ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್‌ಟೆಲ್, ಟಾಟಾ ಇಂಡಿಕಾಂನಿಂದ ನೂತನ ಕೊಡುಗೆ  Search similar articles
ಪ್ರಮುಖ ಖಾಸಗಿ ಮೊಬೈಲ್ ಸೇವಾ ಸಂಸ್ಥೆ ಏರ್‌ಟೆಲ್ ಮತ್ತು ಟಾಟಾ ಇಂಡಿಕಾಂ ಪ್ರೀಪೈಡ್ ಸುಂಕ ದರಗಳನ್ನು ಕಡಿತಗೊಳಿಸಿದ್ದು, ಈಗಾಗಲೇ ಇರುವ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಇನ್ನಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಲು ಕೆಲವು ನೂತನ ಕೊಡುಗೆಗಳನ್ನು ಪ್ರಾರಂಭಿಸಿದೆ.

ದೆಹಲಿ ಮತ್ತು ಎನ್‌ಸಿಆರ್ ವಲಯದಲ್ಲಿರುವ ಪ್ರೀಪೈಡ್ ಗ್ರಾಹಕರಿಗೆ 49 ರೂಪಾಯಿಗಳ ರೀಚಾರ್ಜ್ ಮಾಡಿಸಿದಲ್ಲಿ ಸ್ಥಳೀಯ ಕರೆಗಳ ದರವು ಪ್ರತಿ ನಿಮಿಷಕ್ಕೆ 50 ಪೈಸೆಯಷ್ಟಾಗಲಿದೆ ಎಂದು ಏರ್‌ಟೆಲ್ ತಿಳಿಸಿದೆ.

ಅಂತೆಯೇ, ಟಾಟಾ ಇಂಡಿಕಾಂ ಕೂಡಾ 499 ರೂಪಾಯಿಗಳ ನೂತನ ಕೊಡುಗೆಯೊಂದನ್ನು ಪ್ರಾರಂಭಿಸಿದ್ದು, ಈ ಕೊಡುಗೆಯ ಮೂಲಕ ಟಾಟಾ ಇಂಡಿಕಾಂ ಪ್ರೀಪೈಡ್ ಗ್ರಾಹಕರು ಇತರ ಟಾಟಾ ಇಂಡಿಕಾಂ ಮೊಬೈಲ್‌ಗಳಿಗೆ ದೇಶದಾದ್ಯಂತ ಉಚಿತ ಕರೆಗಳನ್ನು ಮಾಡಬಹುದಾಗಿದೆ.

ಅಲ್ಲದೆ, 30 ದಿನಗಳ ವಾಯಿದೆಯನ್ನು ಹೊಂದಿರುವ ಈ ಕೊಡುಗೆಯ ಮೂಲಕ ಗ್ರಾಹಕರು ಇತರ ಮೊಬೈಲ್‌ಗಳಿಗೆ 50 ಪೈಸೆಗೆ ಸ್ಥಳೀಯ ಕರೆ ಹಾಗೂ ರೂ.1.5ಕ್ಕೆ ಎಸ್‌ಟಿಡಿ ಕರೆಗಳನ್ನು ಮಾಡಬಹುದಾಗಿದೆ ಎಂದು ಕಂಪನಿಯು ತಿಳಿಸಿದೆ.
ಮತ್ತಷ್ಟು
ಹೆಚ್ಚಿದ ಬೇಡಿಕೆ: ಚಿನ್ನ ಬೆಲೆ ಏರಿಕೆ
ಬೆಲೆ ಏರಿಕೆ: ಯುಪಿಎ ಸರಕಾರದಿಂದ ಜಾಹೀರಾತು ಅಭಿಯಾನ
30 ಆವಶ್ಯಕ ಉತ್ಪನ್ನಗಳ ಬೆಲೆ ಇಳಿಮುಖ: ಸರಕಾರ
ಬ್ಯಾಂಕ್ ಆಫ್ ರಾಜಸ್ಥಾನದಿಂದ ಬಿಪಿಎಲ್ಆರ್ ಏರಿಕೆ
ಭಾರತದ ವಿಮಾನ ಸಾರಿಗೆ ಲಾಭದಾಯಕವಾಗಿದೆ: ಕೆಪಿಎಂಜಿ
ಸದ್ಯದಲ್ಲೇ 3ಜಿ, ವಿಮಾಕ್ಸ್ ಸಲಹಾಸೂತ್ರ