿಸಿದರು.
ಮತ್ತಷ್ಟು
ಉಬ್ಬರಿಸಿದ ಹಣದುಬ್ಬರ: ಶೇ.11.63ಕ್ಕೆ ಏರಿಕೆ
ಅಧಿಕ ತೈಲಬೆಲೆ ಕಾಲಕ್ಕೆ ಸಿದ್ಧಗೊಂಡಿರಿ: ಅಹ್ಲುವಾಲಿಯಾ
ಸ್ಟೀಲ್ ಬೆಲೆ ಶೇ.10ರಷ್ಟು ಇಳಿಕೆ
ಅಕ್ಟೋಬರ್‌ನಲ್ಲಿ ತೈಲಬೆಲೆ ಪರಿಶೀಲನೆ: ಸರಕಾರ
ರಿಲಾಯನ್ಸ್-ಎಂಟಿಎನ್: ಮಾತುಕತೆ ಮುಂದುವರಿಕೆ ಸಾಧ್ಯತೆ
ಬ್ಯಾರಲ್‌ಗೆ 144 ಡಾಲರ್‌ಗೇರಿದ ಕಚ್ಛಾತೈಲ ಬೆಲೆ