ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಎಸ್ಐಎಗೆ ಉತ್ತಮ ವಿಮಾನನಿಲ್ದಾಣ ಮನ್ನಣೆ  Search similar articles
ತನ್ನ ಉತ್ತಮ ಹಾಗೂ ದಕ್ಷ ಸೇವೆಯಿಂದಾಗಿ ಭಾರತೀಯ ವಿಮಾನ ಪ್ರಯಾಣಿಕರ ಸಂಘ(ಎಪಿಎಐ)ದ ವತಿಯಿಂದ ನಡೆಸಲ್ಪಟ್ಟ ಸ್ವತಂತ್ರ ಸಮೀಕ್ಷೆಯಲ್ಲಿ ಮುಂಬಯಿಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಸಿಎಸ್ಐಎ) , ಖಾಸಗಿ ಸರಕಾರಿ ಪಾಲುದಾರಿಕೆಯ ಶ್ರೇಷ್ಠ ವಿಮಾನ ನಿಲ್ದಾಣ ಎಂಬ ಮನ್ನಣೆಗೆ ಪಾತ್ರವಾಗಿದೆ.

ಮುಂಬಯಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಎಂಐಎಎಲ್)ದ ಉಸ್ತುವಾರಿಯಲ್ಲಿರುವ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೇ ಮೂರು 2008ಕ್ಕೆ ತನ್ನ ಎರಡನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು, ಈಗಾಗಲೇ ಉತ್ತಮ ಮೂಲಸೌಕರ್ಯ, ದಕ್ಷ ಸೇವೆಯಿಂದ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿರುವ ಸಿಎಸ್ಎಒ, ಶ್ರೇಷ್ಠ ವಿಮಾನನಿಲ್ದಾಣ ಎಂಬ ಪುರಸ್ಕಾರವನ್ನು ಪಡೆಯುವ ಮೂಲಕ ತನ್ನ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸಿಕೊಂಡಿದೆ.

ಏಪ್ರಿಲ್ 2007ರಿಂದ ಮಾರ್ಚ್ 2008ರವರೆಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿದಂತೆ ಒಟ್ಟು 25.8 ಪ್ರಯಾಣಿಕರು ಸಂಚರಿಸಿದ್ದು, ಈ ಮೂಲಕ, ಪ್ರತಿದಿನ 750 ವಿಮಾನಸೇವೆಗಳೊಂದಿಗೆ ಸಿಎಸ್ಐಎಯು ಅತಿ ಹೆಚ್ಚು ಪ್ರಯಾಣಿಕರ ಸಂಚಾರವನ್ನು ದಾಖಲಿಸಿದೆ.

ವಿಮಾನ ನಿಲ್ದಾಣವನ್ನು ಸರ್ವಾಂಗೀಣ ವಿಪತ್ತು ನಿರ್ವಹಣಾ ಯೋಜನೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ, ನಾಗರಿಕ ರಕ್ಷಣಾ ಸಂಸ್ಥೆಯ ಸಹಕಾರದೊಂದಿಗೆ, ಎಂಐಎಎಲ್ ಹಂತಹಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ವಿಮಾನ ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿಗಳಿಗೆ ತರಬೇತಿ ಸೇರಿದಂತೆ ಮೊದಲ ಹಂತದ ಮೂರು ದಿನಗಳ ತರಬೇತಿ ಕಾರ್ಯಕ್ರಮವು ಈಗಾಗಲೇ ಪ್ರಾರಂಭಗೊಂಡಿದೆ.

ವಿಮಾನ ನಿಲ್ದಾಣ ನಿಯಂತ್ರಣಾ ಕೇಂದ್ರ(ಎಒಸಿಸಿ)ಸುರಕ್ಷತೆ, ಭದ್ರತೆ, ಟರ್ಮಿನಲ್ ನಿರ್ವಹಣೆ ಸೇರಿದಂತೆ ಟರ್ಮಿನಲ್ ನಿರ್ವಹಣೆಗೆ ಹೊಣೆಯಾಗಿರುವ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರವನ್ನು ಎರಡನೇ ಹಂತದಲ್ಲಿ ನಡೆಸಲಿದೆ.

ಮೂರನೇ ಹಂತದಲ್ಲಿ ಏರ್‌ಲೈನ್ ಪ್ರತಿನಿಧಿಗಳಿಗೆ ಆಪತ್ತು ಪರಿಹಾರ ತರಬೇತಿಯನ್ನು ನೀಡಲಾಗುತ್ತದೆ.
ಮತ್ತಷ್ಟು
143 ಡಾಲರ್‌ಗಿಳಿದ ಬ್ಯಾರಲ್ ಕಚ್ಛಾತೈಲ ಬೆಲೆ
ಹತ್ತಿ ರಫ್ತು ನಿಷೇಧವಿಲ್ಲ: ಸರಕಾರ ಸ್ಪಷ್ಟನೆ
ಐಶಾರಾಮಿ ಹೋಟೆಲ್‌ ಖರೀದಿಗೆ ಮಿತ್ತಲ್ ಯತ್ನ
ದೆಹಲಿಯಲ್ಲಿ ರಖಂ ವ್ಯಾಪಾರಿಗಳ ಪ್ರಮಾಣ ಹೆಚ್ಚಳ
ಏರ್‌ಟೆಲ್, ಟಾಟಾ ಇಂಡಿಕಾಂನಿಂದ ನೂತನ ಕೊಡುಗೆ
ಹೆಚ್ಚಿದ ಬೇಡಿಕೆ: ಚಿನ್ನ ಬೆಲೆ ಏರಿಕೆ