ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇರಾನ್ ಆತಂಕ: 136 ಡಾಲರ್‌ಗೇರಿದ ಕಚ್ಛಾತೈಲ ಬೆಲೆ  Search similar articles
ದೇಶದಾದ್ಯಂತ ಕಚ್ಛಾತೈಲ ಸಂಗ್ರಹಣೆಯಲ್ಲಿ ಇಳಿಕೆ ಉಂಟಾಗಿದೆ ಎಂಬ ಅಮೆರಿಕದ ವರದಿಗಳ ಹಿನ್ನೆಲೆಯಲ್ಲಿ ಮತ್ತು ಒಪಿಇಸಿ ಸದಸ್ಯ ರಾಷ್ಟ್ರ ಇರಾನ್‌ನ ಕ್ಷಿಪಣಿ ಪರೀಕ್ಷೆಯು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧತೆ ಉಂಟುಮಾಡಿರುವ ಹಿನ್ನೆಲೆಯಲ್ಲಿ ಏಶಿಯನ್ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆಯು ಗುರುವಾರದ ವಹಿವಾಟಿನಲ್ಲಿ ಏರಿಕೆ ಕಂಡಿದೆ.

ನ್ಯೂಯಾರ್ಕ್ ಮರ್ಚಂಟೈಲ್ ವಿನಿಮಯ ಕೇಂದ್ರದಲ್ಲಿ ಆಗಸ್ಟ್ ತಿಂಗಳ ವಿತರಣೆಗಾಗಿ ಇರುವ ನ್ಯೂಯಾರ್ಕ್‌ನ ಲೈಟ್ ಸ್ವೀಟ್ ಕಚ್ಛಾತೈಲವು 63 ಸೆಂಟ್‌ಗಳಷ್ಟು ಏರಿಕೆ ಕಂಡಿದ್ದು, ಬ್ಯಾರಲ್‌ಗೆ 136.68 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

ಆಗಸ್ಟ್ ವಿತರಣೆಗಾಗಿ ಇರುವ ಬ್ರೆಂಟ್ ನಾರ್ತ್ ಸೀ ಕಚ್ಛಾತೈಲ ಬೆಲೆಯು 51 ಸೆಂಟ್‌ಗಳಷ್ಟು ಏರಿದ್ದು, 137.09 ಡಾಲರ್‌ಗೆ ತಲುಪಿದೆ.

ಈ ವರ್ಷದ ಪ್ರಾರಂಭದಲ್ಲಿ ಬ್ಯಾರಲ್‌ಗೆ 100 ಡಾಲರ್‌ಗಳಷ್ಟಿದ್ದ ಕಚ್ಛಾತೈಲ ಬೆಲೆಯು ಕಳೆದ ವಾರ ಬ್ಯಾರಲ್‌ ಒಂದಕ್ಕೆ 145 ಡಾಲರ್‌ಗೆ ಏರಿತ್ತು. ನಂತರ ಹತ್ತು ಡಾಲರ್‌ಗಳಷ್ಟು ಇಳಿಕೆಗೊಂಡಿದೆ.
ಮತ್ತಷ್ಟು
ದೇಶದ ಆರ್ಥಿಕತೆಯು ಚೇತರಿಕೆಗೊಳ್ಳಲಿದೆ: ಚಿದಂಬರಂ
ರಾಜಕೀಯ ಬಿಕ್ಕಟ್ಟಿನಿಂದ ಆರ್ಥಿಕ ಅಬಿವೃದ್ಧಿಗೆ ಧಕ್ಕೆಯಿಲ್ಲ: ಸರಕಾರ
ಜುಲೈ 25ರಿಂದ ಸುಗರ್ಏಶಿಯಾ-2008
ಹತ್ತಿ ಆಮದು ಮೇಲಿನ ಸೀಮಾಸುಂಕ ರದ್ದು
1.251 ಟ್ರಿಲಿಯನ್‌ಗೆ ತಲುಪಲಿರುವ ಒಪಿಇಸಿ ಆದಾಯ
ಹಣದುಬ್ಬರ ಶೇ.14ಕ್ಕೆ ಏರಲಿದೆ: ಅಸೋಚಾಂ