ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಶಾರಾಮಿ ಹೋಟೆಲ್‌ ಖರೀದಿಗೆ ಮಿತ್ತಲ್ ಯತ್ನ  Search similar articles
ಲಂಡನ್‌ನಲ್ಲಿರುವ ಅನೇಕ ವೈಭವದ ಮನೆಗಳನ್ನು ಖರೀದಿಸಿದ ಉಕ್ಕು ಸಾಮ್ರಾಜ್ಯದ ಅಧಿಪತಿ ಲಕ್ಷ್ಮಿ ಮಿತ್ತಲ್ ಇದೀಗ ಲಂಡನ್‌ನಲ್ಲಿರುವ ತಾರಾ ಹೋಟೆಲ್‌ಗಳನ್ನು ಖರೀದಿಸಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಿತ್ತಲ್ ಕುಟುಂಬದ ಸಲಹೆಗಾರರಾದ ಎಲ್.ಕೆ ಅಡ್ವೈಸರ್ಸ್‌ ಬ್ರಿಟನ್‌ನ ಬೃಹತ್ ಅದ್ದೂರಿ ಹೋಟೆಲ್‌ಗಳ ಸಮೂಹವಾದ ವಾನ್ ಎಸ್ಸಾನ್‌ನೊಂದಿಗೆ ಖರೀದಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಾನ್ ಎಸ್ಸಾನ್ ಮಾಲೀಕರಾದ ಆಂಡ್ರೂ ಡೇವಿಸ್ ತಮ್ಮ ಹೋಟೆಲ್‌ಗಳ ಷೇರುಗಳನ್ನು210 ಮಿಲಿಯನ್ ಪೌಂಡ್‌ಗಳಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಡೇವಿಸ್ ಯುರೋಪ್‌ನ ಒರಿಯಂಟ್‌ ಎಕ್ಸಪ್ರ್ರೆಸ್ ಹೋಟೆಲ್‌ ಸಮೂಹದಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಲು ನಿರ್ಧರಿಸಿದ್ದರಿಂದ ವಾನ್ ಎಸ್ಸಾನ್ ಹೋಟೆಲ್‌ಗಳ ಷೇರುಗಳನ್ನು ಮಾರಾಟ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ದೆಹಲಿಯಲ್ಲಿ ರಖಂ ವ್ಯಾಪಾರಿಗಳ ಪ್ರಮಾಣ ಹೆಚ್ಚಳ
ಏರ್‌ಟೆಲ್, ಟಾಟಾ ಇಂಡಿಕಾಂನಿಂದ ನೂತನ ಕೊಡುಗೆ
ಹೆಚ್ಚಿದ ಬೇಡಿಕೆ: ಚಿನ್ನ ಬೆಲೆ ಏರಿಕೆ
ಬೆಲೆ ಏರಿಕೆ: ಯುಪಿಎ ಸರಕಾರದಿಂದ ಜಾಹೀರಾತು ಅಭಿಯಾನ
30 ಆವಶ್ಯಕ ಉತ್ಪನ್ನಗಳ ಬೆಲೆ ಇಳಿಮುಖ: ಸರಕಾರ
ಬ್ಯಾಂಕ್ ಆಫ್ ರಾಜಸ್ಥಾನದಿಂದ ಬಿಪಿಎಲ್ಆರ್ ಏರಿಕೆ