ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು: ಬಿಗ್ ಎಫ್ಎಂನಿಂದ ಅಭಿಯಾನ  Search similar articles
indiaprwire
ಬೆಂಗಳೂರಿನ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತುಕೊಳ್ಳಲು ಮತ್ತು ತನ್ನ ಕೇಳುಗರೊಂದಿಗೆ ಸಂಪರ್ಕವನ್ನಿರಿಸಕೊಳ್ಳಲು ಬೆಂಗಳೂರಿನ ನಂಬರ್ ವನ್ ಎಫ್.ಎಂ.ಸ್ಟೇಶನ್ ಬಿಗ್ 92.7 ನೂತನ ಅಭಿಯಾನವೊಂದನ್ನು ಪ್ರಾರಂಭಿಸಿದೆ.

'ಬೆಂಡೆತ್ತು ಬೆಂಗಳೂರು' ಎಂಬ ಹೆಸರಿನ ಜುಲೈ ಏಳರಿಂದ ಜುಲೈ ಒಂಬತ್ತರವರೆಗೆ ಎರಡು ವಾರಗಳ ಕಾಲ ನಡೆಯಲಿರುವ ಈ ಅಭಿಯಾನವು ಪ್ರತಿದಿನ ಬೆಂಗಳೂರಿನ ವಿವಿಧ ಸಮಸ್ಯೆಗಳ ಬಗ್ಗೆ ಕೇಳುಗರಿಂದ ತಿಳಿದುಕೊಳ್ಳಲಿದೆ.

ಕಳ್ಳತನ, ನಗರ ನೈರ್ಮಲ್ಯತೆ, ಟ್ರಾಫಿಕ್ ಸಮಸ್ಯೆ ಸೇರಿದಂತೆ ಬೆಂಗಳೂರು ನಿವಾಸಿಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಇದೊಂದು ಉತ್ತಮ ಅವಕಾಶವಾಗಲಿದೆ.

ಇದರೊಂದಿಗೆ, ಎಲ್ಲಾ ಬೆಂಗಳೂರಿನ ಜನತೆಯಲ್ಲಿ ಹಾಸ್ಯಪ್ರಜ್ಞೆಯನ್ನು ಮೂಡಿಸುವ ಸಲುವಾಗಿ, ಪ್ರಮುಖ ವ್ಯಕ್ತಿಗಳ ಧ್ವನಿ ಅನುಕರಣೆಯ ಮೂಲಕ ಈ ಸಮಸ್ಯೆಗಳಿಗೆ ಹಾಸ್ಯ ತಿರುವನ್ನು ನೀಡಲಾಗುತ್ತದೆ. ಉಪಾಹಾರ ಮತ್ತು ಸಂಜೆಯ ಆರ್‌ಜೆಗಳು ಪ್ರತಿದಿನದ ವಿಷಯದ ಸಮೀಕ್ಷೆಯನ್ನಾಧರಿಸಿ ಕೇಳುಗರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಇದರಲ್ಲಿ ಅದೃಷ್ಟ ವಿಜೇತರಿಗೆ 'ನೋ ಥ್ಯಾಂಕ್ ಯು' ಎಂಬ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಈ ಅಭಿಯಾನದ ಸಮಾರೋಪದ ಅಂಗವಾಗಿ, ಆರ್‌ಜೆ ಹರ್ಷ ಮತ್ತು ಆರ್‌ಜೆ ಜ್ಯೋತಿ ಮೂರು ವಿಷಯಗಳನ್ನು ತೆಗೆದುಕೊಂಡು ಇದರಲ್ಲಿ ಪ್ರಸಕ್ತ ನಗರದಲ್ಲಿರುವ ಪ್ರಮುಖ ವಿಚಾರದ ಬಗ್ಗೆ ಮತ ಹಾಕಲು ಹೇಳುತ್ತಾರೆ. ಅಲ್ಲದೆ, ಸರಕಾರಿ ಅಧಿಕಾರಿಗಳೊಂದಿಗೆ ಮತ್ತು ಪ್ರಮುಖ ವ್ಯಕ್ತಿಗಳೊಂದಿಗೆ ನಗರದ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ನಡೆಸಲಾಗುತ್ತದೆ.

(ಇಂಡಿಯಾ ಪಿಆರ್‌ವೈರ್ (indiaprwire.com) ಮೂಲಕ ಪ್ರಕಟಣೆ)
ಮತ್ತಷ್ಟು
ಸಿಎಸ್ಐಎಗೆ ಉತ್ತಮ ವಿಮಾನನಿಲ್ದಾಣ ಮನ್ನಣೆ
143 ಡಾಲರ್‌ಗಿಳಿದ ಬ್ಯಾರಲ್ ಕಚ್ಛಾತೈಲ ಬೆಲೆ
ಹತ್ತಿ ರಫ್ತು ನಿಷೇಧವಿಲ್ಲ: ಸರಕಾರ ಸ್ಪಷ್ಟನೆ
ಐಶಾರಾಮಿ ಹೋಟೆಲ್‌ ಖರೀದಿಗೆ ಮಿತ್ತಲ್ ಯತ್ನ
ದೆಹಲಿಯಲ್ಲಿ ರಖಂ ವ್ಯಾಪಾರಿಗಳ ಪ್ರಮಾಣ ಹೆಚ್ಚಳ
ಏರ್‌ಟೆಲ್, ಟಾಟಾ ಇಂಡಿಕಾಂನಿಂದ ನೂತನ ಕೊಡುಗೆ