ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕ್ ಆಫ್ ರಾಜಸ್ಥಾನದಿಂದ ಬಿಪಿಎಲ್ಆರ್ ಏರಿಕೆ  Search similar articles
indiaprwire
ಪ್ರಮುಖ ತಂತ್ರಜ್ಞಾನ ಚಾಲಿತ ಖಾಸಗಿ ವಲಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ರಾಜಸ್ಥಾನ್, ತನ್ನ ಬಿಪಿಎಲ್ಆರ್ ಮತ್ತು ಸಾವಧಿ ಠೇವಣಿ ದರವನ್ನು ಏರಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೇಪೋ ದರ ಮತ್ತು ನಗದು ಮೀಸಲು ಪ್ರಮಾಣವನ್ನು ಏರಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ರಾಜಸ್ಥಾನ್ ಕಳೆದ 15 ತಿಂಗಳಲ್ಲಿ ಮೊದಲ ಬಾರಿಗೆ ಶೇ.0.50ರಷ್ಟು ಬಿಪಿಎಲ್ಆರ್‌ನ್ನು ಏರಿಕೆಗೊಳಿಸಿದೆ.

ಬಿಪಿಎಲ್ಆರ್ ಏರಿಕೆಯೊಂದಿಗೆ, ಬ್ಯಾಂಕ್ ಆಫ್ ರಾಜಸ್ಥಾನ ತನ್ನ 'ಅಪ್ನಾ ಘರ್ ಸ್ಕೀಂ' ನ ಬಡ್ಡಿದರವನ್ನೂ ಕೂಡಾ ಏರಿಕೆಗೊಳಿಸಿರುವುದಾಗಿ ಬ್ಯಾಂಕ್ ಮೂಲಗಳು ತಿಳಿಸಿವೆ.

ಬ್ಯಾಂಕ್ ಆಫ್ ರಾಜಸ್ಥಾನ್‌ನ ಸುಮಾರು ಎರಡು ದಶಲಕ್ಷಕ್ಕೂ ಅಧಿಕ ನಂಬಿಕಸ್ಥ ಗ್ರಾಹಕರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ, ಬಿಒಆರ್, ಸಾವಧಿ ಠೇವಣಿ ಬಡ್ಡಿದರವನ್ನು ಹೆಚ್ಚಳಗೊಳಿಸಿರುವುದಾಗಿ ಘೋಷಿಸಿದ್ದು, ಇದರ ಮೂಲಕ, ಗ್ರಾಹಕರಿಗೆ ಲಾಭ ಉಂಟಾಗುವಲ್ಲಿ ಬ್ಯಾಂಕ್ ಬದ್ಧವಾಗಿದೆ ಎಂಬುದನ್ನು ಸಾಬೀತುಪಡಿಸಿದೆ.

1943ರಲ್ಲಿ ಸ್ಥಾಪನೆಗೊಂಡ ಬ್ಯಾಂಕ್ ಆಫ್ ರಾಜಸ್ಥಾನ್, ಅತಿ ವೇಗವಾಗಿ ಬೆಳೆಯುತ್ತಿರುವ ಖಾಸಗಿ ವಲಯ ಬ್ಯಾಂಕ್ ಆಗಿದ್ದು, ದೇಶದಾದ್ಯಂತ ಸುಮಾರು 286 ನಗರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ ಅದರಲ್ಲಿ ಕೇವಲ ರಾಜಸ್ಥಾನದಲ್ಲೇ 125 ಶಾಖೆಗಳಿವೆ. ಅಲ್ಲದೆ, ಸುಮಾರು ಎರಡು ದಶಲಕ್ಷ ಗ್ರಾಹಕರನ್ನು ಒಳಗೊಂಡಿದ್ದು, ಎಲ್ಲಾ ಗ್ರಾಹಕರಿಗೆ ಎಟಿಎಂ ಸೌಲಭ್ಯವನ್ನೂ ಬ್ಯಾಂಕ್ ನೀಡಿದೆ.
ಮತ್ತಷ್ಟು
ಭಾರತದ ವಿಮಾನ ಸಾರಿಗೆ ಲಾಭದಾಯಕವಾಗಿದೆ: ಕೆಪಿಎಂಜಿ
ಸದ್ಯದಲ್ಲೇ 3ಜಿ, ವಿಮಾಕ್ಸ್ ಸಲಹಾಸೂತ್ರ
ಉಬ್ಬರಿಸಿದ ಹಣದುಬ್ಬರ: ಶೇ.11.63ಕ್ಕೆ ಏರಿಕೆ
ಅಧಿಕ ತೈಲಬೆಲೆ ಕಾಲಕ್ಕೆ ಸಿದ್ಧಗೊಂಡಿರಿ: ಅಹ್ಲುವಾಲಿಯಾ
ಸ್ಟೀಲ್ ಬೆಲೆ ಶೇ.10ರಷ್ಟು ಇಳಿಕೆ
ಅಕ್ಟೋಬರ್‌ನಲ್ಲಿ ತೈಲಬೆಲೆ ಪರಿಶೀಲನೆ: ಸರಕಾರ