ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೆಂಡೂಲ್ಕರನ್ನು ಕೈಬಿಟ್ಟ ಪೆಪ್ಸಿ  Search similar articles
ಪ್ರಸಕ್ತ ಉತ್ಪನ್ನ ರಾಯಭಾರಿಗಳಾಗಿರುವ ಹಿರಿಯ ಕ್ರಿಕೆಟಿಗರನ್ನು ಹಂತಹಂತವಾಗಿ ತೆಗೆದುಹಾಕುವ ಪ್ರಯತ್ನದೊಂದಿಗೆ, ಪ್ರಮುಖ ಸಾಫ್ಟ್‌ಡ್ರಿಂಕ್ ನಿರ್ಮಾಣ ಕಂಪನಿಯಾದ ಪೆಪ್ಸಿ, ತನ್ನ ದೀರ್ಘಾವಧಿಯ ರಾಯಭಾರಿ ಮಾಸ್ಟರ್ ಬ್ಲಾಸ್ಟರ್ ಸಚಿನ ತೆಂಡೂಲ್ಕರ್ ಅವರನ್ನು ಕೈಬಿಟ್ಟಿದ್ದು, ಯುವ ಕ್ರಿಕೆಟಿಗರತ್ತ ತನ್ನ ದೃಷ್ಟಿಯನ್ನು ಹಾಯಿಸಿದೆ.

ಈ ವರ್ಷದ ಪ್ರಾರಂಭದಲ್ಲಿ ಭಾರತದ ಪ್ರಮುಖ ಕ್ರಿಕೆಟ್ ಆಟಗಾರರಾದ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರನ್ನು ಕೈಬಿಟ್ಟ ಬೆನ್ನಲ್ಲೇ, ಪೆಪ್ಸಿಯು, ಸಚಿನ್ ತೆಂಡೂಲ್ಕರ್ ಅವರ ಕುರಿತಾಗಿಯೂ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಯುವ ಕ್ರಿಕೆಟಿಗರತ್ತ ಕಂಪನಿಯು ದೃಷ್ಟಿ ಹಾಯಿಸಿರುವ ನಿಟ್ಟಿನಲ್ಲಿ, 1990ರಿಂದ ಪೆಪ್ಸಿಯ ಉತ್ಪನ್ನ ರಾಯಭಾರಿ ಆಗಿರುವ ಸಚಿನ್ ತೆಂಡೂಲ್ಕರ್ ಅವರೊಂದಿಗಿನ ಒಪ್ಪಂದವನ್ನು ಪುನರಾರಂಭಿಸಿಲ್ಲ ಎಂಬುದಾಗಿ ಕಂಪನಿ ಮೂಲಗಳು ತಿಳಿಸಿವೆ.

ಅಲ್ಲದೆ, ತೆಂಡೂಲ್ಕರ್ ಅವರ ಭಾರಿ ಮೊತ್ತದ ಬೇಡಿಕೆಯು ಕೂಡಾ ಕಂಪನಿಯ ಈ ನಿರ್ಧಾರಕ್ಕೆ ಪುಷ್ಠಿ ನೀಡಿದೆ ಎಂದು ಮೂಲಗಳು ಹೇಳಿವೆ.

ಮಾರುಕಟ್ಟೆ ಅಂದಾಜಿನ ಪ್ರಕಾರ, ಪ್ರತಿ ಉತ್ಪನ್ನ ಜಾಹೀರಾತಿಗೆ ಮೂರರಿಂದ ನಾಲ್ಕು ಕೋಟಿಯಷ್ಟು ಸಂಭಾವನೆಯನ್ನು ತೆಂಡೂಲ್ಕರ್ ಪಡೆಯುತ್ತಿದ್ದು, ಅತಿ ಹೆಚ್ಚು ಮೊತ್ತವನ್ನು ಪಡೆಯುವ ಕ್ರಿಕೆಟಿಗ ಎಂಬುದಾಗಿ ಹೆಸರು ಪಡೆದುಕೊಂಡಿದ್ದರು.

ಏನೇ ಆದರೂ, ಈ ಕುರಿತಾಗಿ ಹೆಚ್ಚಿನ ಮಾಹಿತಿ ನೀಡಲು ಪೆಪ್ಸಿ ಅಧಿಕಾರಿಗಳು ನಿರಾಕರಿಸಿದರೂ, ಯುವ ಕ್ರಿಕೆಟಿಗರತ್ತ ಕಂಪನಿಯು ದೃಷ್ಟಿ ನೆಟ್ಟಿರುವುದನ್ನು ಪೆಪ್ಸಿ ಸ್ಪಷ್ಟಪಡಿಸಿದೆ.
ಮತ್ತಷ್ಟು
ಫೋರ್ಡ್‌ನಿಂದ ನೂತನ ಫಿಯೆಸ್ಟಾ ಕಾರು ಬಿಡುಗಡೆ
ಬೆಂಗಳೂರು: ಬಿಗ್ ಎಫ್ಎಂನಿಂದ ಅಭಿಯಾನ
ಸಿಎಸ್ಐಎಗೆ ಉತ್ತಮ ವಿಮಾನನಿಲ್ದಾಣ ಮನ್ನಣೆ
143 ಡಾಲರ್‌ಗಿಳಿದ ಬ್ಯಾರಲ್ ಕಚ್ಛಾತೈಲ ಬೆಲೆ
ಹತ್ತಿ ರಫ್ತು ನಿಷೇಧವಿಲ್ಲ: ಸರಕಾರ ಸ್ಪಷ್ಟನೆ
ಐಶಾರಾಮಿ ಹೋಟೆಲ್‌ ಖರೀದಿಗೆ ಮಿತ್ತಲ್ ಯತ್ನ