ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹತ್ತಿ ರಫ್ತು ನಿಷೇಧವಿಲ್ಲ: ಸರಕಾರ ಸ್ಪಷ್ಟನೆ  Search similar articles
ಹತ್ತಿಯ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವ ಹಾಗೂ ಹತ್ತಿ ರಫ್ತನ್ನು ನಿಷೇಧಿಸುವ ಯೋಜನೆಯನ್ನು ಸರಕಾರವು ಹೊಂದಿಲ್ಲ ಎಂದು ಸರಕಾರವು ಸ್ಪಷ್ಟಪಡಿಸಿದೆ.

ಸದ್ಯಕ್ಕೆ, ಹತ್ತಿಯ ಮೇಲಿನ ಆಮದು ಸುಂಕ ಮಾಡುವ ಉದ್ದೇಶವನ್ನು ಸರಕಾರವು ಹೊಂದಿಲ್ಲ ಎಂದು ವಾಣಿಜ್ಯ ಕಾರ್ಯದರ್ಶಿ ಗೋಪಾಲ್ ಪಿಳ್ಳೈ ತಿಳಿಸಿದ್ದಾರೆ.

ಪ್ರಸಕ್ತ, ಹತ್ತಿಯ ಮೇಲೆ ಶೇ.ಹತ್ತರಷ್ಟು ಸೀಮಾಸುಂಕವಿದ್ದು, ಶೇ.ನಾಲ್ಕು ಆಮದು ಸುಂಕವಿದೆ.

ದೇಶದಲ್ಲಿರುವ ಹತ್ತಿ ಬೆಲೆಗಿಂತ ಜಾಗತಿಕ ಮಾರುಕಟ್ಟೆಯಲ್ಲಿ ಹತ್ತಿ ಬೆಲೆಯಲ್ಲಿ ಇಳಿಕೆ ಉಂಟಾಗಿದ್ದು, ಹತ್ತಿ ರಫ್ತನ್ನು ನಿಷೇಧಿಸುವ ಜವಳಿ ಉದ್ಯಮಗಳ ಬೇಡಿಕೆಯಂತೆ ಹತ್ತಿ ರಫ್ತನ್ನು ನಿಷೇಧಿಸುವ ನಿರ್ಧಾರವನ್ನು ಅವರು ತಳ್ಳಿಹಾಕಿದರು.

ಅಂತಾರಾಷ್ಟ್ರೀಯ ಬೆಲೆಗಳು ದೇಶೀಯ ಬೆಲೆಗಿಂತ ಕಡಿಮೆ ಇರುವಾಗ ರಫ್ತು ಮೇಲೆ ನಿಷೇಧ ಹೇರುವಲ್ಲಿ ಅರ್ಥವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪೂರೈಕೆಯನ್ನು ವರ್ಧಿಸುವ ನಿಟ್ಟಿನಲ್ಲಿ, ಸುಂಕರಹಿತ ಹತ್ತಿ ಆಮದಿಗೆ ಮತ್ತು ಕಳೆದ ಒಂದು ವರ್ಷದಲ್ಲಿ ಶೇ.35ರಷ್ಟು ಹೆಚ್ಚಳಗೊಂಡ ಹತ್ತಿ ಬೆಲೆಯನ್ನು ಇಳಿಸುವಂತೆ ದೇಶೀಯ ಜವಳಿ ಉದ್ಯಮವು ಒತ್ತಾಯಿಸುತ್ತಿದೆ.
ಮತ್ತಷ್ಟು
ಐಶಾರಾಮಿ ಹೋಟೆಲ್‌ ಖರೀದಿಗೆ ಮಿತ್ತಲ್ ಯತ್ನ
ದೆಹಲಿಯಲ್ಲಿ ರಖಂ ವ್ಯಾಪಾರಿಗಳ ಪ್ರಮಾಣ ಹೆಚ್ಚಳ
ಏರ್‌ಟೆಲ್, ಟಾಟಾ ಇಂಡಿಕಾಂನಿಂದ ನೂತನ ಕೊಡುಗೆ
ಹೆಚ್ಚಿದ ಬೇಡಿಕೆ: ಚಿನ್ನ ಬೆಲೆ ಏರಿಕೆ
ಬೆಲೆ ಏರಿಕೆ: ಯುಪಿಎ ಸರಕಾರದಿಂದ ಜಾಹೀರಾತು ಅಭಿಯಾನ
30 ಆವಶ್ಯಕ ಉತ್ಪನ್ನಗಳ ಬೆಲೆ ಇಳಿಮುಖ: ಸರಕಾರ