ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಕೀಯ ಬಿಕ್ಕಟ್ಟಿನಿಂದ ಆರ್ಥಿಕ ಅಬಿವೃದ್ಧಿಗೆ ಧಕ್ಕೆಯಿಲ್ಲ: ಸರಕಾರ  Search similar articles
ದೇಶದ ರಾಜಕೀಯ ಪ್ರಕ್ಷುಬ್ಧತೆಯು ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಅಭಿವೃದ್ಧಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವಾಲಯವು ಸ್ಪಷ್ಟಪಡಿಸಿದೆ.

ರಾಜಕೀಯ ಗೊಂದಲವು ದೇಶದ ಅಭಿವೃದ್ಧಿಯ ಮೇಲೆ ಪ್ರಭಾವ ಬೀರುವುದಿಲ್ಲ ಎಂಬ ವಿಶ್ವಾಸವಿದೆ ಎಂದು ರಾಜ್ಯ ಹಣಕಾಸು ಸಚಿವ ಪವನ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಯುಪಿಎ ಸರಕಾರಕ್ಕೆ ಬಾಹ್ಯ ಬೆಂಬಲವನ್ನು ನೀಡುತ್ತಾ ಬಂದಿದ್ದ ಎಡಪಕ್ಷಗಳು ಇಂದು ತಮ್ಮ ಬೆಂಬಲವನ್ನು ಅದಿಕೃತವಾಗಿ ಹಿಂತೆಗೆದುಕೊಂಡಿದ್ದು, ಯುಪಿಎ ಸರಕಾರದ ಈ ಹಿನ್ನಡೆಯು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಆತಂಕವಿದೆ.

2007-08ರ ಅವಧಿಯಲ್ಲಿ ಭಾರತದ ಆರ್ಥಿಕತೆಯು ಶೇ.9ರಷ್ಟು ಏರಿಕೆ ಕಂಡಿದ್ದು, ಇದು ಶೇ.8-8.5ರವರೆಗೆ ಮಂದಗೊಳ್ಳಲಿದೆ ಎಂಬುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ.
ಮತ್ತಷ್ಟು
ಜುಲೈ 25ರಿಂದ ಸುಗರ್ಏಶಿಯಾ-2008
ಹತ್ತಿ ಆಮದು ಮೇಲಿನ ಸೀಮಾಸುಂಕ ರದ್ದು
1.251 ಟ್ರಿಲಿಯನ್‌ಗೆ ತಲುಪಲಿರುವ ಒಪಿಇಸಿ ಆದಾಯ
ಹಣದುಬ್ಬರ ಶೇ.14ಕ್ಕೆ ಏರಲಿದೆ: ಅಸೋಚಾಂ
ಅಕ್ಕಿ ರಫ್ತು ನಿಷೇಧ: ಗಲ್ಫ್ ಮೇಲೆ ಪರಿಣಾಮ
ಬೆಂಗಳೂರಿನಲ್ಲಿ ಗತಿ ಕೆಫೆ ಡೆಲಿವರ್ ಪ್ರಾರಂಭ