ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ವಿಮಾನ ಸಾರಿಗೆ ಲಾಭದಾಯಕವಾಗಿದೆ: ಕೆಪಿಎಂಜಿ  Search similar articles
indiaprwire
ಜಾಗತಿಕ ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ವಿಮಾನ ಇಂಧನದ ಬೆಲೆ ಹೆಚ್ಚಳಗೊಂಡರೂ, ಭಾರತದ ಏರ್‌ಲೈನ್‌ಗಳು ಸೇವಾ ದಕ್ಷತೆ, ಅಭಿವೃದ್ಧಿ ಪ್ರಕ್ರಿಯೆ ಮುಂತಾದವುಗಳ ವಿಚಾರದಲ್ಲಿ ಹೆಚ್ಚು ಗಮನ ಹರಿಸಿದಲ್ಲಿ, ಭಾರತದ ಏರ್‌ಲೈನ್ಸ್‌ಗಳು ಲಾಭದಾಯಕವಾಗಿಯೇ ಮುಂದುವರಿಯಬಹುದು ಎಂಬುದಾಗಿ ವಿಮಾನಯಾನ ಉದ್ಯಮದ ವಿಶ್ಲೇಷಕ ಕೆಪಿಎಂಜಿ ಅಭಿಪ್ರಾಯಪಟ್ಟಿದೆ.

ಭಾರತದ ವಿಮಾನ ಸಾರಿಗೆಯು ಕೇವಲ ಅಂಕಿಅಂಶವಾಗಿರುವುದಿಲ್ಲ ಆದರೆ, ಜೀವನದ ಪ್ರತಿ ಹಾದಿಯಲ್ಲಿಯೂ ಜನರು ಪ್ರಯಾಣವನ್ನು ಬಯಸುತ್ತಾರೆ ಯಾಕೆಂದರೆ, ವಿಶ್ವ ಹತ್ತಿರವಾಗುತ್ತಿರುವುದು ಮಾತ್ರವೇ ಅಲ್ಲ ಗುಣಮಟ್ಟ ಮತ್ತು ಉತ್ಪಾದಕತೆಯು ಗಮನಾರ್ಹವಾಗತೊಡಗಿದೆ ಎಂಬುದಾಗಿ ಕೆಪಿಎಂಜಿ ಬಿಡುಗಡೆಗೊಳಿಸಿದ 'ಪ್ರಕ್ಷುಬ್ಧತೆಯ ಮೂಲಕ ಹಾರುತ್ತಿರುವ ಭಾರತೀಯ ವಿಮಾನಯಾನ' ಎಂಬ ಶೀರ್ಷಿಕೆಯ ವರದಿಗಳು ತಿಳಿಸಿವೆ.

ಆರ್ಥಿಕ ಹಿಂಜರಿತ, ಭಯೋತ್ಪಾದನೆ, ನೀತಿಯಲ್ಲಿನ ವ್ಯತ್ಯಾಸ ಹಾಗೂ ಬದಲಾವಣೆ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆ ಮುಂತಾದವುಗಳು ಜಾಗತಿಕ ಮತ್ತು ಭಾರತದ ವಾಯುಸಾರಿಗೆ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿದೆಯೇ ಹೊರತು ತೈಲಬೆಲೆಯಲ್ಲ ಎಂದು ಈ ವರದಿಗಳು ಸ್ಪಷ್ಟಪಡಿಸಿವೆ.

ಎಟಿಎಫ್ ಬೆಲೆ ಏರಿಕೆಯು ಕೂಡಾ ಏರ್‌ಲೈನ್ ಆದಾಯದ ಮೇಲೆ ಪರಿಣಾಮ ಬೀರಿದರೂ, ಪ್ರಸಕ್ತ ಭಾರತದ ಯಾವುದೇ ಏರ್‌ಲೈನ್‌ಗಳಿಗೆ ಕಾರ್ಯನಿರ್ವಹಣೆ ಪ್ರಾರಂಭಗೊಂಡ ಮೂರು ವರ್ಷಗಳೊಳಗೆ ಲಾಭ ಗಳಿಸಲು ಸಾಧ್ಯವಿಲ್ಲ ಎಂದು ಕೆಪಿಎಂಜಿ ವಿಶ್ಲೇಷಣೆಯು ಅಭಿಪ್ರಾಯಪಟ್ಟಿದೆ.

ಪ್ರಸಕ್ತ ವಿಮಾನಯಾನ ಉದ್ಯಮವು ಅತ್ಯಂತ ಸಂಕೀರ್ಣ ಉದ್ಯಮವಾಗಿದ್ದು, ಇದರ ಲಾಭಾಂಶ, ಆದಾಯ ಮತ್ತು ಪರಿಣಾಮಗಳು ಆರ್ಥಿಕ ಮತ್ತು ಬಾಹ್ಯ ಅಂಶಗಳನ್ನು ಅವಲಂಬಿಸಿದ್ದು, ಆರ್ಥಿಕ ಅಭಿವೃದ್ಧಿ ದರದಲ್ಲಿನ ವಿಭಿನ್ನತೆ, ರಾಷ್ಟ್ರೀಯ ದುರಂತ, ಸಾಂಕ್ರಾಮಿಕ ರೋಗ, ಭಯೋತ್ಪಾದನೆ, ತೈಲಬೆಲೆ ಹಾಗೂ ಕರೆನ್ಸಿ ವಿನಿಮಯದ ದರಗಳಲ್ಲಿನ ಬದಲಾವಣೆಗಳು ಕೂಡಾ ಈ ಉದ್ಯಮದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ ಎಂದು ಕೆಪಿಎಂಜಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್.ಬಿ.ಬಾಟ್ರಾ ತಿಳಿಸಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ(2007-08) ಭಾರತದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಾಯುಸಾರಿಗೆಯ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಿದ್ದು, ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.15ರಷ್ಟು ಹೆಚ್ಚಳ ಉಂಟಾದರೆ, ದೇಶೀಯ ವಿಮಾನದ ಪ್ರಯಾಣಿಕರ ಸಂಖ್ಯೆಯು ಶೇ.23.8ರಷ್ಟು ವರ್ಧಿಸಿದೆ. ಇದು ಏರ್‍‌ಲೈನ್ಸ್ ಉದ್ಯಮದ ಮೇಲ್ಮುಖ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ.

ದೇಶೀಯ ಮತ್ತು ಅಂತಾರಾಷ್ಟ್ರೀಯ ವಾಯು ಸಾರಿಗೆ ಪ್ರಯಾಣಿಕರ ಸಂಖ್ಯೆಯಲ್ಲಿನ ಹೆಚ್ಚಳವು ವಿಮಾನ ನಿಲ್ದಾಣಗಳ ಸಾಮರ್ಥ್ಯ, ಪರಸ್ಪರ ಸಂಪರ್ಕ ಮುಂತಾದವುಗಳಿಂದಾಗಿದೆ. ತೈಲ ಬೆಲೆ ಏರಿಕೆಯಿಂದಾಗಿ ವಿಮಾನ ಸಂಸ್ಥೆಗಳು ವಿಮಾನ ದರವನ್ನು ಏರಿಸಿದರೂ, ಟಯರ್ II ಮತ್ತು ಟಯರ್ III ನಗರಗಳ ಪ್ರಯಾಣಿಕರ ಸಂಖ್ಯೆಯಲ್ಲಿನ ಹೆಚ್ಚಳವು ವಿಮಾನ ಪ್ರಯಾಣವನ್ನು ಜನ ದುಬಾರಿಯಾಗಿ ಪರಿಗಣಿಸದೆ ಇದೊಂದು ಭರವಸೆಯೋಗ್ಯ ಸಾರಿಗೆ ವಿಧಾನ ಎಂಬುದಾಗಿ ತಿಳಿದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂಬುದನ್ನು ಈ ವರದಿಯು ಸೂಚಿಸಿದೆ.

(ಇಂಡಿಯಾ ಪಿಆರ್‌ವೈರ್ (indiaprwire.com) ಮೂಲಕ ಪ್ರಕಟಣೆ)
ಮತ್ತಷ್ಟು
ಸದ್ಯದಲ್ಲೇ 3ಜಿ, ವಿಮಾಕ್ಸ್ ಸಲಹಾಸೂತ್ರ
ಉಬ್ಬರಿಸಿದ ಹಣದುಬ್ಬರ: ಶೇ.11.63ಕ್ಕೆ ಏರಿಕೆ
ಅಧಿಕ ತೈಲಬೆಲೆ ಕಾಲಕ್ಕೆ ಸಿದ್ಧಗೊಂಡಿರಿ: ಅಹ್ಲುವಾಲಿಯಾ
ಸ್ಟೀಲ್ ಬೆಲೆ ಶೇ.10ರಷ್ಟು ಇಳಿಕೆ
ಅಕ್ಟೋಬರ್‌ನಲ್ಲಿ ತೈಲಬೆಲೆ ಪರಿಶೀಲನೆ: ಸರಕಾರ
ರಿಲಾಯನ್ಸ್-ಎಂಟಿಎನ್: ಮಾತುಕತೆ ಮುಂದುವರಿಕೆ ಸಾಧ್ಯತೆ