ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶದ ಆರ್ಥಿಕತೆಯು ಚೇತರಿಕೆಗೊಳ್ಳಲಿದೆ: ಚಿದಂಬರಂ  Search similar articles
ಸರಿಯಾದ ದೃಷ್ಟಿಕೋನ ಮತ್ತು ತಾಳ್ಮೆಯು ಹಣದುಬ್ಬರ ಏರಿಕೆಯಂತಹ ದೇಶದ ಹಲವು ಸಮಸ್ಯೆಗಳನ್ನು ಎದುರಿಸಲು ಸಹಾಯವಾಗಲಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ತಿಳಿಸಿದ್ದು, ಭಾರತದ ಆರ್ಥಿಕತೆಯು ಚೇತರಿಸಿಕೊಳ್ಳಲಿದೆ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.

ಭಾರತದಂತಹ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಸೂಕ್ತ ನಿಲುವು, ತಾಳ್ಮೆ ಮತ್ತು ಸಹಿಷ್ಣುತೆಯು ಈ ಸಮಸ್ಯೆಯಿಂದ ಹೊರಬರಲು ಸಹಾಯಕವಾಗಲಿದೆ ಎಂದು ಅವರು ಹೇಳಿದ್ದಾರೆ.

1997-98ರ ಏಶಿಯನ್ ಹಣಕಾಸು ಬಿಕ್ಕಟ್ಟು, 1989-90ರ ವಿದೇಶಿ ವಿನಿಮಯ ಮೀಸಲು ಬಿಕ್ಕಟ್ಟು ಮುಂತಾದ ಸಮಸ್ಯೆಗಳನ್ನು ದೇಶವು ಎದುರಿಸಿರುವಾಗ, ಪ್ರಸಕ್ತ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವೇನಲ್ಲ ಎಂಬುದಾಗಿ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ಏನೇ ಆದರೂ, ಜಾಗತಿಕವಾಗಿ ಏರುತ್ತಿರುವ ಕಚ್ಚಾತೈಲ ಬೆಲೆಯು ಉತ್ಪನ್ನ ಮತ್ತು ಮೆಟಲ್‌ಗಳ ಬೆಲೆಯ ಮೇಲೆ ಪರಿಣಾಮ ಬೀರಿದ್ದು, ಇದು ಹಣದುಬ್ಬರ ಏರಿಕೆಗೆ ಕಾರಣವಾಗಿದೆ ಎಂದು ಅವರು ಪುನರುಚ್ಛರಿಸಿದ್ದಾರೆ.
ಮತ್ತಷ್ಟು
ರಾಜಕೀಯ ಬಿಕ್ಕಟ್ಟಿನಿಂದ ಆರ್ಥಿಕ ಅಬಿವೃದ್ಧಿಗೆ ಧಕ್ಕೆಯಿಲ್ಲ: ಸರಕಾರ
ಜುಲೈ 25ರಿಂದ ಸುಗರ್ಏಶಿಯಾ-2008
ಹತ್ತಿ ಆಮದು ಮೇಲಿನ ಸೀಮಾಸುಂಕ ರದ್ದು
1.251 ಟ್ರಿಲಿಯನ್‌ಗೆ ತಲುಪಲಿರುವ ಒಪಿಇಸಿ ಆದಾಯ
ಹಣದುಬ್ಬರ ಶೇ.14ಕ್ಕೆ ಏರಲಿದೆ: ಅಸೋಚಾಂ
ಅಕ್ಕಿ ರಫ್ತು ನಿಷೇಧ: ಗಲ್ಫ್ ಮೇಲೆ ಪರಿಣಾಮ