ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೋರ್ಡ್‌ನಿಂದ ನೂತನ ಫಿಯೆಸ್ಟಾ ಕಾರು ಬಿಡುಗಡೆ  Search similar articles
ಪ್ರಮುಖ ಕಾರು ನಿರ್ಮಾಣ ಕಂಪನಿಯಾದ ಫೋರ್ಡ್ ಇಂಡಿಯಾ ನೂತನ ಫೋರ್ಡ್ ಫಿಯೆಸ್ಟಾ ಕಾರನ್ನು ಇತ್ತೀಚೆಗೆ ಅನಾವರಣಗೊಳಿಸಿದ್ದು, ತನ್ನ ಆಕರ್ಷಕ ಶೈಲಿ, ನಿರ್ವಹಣೆ, ಸುರಕ್ಷತೆಯಿಂದ ಭಾರತದ ಮಧ್ಯಮ ಗಾತ್ರದ ಕಾರುಗಳಲ್ಲಿ ಸ್ಪರ್ಧೆಯನ್ನು ಮೂಡಿಸಿದೆ.

ಆಕರ್ಷಕ ಹೊರಮೈ ಮತ್ತು ಎದ್ದುಕಾಣುವ ಹೆಡ್‌ಲ್ಯಾಂಪ್‌ಗಳು ನೂತನ ಫೋರ್ಡ್ ಫಿಯೆಸ್ಟಾದ ಚೆಲುವನ್ನು ಎತ್ತಿ ತೋರಿಸುತ್ತದೆ.

ಅಲ್ಲದೆ, ಕಾರಿನ ಒಳಭಾಗದಲ್ಲಿ ಚರ್ಮ ಹಾಗೂ ಫ್ಯಾಬ್ರಿಕ್‌ನ ವಿಶಿಷ್ಟ ವಿನ್ಯಾಸದೊಂದಿಗೆ, ವಿವಿಧ ಬಣ್ಣಗಳಿಂದ ಇದರ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ವಿಶೇಷವಾಗಿ, ಫೋರ್ಡ್ ಇಂಡಿಯಾದ ಆಧುನೀಕೃತ ಮತ್ತು ದಕ್ಷ ಡ್ಯೂರಾಟೆಕ್(ಪೆಟ್ರೋಲ್) ಮತ್ತು ಡ್ಯೂರಾಟಾರ್ಕ್(ಟರ್ಬೋಡೀಸೇಲ್) ಇಂಜಿನುಗಳ ಆಯ್ಕೆಯನ್ನು ಫೋರ್ಡ್ ಗ್ರಾಹಕರಿಗೆ ನೀಡುತ್ತದೆ. ಈ ಎರಡು ಇಂಜಿನುಗಳು ಇಂಧನ ದಕ್ಷತೆ ಮತ್ತು ಉತ್ತಮ ನಿರ್ವಹಣೆಯನ್ನು ನೀಡುತ್ತದೆ.

ನೂತನ ಫೋರ್ಡ್ ಫಿಯೆಸ್ಟಾ ಮಾಡೆಲ್ 1.6ಇಎಕ್ಸ್ಇ, 1.6ಜೆಡ್ಎಕ್ಸ್ಐ ಮತ್ತು 1.6ಎಸ್ಎಕ್ಸ್ಐ ಎಂಬ ಮೂರು ಪೆಟ್ರೋಲ್ ವೈವಿಧ್ಯ ಹಾಗೂ 1.4ಇಎಕ್ಸ್ಐ, 1.4ಜೆಡ್ಎಕ್ಸ್ಐ ಮತ್ತು 1.4ಎಸ್ಎಕ್ಸ್ಐ ಎಂಬ ಮೂರು ಟರ್ಬೋಡೇಸೆಲ್ ವೈವಿಧ್ಯದ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತದೆ.

ಭಾರತದ ಕಾರು ಮಾರುಕಟ್ಟೆಯು ಅಭಿವೃದ್ಧಿಯ ಪಥದಲ್ಲಿದ್ದು, ಚಾಲನೆಯನ್ನು ಆನಂದಿಸುವ ಮತ್ತು ತಮ್ಮ ಜೀವನಶೈಲಿಯನ್ನು ಪ್ರತಿಬಿಂಬಿಸಲು ಕಾರನ್ನು ಬಯಸುವ ಗ್ರಾಹಕರ ಮನಸ್ಥಿತಿಯನ್ನು ಕಂಪನಿಯು ಅರ್ಥಮಾಡಿಕೊಂಡಿದೆ ಎಂದು ನೂತನ ಫೋರ್ಡ್ ಫಿಯೆಸ್ಟಾ ಅನಾವರಣದ ವೇಳೆ ಫೋರ್ಡ್ ಇಂಡಿಯಾದ ಮಾರುಕಟ್ಟೆ, ಮಾರಾಟ ಮತ್ತು ಸೇವಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ನಿಗೆಲ್ ವಾರ್ಕ್ ತಿಳಿಸಿದ್ದಾರೆ.
ಮತ್ತಷ್ಟು
ಬೆಂಗಳೂರು: ಬಿಗ್ ಎಫ್ಎಂನಿಂದ ಅಭಿಯಾನ
ಸಿಎಸ್ಐಎಗೆ ಉತ್ತಮ ವಿಮಾನನಿಲ್ದಾಣ ಮನ್ನಣೆ
143 ಡಾಲರ್‌ಗಿಳಿದ ಬ್ಯಾರಲ್ ಕಚ್ಛಾತೈಲ ಬೆಲೆ
ಹತ್ತಿ ರಫ್ತು ನಿಷೇಧವಿಲ್ಲ: ಸರಕಾರ ಸ್ಪಷ್ಟನೆ
ಐಶಾರಾಮಿ ಹೋಟೆಲ್‌ ಖರೀದಿಗೆ ಮಿತ್ತಲ್ ಯತ್ನ
ದೆಹಲಿಯಲ್ಲಿ ರಖಂ ವ್ಯಾಪಾರಿಗಳ ಪ್ರಮಾಣ ಹೆಚ್ಚಳ