ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.14ಕ್ಕೆ ಏರಲಿದೆ: ಅಸೋಚಾಂ  Search similar articles
ಕಚ್ಛಾತೈಲ ಬೆಲೆಯು ಬ್ಯಾರಲ್ ಒಂದಕ್ಕೆ 170 ಡಾಲರ್‌ಗೆ ತಲುಪಲಿದೆ ಎಂಬ ವರದಿಗಳ ಬೆನ್ನಲ್ಲೇ, ದೇಶದ ಹಣದುಬ್ಬರವು ಶೇ.14-14.5ಕ್ಕೆ ಏರಲಿದೆ ಎಂಬುದಾಗಿ ಉದ್ಯಮ ಮಂಡಳಿ ಅಸೋಚಾಂ ಮುನ್ಸೂಚನೆ ನೀಡಿದೆ.

ಇಂಧನ ಬೆಲೆ ಏರಿಕೆಯು ಡಿಸೆಂಬರ್ ತಿಂಗಳೊಳಗೆ ಇತರ ಉತ್ಪನ್ನಗಳ ಮೇಲೂ ಪ್ರಭಾವ ಬೀರಲಿದ್ದು, ಇದು ಹಣದುಬ್ಬರವನ್ನು 14-14.5ಕ್ಕೆ ಕೊಂಡೊಯ್ಯಲಿದೆ ಎಂಬುದಾಗಿ ಅಭಿಪ್ರಾಯಪಟ್ಟಿದೆ.

ಇದರ ಫಲವಾಗಿ, ಈಗಾಗಲೇ ಹೆಚ್ಚಳಗೊಂಡಿರುವ ಬಡ್ಡಿದರವು ಇನ್ನಷ್ಟು ಹೆಚ್ಚಳಗೊಳ್ಳಲಿದ್ದು, ಈ ಮೂಲಕ ಹಣಕಾಸು ನೀತಿಯು ಇನ್ನಷ್ಟು ಬಿಗಿಗೊಳ್ಳಲಿದೆ ಎಂದು 'ಹಣದುಬ್ಬರ ಮತ್ತು ಬಡ್ಡಿದರ' ಕುರಿತಾದ ಅಸೋಚಾಂನ ಅಧ್ಯಯನದ ವರದಿಗಳು ತಿಳಿಸಿವೆ.

ಒಂದು ವೇಳೆ ಸಾಲಬಡ್ಡಿದರದಲ್ಲಿ ಶೇ.0.50ರಷ್ಟು ಮರು ಏರಿಕೆ ಉಂಟಾದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಆಹಾರೇತರ ಸಾಲ ವಿತರಣೆಯಲ್ಲಿ ಇಳಿಕೆ ಉಂಟಾಗಲಿದೆ ಎಂದು ಅಸೋಚಾಂ ತಿಳಿಸಿದೆ.
ಮತ್ತಷ್ಟು
ಅಕ್ಕಿ ರಫ್ತು ನಿಷೇಧ: ಗಲ್ಫ್ ಮೇಲೆ ಪರಿಣಾಮ
ಬೆಂಗಳೂರಿನಲ್ಲಿ ಗತಿ ಕೆಫೆ ಡೆಲಿವರ್ ಪ್ರಾರಂಭ
ಬಂಡವಾಳ ಒಳಹರಿವು 3 ಪಟ್ಟು ಹೆಚ್ಚಳ
ಬೆಲೆ ಏರಿಕೆ ಕಳವಳಕಾರಿ: ಜಿ8
ತೆಂಡೂಲ್ಕರನ್ನು ಕೈಬಿಟ್ಟ ಪೆಪ್ಸಿ
ಫೋರ್ಡ್‌ನಿಂದ ನೂತನ ಫಿಯೆಸ್ಟಾ ಕಾರು ಬಿಡುಗಡೆ