ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಲೆ ಏರಿಕೆ: ಯುಪಿಎ ಸರಕಾರದಿಂದ ಜಾಹೀರಾತು ಅಭಿಯಾನ  Search similar articles
ಲೋಕಸಭಾ ಚುನಾವಣೆ ಹತ್ತಿರು ಬರುತ್ತಿರುವಂತೆಯೇ, ತೀವ್ರ ಬೆಲೆ ಏರಿಕೆಯ ಸಮಸ್ಯೆಯಿಂದ ತತ್ತರಿಸು ಹೋಗಿರುವ ಯುಪಿಎ ಕೇಂದ್ರ ಸರಕಾರವು, ದೇಶದ ಹಣದುಬ್ಬರವು ಇತರ ದೇಶಗಳಲ್ಲಿ ಪರಿಣಾಮ ಬೀರಿದಷ್ಟು ಭಾರತದಲ್ಲಿ ಬೀರಿಲ್ಲ ಎಂಬುದನ್ನು ದೇಶದ ಜನತೆಗೆ ಸ್ಪಷ್ಟಪಡಿಸುವ ನಿಟ್ಟಿನಲ್ಲಿ ಯುಪಿಎ ಸರಕಾರವು ಸದ್ಯದಲ್ಲಿಯೇ ಜಾಹೀರಾತು ಅಭಿಯಾನವನ್ನು ಪ್ರಾರಂಭಿಸಲಿದೆ.

ಮುದ್ರಣ ಮತ್ತು ಟೆಲಿವಿಷನ್ ಜಾಹೀರಾತು ಸೇರಿದಂತೆ ಮಾಧ್ಯಮ ಜಾಹೀರಾತನ್ನು ಅನಾವರಣಗೊಳಿಸುವ ನಿರ್ಧಾರವನ್ನು ಕೈಗೊಳ್ಳಲು ಜುಲೈ ಎರಡರಂದು ಕಾರ್ಯದರ್ಶಿಗಳ ಸಮಿತಿಯು ಸಭೆ ನಡೆಸಿತ್ತು ಎಂಬುದನ್ನು ಮೂಲಗಳು ತಿಳಿಸಿವೆ.

ಸ್ಟೀಲ್, ಆಹಾರ, ವಾಣಿಜ್ಯ, ರಸಗೊಬ್ಬರ, ಗ್ರಾಹಕ ವ್ಯವಹಾರ,ಉದ್ಯಮ ನೀತಿ ಮುಂತಾದ ಇಲಾಖೆಗಳಿಗೆ ಸೂಕ್ತ ಮಾಧ್ಯಮ ಜಾಹೀರಾತು ಮತ್ತು ಟಿವಿ ಕಮರ್ಶಿಯಲ್‌ಗಳನ್ನು ಸಿದ್ಧಪಡಿಸುವಂತೆ ಸಂಸತ್ತು ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಅವರ ನೇತೃತ್ವದ ಕಾರ್ಯದರ್ಶಿಗಳ ಸಮಿತಿಯು ಕರೆ ನೀಡಿದೆ.

ಭಾರತ ಮತ್ತು ಇತರ ದೇಶಗಳಾದ ಪಾಕಿಸ್ತಾನ, ಚೀನಾ, ಶ್ರೀಲಂಕಾ, ವಿಯೆಟ್ನಾಂ ಮತ್ತು ಇಂಡೋನೇಶಿಯಾ ರಾಷ್ಟ್ರಗಳೊಂದಿಗೆ ಭಾರತದ ಬೆಲೆ ಏರಿಕೆಯ ಹೋಲಿಕೆಗಳ ಅಂಕಿಅಂಶಗಳನ್ನು ಈ ಜಾಹೀರಾತು ಅಭಿಯಾನವು ಪ್ರಕಟಿಸಲಿದೆ.

ಮುಂದಿನ ಹತ್ತು ತಿಂಗಳಲ್ಲಿ ಏಳು ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯು ನಡೆಯಲಿದ್ದು, ಕರ್ನಾಟಕ, ಉತ್ತರಖಾಂಡ್, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ಈಗಾಗಲೇ ಕಾಂಗ್ರೆಸ್ ಸೋತುಹೋಗಿದೆ. ಕರ್ನಾಟಕ ಚುನಾವಣೆ ಪ್ರಚಾರದಲ್ಲಿ ಬೆಲೆ ಏರಿಕೆಯನ್ನು ಬಿಜೆಪಿಯು ಕೇಂದ್ರಬಿಂದುವಾಗಿರಿಸಿತ್ತು.
ಮತ್ತಷ್ಟು
30 ಆವಶ್ಯಕ ಉತ್ಪನ್ನಗಳ ಬೆಲೆ ಇಳಿಮುಖ: ಸರಕಾರ
ಬ್ಯಾಂಕ್ ಆಫ್ ರಾಜಸ್ಥಾನದಿಂದ ಬಿಪಿಎಲ್ಆರ್ ಏರಿಕೆ
ಭಾರತದ ವಿಮಾನ ಸಾರಿಗೆ ಲಾಭದಾಯಕವಾಗಿದೆ: ಕೆಪಿಎಂಜಿ
ಸದ್ಯದಲ್ಲೇ 3ಜಿ, ವಿಮಾಕ್ಸ್ ಸಲಹಾಸೂತ್ರ
ಉಬ್ಬರಿಸಿದ ಹಣದುಬ್ಬರ: ಶೇ.11.63ಕ್ಕೆ ಏರಿಕೆ
ಅಧಿಕ ತೈಲಬೆಲೆ ಕಾಲಕ್ಕೆ ಸಿದ್ಧಗೊಂಡಿರಿ: ಅಹ್ಲುವಾಲಿಯಾ