ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜುಲೈ 25ರಿಂದ ಸುಗರ್ಏಶಿಯಾ-2008  Search similar articles
ಸುಗರ್‌ಕೇನ್ ಏಶಿಯಾ-2008 ಎಂಬ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶವು ದೆಹಲಿಯ ಪ್ರಗತಿ ಮೈದಾನದಲ್ಲಿ ಜುಲೈ25ರಿಂದ ಜುಲೈ 27ರವರೆಗೆ ನಡೆಯಲಿದ್ದು, ಭಾರತ ಮತ್ತು ವಿದೇಶದಲ್ಲಿ ದೊರೆಯುವ ಸಕ್ಕರೆ ಮತ್ತು ಕಬ್ಬು ಉತ್ಪಾದನೆಗೆ ಬಳಕೆಯಾಗುವ ಇತ್ತೀಚಿನ ತಂತ್ರಜ್ಞಾನ ಮತ್ತು ಯಂತ್ರೋಪರಕರಣಗಳ ಪ್ರದರ್ಶನಕ್ಕೆ ಇದು ವೇದಿಕೆಯಾಗಲಿದೆ.

ಇದರೊಂದಿಗೆ, ನೂತನ ಉತ್ಪನ್ನ ಮತ್ತು ತಂತ್ರಜ್ಞಾನ, ಎಥೆನಾಲ್ ಪ್ರಕ್ರಿಯೆ, ಇಂಧನ ಉತ್ಪಾದನೆ ಮತ್ತು ಹಸಿರು ಮನೆ ಪರಿಣಾಮ ಮುಂತಾದವುದಳು ಈ ಸಮಾವೇಶದ ಮುಖ್ಯ ಅಜೆಂಡಾಗಳಾಗಿವೆ.

ವಿವಿಧ ವಿಧದ ಕಬ್ಬುಗಳು ಮತ್ತು ಕಬ್ಬು ಬೆಳೆಯುವ ಮತ್ತು ಸಕ್ಕರೆ ಉತ್ಪಾದಿಸುವ ವಿವಿಧ ವಿಧಾನಗಳ ಕುರಿತಾಗಿ ಇದು ಮಾಹಿತಿಯನ್ನು ನೀಡಲಿದೆ.

ಸಕ್ಕರೆ ಉದ್ಯಮದ ಅಭಿವೃದ್ಧಿ, ಯಂತ್ರೀಕೃತ ಕಬ್ಬು ಕೃಷಿ, ಸಕ್ಕರೆಯನ್ನು ಪೂರಕ ಉತ್ಪನ್ನವಾಗಿ ಬಳಕೆ, ಸಕ್ಕರೆ ಉದ್ಯಮದ ಉತ್ಪಾದಕತೆ ಹೆಚ್ಚಳ ಹಾಗೂ ಸಕ್ಕರೆ ಉದ್ಯಮವನ್ನು ಲಾಭದಾಯಕವನ್ನಾಗಿಸುವ ಕುರಿತಾಗಿಯೂ ಈ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ.

ಸಕ್ಕರೆ ಸಂಬಂಧಿತ ಉತ್ಪನ್ನಗಳ ಉತ್ಪಾದರರು, ಸೇವಾ ಸರಬರಾಜುದಾರರು, ಗ್ರಾಹಕರು, ರಫ್ತುದಾರರರಿಗೆ ಈ ಸಮಾವೇಶವು ಸಮಾಗಮ ಕೇಂದ್ರವಾಗಲಿದೆ ಎಂದು ಸಮಾವೇಶ ಮತ್ತು ಪ್ರದರ್ಶನ ಸಂಘಟಕರಾದ ವೆ.ಕೆ.ಬನ್ಸಾಲ್ ಹೇಳುತ್ತಾರೆ.
ಮತ್ತಷ್ಟು
ಹತ್ತಿ ಆಮದು ಮೇಲಿನ ಸೀಮಾಸುಂಕ ರದ್ದು
1.251 ಟ್ರಿಲಿಯನ್‌ಗೆ ತಲುಪಲಿರುವ ಒಪಿಇಸಿ ಆದಾಯ
ಹಣದುಬ್ಬರ ಶೇ.14ಕ್ಕೆ ಏರಲಿದೆ: ಅಸೋಚಾಂ
ಅಕ್ಕಿ ರಫ್ತು ನಿಷೇಧ: ಗಲ್ಫ್ ಮೇಲೆ ಪರಿಣಾಮ
ಬೆಂಗಳೂರಿನಲ್ಲಿ ಗತಿ ಕೆಫೆ ಡೆಲಿವರ್ ಪ್ರಾರಂಭ
ಬಂಡವಾಳ ಒಳಹರಿವು 3 ಪಟ್ಟು ಹೆಚ್ಚಳ