ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿಯಲ್ಲಿ ರಖಂ ವ್ಯಾಪಾರಿಗಳ ಪ್ರಮಾಣ ಹೆಚ್ಚಳ  Search similar articles
ದೇಶದ ರಾಜಧಾನಿಯಲ್ಲಿರುವ ಒಟ್ಟು ವಾಣಿಜ್ಯ ಪ್ರಕ್ರಿಯೆಯಲ್ಲಿ ಹೆಚ್ಚಿನ ಮಂದಿ ರಖಂ ಮತ್ತು ಸಗಟು ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ದೆಹಲಿ ಹಣಕಾಸು ಸಚಿವ ಎ.ಕೆ.ವಾಲಿಯಾ ತಿಳಿಸಿದ್ದಾರೆ.

2005ರಲ್ಲಿ ನಡೆಸಲಾದ ದೆಹಲಿಯ ಐದನೇ ಆರ್ಥಿಕ ಸೆನ್ಸಸ್‌ನ ವರದಿಗಳನ್ನು ಬಿಡುಗಡೆಗೊಳಿಸಿದ ಅವರು, ದೆಹಲಿಯಲ್ಲಿ ಒಟ್ಟು 370,000 ರಖಂ ಮಳಿಗೆಗಳಿದ್ದು, ದೇಶದಲ್ಲಿ ಒಟ್ಟು ವಾಣಿಜ್ಯ ಪ್ರಕ್ರಿಯೆಯಲ್ಲಿ ಶೇ.48.86ರಷ್ಟು ಪಾಲನ್ನು ಇದು ಹೊಂದಿದೆ ಎಂದು ಹೇಳಿದ್ದಾರೆ.

ಇದು ರಖಂ ವ್ಯಾಪಾರದಲ್ಲಿ ತೊಡಗಿರುವ ರಾಷ್ಟ್ರೀಯ ಸರಾಸರಿ ಪ್ರಮಾಣ ಶೇ.41.83ಕ್ಕಿಂತ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ರಖಂ ವ್ಯಾಪಾರದ ಉತ್ಪಾದನಾ ಕ್ಷೇತ್ರವು ದೆಹಲಿಯ ಒಟ್ಟು ವಾಣಿಜ್ಯ ಪ್ರಕ್ರಿಯೆಯ ಶೇ.14.76ರಷ್ಟು ಪಾಲನ್ನು ಪಡೆದುಕೊಂಡಿದೆ.

ಇದರೊಂದಿಗೆ, ದೆಹಲಿಯಲ್ಲಿ 2005ರಲ್ಲಿ 758,000 ಸಂಸ್ಥೆಗಳಿಗೆ ಸುಮಾರು 3.6 ದಶಲಕ್ಷ ಮಂದಿಗೆ ಉದ್ಯೋಗ ನೀಡುತ್ತಿದ್ದು, 1998ರ ನಾಲ್ಕನೇ ಆರ್ಥಿಕ ಸೆನ್ಸಸ್‌ಗೆ ಹೋಲಿಸಿದರೆ, ಇದರ ಪ್ರಮಾಣದಲ್ಲಿ ಹೆಚ್ಚಳ ಉಂಟಾಗಿದೆ.
ಮತ್ತಷ್ಟು
ಏರ್‌ಟೆಲ್, ಟಾಟಾ ಇಂಡಿಕಾಂನಿಂದ ನೂತನ ಕೊಡುಗೆ
ಹೆಚ್ಚಿದ ಬೇಡಿಕೆ: ಚಿನ್ನ ಬೆಲೆ ಏರಿಕೆ
ಬೆಲೆ ಏರಿಕೆ: ಯುಪಿಎ ಸರಕಾರದಿಂದ ಜಾಹೀರಾತು ಅಭಿಯಾನ
30 ಆವಶ್ಯಕ ಉತ್ಪನ್ನಗಳ ಬೆಲೆ ಇಳಿಮುಖ: ಸರಕಾರ
ಬ್ಯಾಂಕ್ ಆಫ್ ರಾಜಸ್ಥಾನದಿಂದ ಬಿಪಿಎಲ್ಆರ್ ಏರಿಕೆ
ಭಾರತದ ವಿಮಾನ ಸಾರಿಗೆ ಲಾಭದಾಯಕವಾಗಿದೆ: ಕೆಪಿಎಂಜಿ