ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
30 ಆವಶ್ಯಕ ಉತ್ಪನ್ನಗಳ ಬೆಲೆ ಇಳಿಮುಖ: ಸರಕಾರ  Search similar articles
ಗಗನಕ್ಕೇರುತ್ತಿರುವ ಬೆಲೆ ಏರಿಕೆ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಅತ್ಯಂತ ಟೀಕೆಯನ್ನು ಸರಕಾರವು ಎದುರಿಸುತ್ತಿರುವುದರೊಂದಿಗೆ, ಹಣದುಬ್ಬರವು ಶೇ.11.63ಕ್ಕೆ ಏರಿಕೆಗೊಂಡಿದ್ದರೂ, ಜೂನ್ 21ಕ್ಕೆ ಅಂತ್ಯಗೊಂಡ ವಾರದಲ್ಲಿ 30 ಆವಶ್ಯಕ ಉತ್ಪನ್ನಗಳ ಬೆಲೆಯಲ್ಲಿ ಇಳಿಮುಖ ಉಂಟಾಗಿದೆ ಎಂದು ಸರಕಾರಿ ಪ್ರಕಟಣೆಗಳು ತಿಳಿಸಿವೆ.

ಕಳೆದ ವಾರ ಶೇ.11.42ರಷ್ಟಿದ್ದ ಹಣದುಬ್ಬರವು, ಶೇ.11.63ಕ್ಕೆ ಏರಿಕಗೊಂಡಿರುವ ಬಗ್ಗೆ ಹಣಕಾಸು ಸಚಿವ ಪಿ.ಚಿದಂಬರಂ ಅವರು ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, 30 ಆವಶ್ಯಕ ಉತ್ಪನ್ನಗಳನ್ನು ಆಧರಿಸಿ ಜೂನ್ 21ಕ್ಕೆ ಅಂತ್ಯಗೊಂಡ ವಾರದಲ್ಲಿ ಹಣದುಬ್ಬರವು ಶೇ.5.89ರಷ್ಟಿದ್ದು, ಕಳೆದ ವಾರದ ಶೇ.6.55ಕ್ಕೆ ಹೋಲಿಸಿದರೆ, ಬೆಲೆಯಲ್ಲಿ ಇಳಿಕೆ ಉಂಟಾಗಿದೆ ಎಂಬುದಾಗಿ ಸ್ಪಷ್ಟಪಡಿಸಿದೆ.

ಆಹಾರ ಧಾನ್ಯ, ಬೇಳೆಕಾಳು, ಖಾದ್ಯತೈಲ, ತರಕಾರಿಗಳು, ಡೈರಿ ಉತ್ಪನ್ನಗಳು, ಚಹಾ, ಸಕ್ಕರೆ, ಉಪ್ಪು ಮತ್ತು ಕೆರೋಸಿನ್, ಸೋಪ್, ಬೆಂಕಿಕಡ್ಡಿ, ಧೋತಿ ಹಾಗೂ ಸೀರೆಗಳು ಸೇರದಂತೆ ಇತರ ಉತ್ಪನ್ನಗಳ ಬೆಲೆಯಲ್ಲಿ ಗಣನೀಯ ಇಳಿಕೆ ಉಂಟಾಗಿದೆ ಎಂದು ಸರಕಾರಿ ಹೇಳಿಕೆಗಳು ತಿಳಿಸಿವೆ.

ಕಚ್ಛಾತೈಲ, ಕಬ್ಬಿಣದ ಅದಿರು ಮತ್ತು ಸ್ಟೀಲ್ ಉತ್ಪನ್ನಗಳ ಬೆಲೆಗಳ ಏರಿಕೆಯು ಮುಖ್ಯವಾಗಿ ಹಣದುಬ್ಬರ ವರ್ಧನೆಗೆ ಕಾರಣವಾಗಿದೆ ಎಂದು ಹಣಕಾಸು ಸಚಿವಾಲಯವು ಹಣದುಬ್ಬರ ಏರಿಕೆಯ ಕುರಿತಾಗಿ ಪ್ರತಿಕ್ರಯಿಸಿದೆ.
ಮತ್ತಷ್ಟು
ಬ್ಯಾಂಕ್ ಆಫ್ ರಾಜಸ್ಥಾನದಿಂದ ಬಿಪಿಎಲ್ಆರ್ ಏರಿಕೆ
ಭಾರತದ ವಿಮಾನ ಸಾರಿಗೆ ಲಾಭದಾಯಕವಾಗಿದೆ: ಕೆಪಿಎಂಜಿ
ಸದ್ಯದಲ್ಲೇ 3ಜಿ, ವಿಮಾಕ್ಸ್ ಸಲಹಾಸೂತ್ರ
ಉಬ್ಬರಿಸಿದ ಹಣದುಬ್ಬರ: ಶೇ.11.63ಕ್ಕೆ ಏರಿಕೆ
ಅಧಿಕ ತೈಲಬೆಲೆ ಕಾಲಕ್ಕೆ ಸಿದ್ಧಗೊಂಡಿರಿ: ಅಹ್ಲುವಾಲಿಯಾ
ಸ್ಟೀಲ್ ಬೆಲೆ ಶೇ.10ರಷ್ಟು ಇಳಿಕೆ