ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹತ್ತಿ ಆಮದು ಮೇಲಿನ ಸೀಮಾಸುಂಕ ರದ್ದು  Search similar articles
ಹತ್ತಿ ಆಮದಿನ ಮೇಲಿನ ಸೀಮಾಸುಂಕವನ್ನು ಸರಕಾರವು ರದ್ದುಗೊಳಿಸಿದ್ದು, ಈ ಮೂಲಕ ಸೀಮಾಸುಂಕ ಕುರಿತಾದ ಜವಳಿ ಉದ್ಯಮದ ಬೇಡಿಕೆಗೆ ಸರಕಾರವು ಸ್ಪಂದಿಸಿದಂತಾಗಿದೆ.

ಹೆಚ್ಚುವರಿ ಸುಂಕದೊಂದಿಗೆ, ಎಲ್ಲಾ ವಿಧದ ಹತ್ತಿ ಆಮದಿನ ಮೇಲಿನ ಸೀಮಾ ಸುಂಕವನ್ನು ರದ್ದುಪಡಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸೀಮಾ ಮತ್ತು ಅಬಕಾರಿ ಮಂಡಳಿಯು ಈ ಕುರಿತಾಗಿ ಸೂಚನೆಯನ್ನೂ ನೀಡಿದೆ ಎಂದು ಅವರು ಹೇಳಿದ್ದಾರೆ.

ಹತ್ತಿ ಆಮದು ಮೇಲಿನ ಸೀಮಾಸುಂಕ ರದ್ದು ಹಾಗೂ ರಫ್ತು ನಿಯಂತ್ರಣವನ್ನು ಆಧರಿಸಿ, ಸುಮಾರು 3,000 ಜವಳಿ ಸಂಸ್ಥೆಗಳು ಮುಷ್ಕರಕ್ಕೆ ಸಿದ್ಧಗೊಂಡಿದ್ದವು.

ದೇಶದಲ್ಲಿ ಯಾವುದೇ ಹತ್ತಿ ಸಂಗ್ರಹಣೆ ಇಲ್ಲದ ಕಾರಣ, ಸರಕಾರದ ಈ ನಿರ್ಧಾರವು ಹತ್ತಿ ಬೆಳೆಗಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
1.251 ಟ್ರಿಲಿಯನ್‌ಗೆ ತಲುಪಲಿರುವ ಒಪಿಇಸಿ ಆದಾಯ
ಹಣದುಬ್ಬರ ಶೇ.14ಕ್ಕೆ ಏರಲಿದೆ: ಅಸೋಚಾಂ
ಅಕ್ಕಿ ರಫ್ತು ನಿಷೇಧ: ಗಲ್ಫ್ ಮೇಲೆ ಪರಿಣಾಮ
ಬೆಂಗಳೂರಿನಲ್ಲಿ ಗತಿ ಕೆಫೆ ಡೆಲಿವರ್ ಪ್ರಾರಂಭ
ಬಂಡವಾಳ ಒಳಹರಿವು 3 ಪಟ್ಟು ಹೆಚ್ಚಳ
ಬೆಲೆ ಏರಿಕೆ ಕಳವಳಕಾರಿ: ಜಿ8