ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾರ್ಸ್‌ಲೇಸ್‌ನಿಂದ 'ಕ್ಯಾಶ್‌ಬ್ಯಾಕ್' ಕೊಡುಗೆ  Search similar articles
ಪ್ರಮುಖ ಜಾಗತಿಕ ಹಣಕಾಸು ಸೇವಾ ಸರಬರಾಜು ಸಂಸ್ಥೆ ಬಾರ್ಸ್‌ಲೇಸ್, ತನ್ನ ಡೆಬಿಟ್ ಕಾರ್ಡ್ ಗ್ರಾಹಕರಿಗೆ ಹಣ ಮರು ಪಾವತಿ ಎಂಬ ನೂತನ ಕೊಡುಗೆಯೊಂದನ್ನು ಪ್ರಾರಂಭಿಸಿದೆ.

ಜುಲೈ ಒಂದರಿಂದ ಸೆಪ್ಟೆಂಬರ್ 2008ರವರೆಗೆ ಜಾರಿಯಲ್ಲಿರುವ ಈ ಕೊಡುಗೆಯು ಭಾರತದಲ್ಲಿ ಖರೀದಿಯ ವೇಳೆ ಬಾರ್ಸ್‌ಲೇಸ್ ಕಾರ್ಡ್ ಬಳಸುವವರಿಗೆ ಅನ್ವಯವಾಗುತ್ತದೆ.

ಬಾರ್ಸ್‌ಲೇಸ್ ಕ್ಲಾಸಿಕ್ ಡೆಬಿಟ್ ಕಾರ್ಡ್, ಬಾರ್ಸ್‌‌ಲೇಸ್ ಪ್ಲಾಟಿನಂ ಡೆಬಿಟ್ ಕಾರ್ಡ್, ಬಾರ್ಸ್‌ಲೇಸ್ ಗೋಲ್ಡ್ ಬ್ಯುಸಿನೆಸ್ ಕಾರ್ಡ್ ಒಳಗೊಂಡಿರುವ ಎಲ್ಲಾ ಬಾರ್ಸ್‌ಲೇಸ್ ಗ್ರಾಹಕರಿಗೆ ಈ ಕೊಡುಗೆಯು ಅನ್ವಯಿಸುತ್ತದೆ.

ಈ ಕೊಡುಗೆಯ ಮೂಲಕ ತಿಂಗಳಿಗೆ ಸುಮಾರು 500 ರೂಪಾಯಿಯವರೆಗೆ ಬಾರ್ಸ್‌ಲೇಸ್ ಗ್ರಾಹಕರು ಹಣವನ್ನು ಮರುಪಡೆಯಬಹುದಾಗಿದ್ದು, ಈ ಮೊತ್ತವನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ಗ್ರಾಹಕರ ಖಾತೆಗೆ ಜಮಾ ಮಾಡಲಾಗುತ್ತದೆ.

ಬಾರ್ಸ್‌ಲೇಸ್ ಅಂತಾರಾಷ್ಟ್ರೀಯ ಹಣಕಾಸು ಸೇವಾ ಸರಬರಾಜು ಸಂಸ್ಥೆಯಾಗಿದ್ದು, ರಖಂ ಮತ್ತು ಕಮರ್ಶಿಯಲ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಬಂಡವಾಳ ಬ್ಯಾಂಕಿಂಗ್, ವೆಲ್ತ್ ನಿರ್ವಹಣೆ, ಹೂಡಿಕಾ ನಿರ್ವಹಣಾ ಸೇವೆ ಮುಂತಾದ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

(ಇಂಡಿಯಾ ಪಿಆರ್‌ವೈರ್ (indiaprwire.com) ಮೂಲಕ ಪ್ರಕಟಣೆ)
ಮತ್ತಷ್ಟು
ಏರ್‌ಲೈನ್ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಸಮಿತಿ
ಇರಾನ್ ಆತಂಕ: 136 ಡಾಲರ್‌ಗೇರಿದ ಕಚ್ಛಾತೈಲ ಬೆಲೆ
ದೇಶದ ಆರ್ಥಿಕತೆಯು ಚೇತರಿಕೆಗೊಳ್ಳಲಿದೆ: ಚಿದಂಬರಂ
ರಾಜಕೀಯ ಬಿಕ್ಕಟ್ಟಿನಿಂದ ಆರ್ಥಿಕ ಅಬಿವೃದ್ಧಿಗೆ ಧಕ್ಕೆಯಿಲ್ಲ: ಸರಕಾರ
ಜುಲೈ 25ರಿಂದ ಸುಗರ್ಏಶಿಯಾ-2008
ಹತ್ತಿ ಆಮದು ಮೇಲಿನ ಸೀಮಾಸುಂಕ ರದ್ದು