ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಿನಲ್ಲಿ ಗತಿ ಕೆಫೆ ಡೆಲಿವರ್ ಪ್ರಾರಂಭ  Search similar articles
ಪ್ರಮುಖ ಸರಕು ಸಾಗಾಣಿಕಾ ಸೇವಾ ಸಂಸ್ಥೆ ಗತಿ ಲಿಮಿಟೆಡ್, ಗತಿ ಕೆಫೆ ಡೆಲಿವರ್ ಎಂಬ ನೂತನ ಸರಕು ಸಾಗಾಣಿಕಾ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ.

ಏಕ ಗವಾಕ್ಷಿ ಪರಿಹಾರವನ್ನು ನೀಡಲಿರುವ ಗತಿ ಕೆಫೆ ಡೆಲಿವರ್, ಗತಿ ಸರ್ಫೇಸ್, ಗತಿ ಏರ್ ಎಕ್ಸ್‌ಪ್ರೆಸ್, ಗತಿ ಇಂಟರ್ನಾಶನಲ್, ಎಐ-ಗತಿ, ಗತಿ ಡೆಸ್ಕ್ ಟು ಡೆಸ್ಕ್ ಕಾರ್ಗೋ, ಗತಿ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಮತ್ತು ಗತಿ ಕೋಸ್ಟ್ ಟು ಕೋಸ್ಟ್ ಇತ್ಯಾದಿ ಸೇವೆಗಳನ್ನು ಗ್ರಾಹಕರಿಗೆ ನೀಡಲಿದೆ.

ದಿನದ 24 ಗಂಟೆಯೂ ಗ್ರಾಹಕರ ಸೇವೆಗಾಗಿ ಲಭ್ಯವಿರುವ ಗತಿ ಕೆಫೆ ಡೆಲಿವರ್, ಯಾವುದೇ ದಾಖಲೆಗಳನ್ನು ಅಥವಾ ಇತರ ವಸ್ತುಗಳನ್ನು ಭಾರತದಿಂದ ಯಾವುದೇ ದೇಶಕ್ಕೆ ಸಾಗಾಟ ಮಾಡಲು ಅವಕಾಶ ಮಾಡಿಕೊಡಲಿದೆ.

ಬೆಂಗಳೂರಿನ ಬ್ರಿಗೇಡ್ ಗಾರ್ಡನ್‌ನಲ್ಲಿ ಮಂಗಳವಾರ ಪ್ರಾರಂಭಗೊಂಡ ಗತಿ ಕೆಫೆ ಡೆಲಿವರ್‌ನ್ನು ಬೋರುಕಾ ಪವರ್ ಸಂಸ್ಥೆಯ ಮುಖ್ಯಸ್ಥ ಎಸ್.ಎನ್.ಅಗರ್ವಾಲಾ ಉದ್ಘಾಟಿಸಿದರು.

ಈಗಾಗಲೇ, ಹೈದರಾಬಾದ್, ಪೂನಾ ಮತ್ತು ಕೋಲ್ಕತ್ತಾಗಳಲ್ಲಿ ಉತ್ತಮ ಸೇವೆಯ ಮೂಲಕ ಗತಿ ಕೆಫೆ ಡೆಲಿವರ್ ಜನಮೆಚ್ಚುಗೆಗೆ ಪಾತ್ರವಾಗಿದೆ.

(ಇಂಡಿಯಾ ಪಿಆರ್‌ವೈರ್ (indiaprwire.com) ಮೂಲಕ ಪ್ರಕಟಣೆ)
ಮತ್ತಷ್ಟು
ಬಂಡವಾಳ ಒಳಹರಿವು 3 ಪಟ್ಟು ಹೆಚ್ಚಳ
ಬೆಲೆ ಏರಿಕೆ ಕಳವಳಕಾರಿ: ಜಿ8
ತೆಂಡೂಲ್ಕರನ್ನು ಕೈಬಿಟ್ಟ ಪೆಪ್ಸಿ
ಫೋರ್ಡ್‌ನಿಂದ ನೂತನ ಫಿಯೆಸ್ಟಾ ಕಾರು ಬಿಡುಗಡೆ
ಬೆಂಗಳೂರು: ಬಿಗ್ ಎಫ್ಎಂನಿಂದ ಅಭಿಯಾನ
ಸಿಎಸ್ಐಎಗೆ ಉತ್ತಮ ವಿಮಾನನಿಲ್ದಾಣ ಮನ್ನಣೆ