ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೋಕಿಯಾದಿಂದ ಇ71,ಇ66 ಅನಾವರಣ  Search similar articles
PR
ಮೊಬೈಲ್ ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನೋಕಿಯಾ, ಇ71 ಮತ್ತು ನೋಕಿಯಾ ಇ66 ಇಮೈಲ್ ಬೆಂಬಲಿತ ಸಾಧನವನ್ನು ಬಿಡುಗಡೆಗೊಳಿಸಿದೆ.

ಅತ್ಯಂತ ಆಕರ್ಷಕವಾಗಿರುವ ಸ್ಲೀಕ್ ನೋಕಿಯಾ ಇ71 ಸಂಪೂರ್ಣ ಕ್ವರ್ಟಿ ಕೀಬೋರ್ಡ್ ಹೊಂದಿದ್ದು, ಸ್ಲೈಡ್ ಓಪನ್ ನೋಕಿಯಾ ಇ66 ಜಗತ್ತಿನ ಅತಿ ದೊಡ್ಡ ಕಾರ್ಪೋರೇಟ್ ಇಮೈಲ್ ಪರಿಹಾರವಾದ ಮೈಕ್ರೋಸಾಫ್ಟ್ ಸೊಲ್ಯುಶನ್ ಸೇರಿದಂತೆ ವೈಯಕ್ತಿಕ ಮತ್ತು ವೃತ್ತಿಪರ ಸಂದೇಶ ಅಗತ್ಯತೆಗಳನ್ನು ಪೂರೈಸುತ್ತದೆ.

ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಇಮೈಲ್ ಕಾರ್ಯಗಳಿಗೆ ಸುಲಭವಾಗುವ ಮತ್ತು ಅತ್ಯಂತ ಆಕರ್ಷಕ ಶೈಲಿಯ ಮೊಬೈಲ್ ಬಳಸುವ ಗ್ರಾಹಕರಿಗಾಗಿ ಇದನ್ನು ವಿನ್ಯಾಸ ಮಾಡಲಾಗಿದ್ದು, ಎರಡೂ ನೂತನ ಇ ಸಿರೀಸ್‌ಗಳು ಟಚ್ ಸ್ಕ್ರೀನ್‌ಗಳಲ್ಲೇ ಕ್ಯಾಲೆಂಡರ್ ಮತ್ತು ಕಾಂಟಾಕ್ಟ್‌ಗಳನ್ನು ಹೊಂದಿದೆ ಎಂದು ನೋಕಿಯಾ ಇಂಡಿಯಾದ ಮಾರುಕಟ್ಟೆ ನಿರ್ದೇಶಕ ದೇವಿಂದರ್ ಕಿಶೋರ್ ತಿಳಿಸಿದ್ದಾರೆ.

ಈ ಸಾಧಗಳಲ್ಲಿ ಸ್ಟೈನ್‌ಲೆಸ್ ಸ್ಟೀಲ್‌ನ್ನು ಮುಖ್ಯ ಉತ್ಪನ್ನವಾಗಿ ಬಳಸಿಕೊಳ್ಳಲಾಗಿದ್ದು, ಇದು ನೋಕಿಯಾ ಇ71 ಮತ್ತು ನೋಕಿಯಾ ಇ66ಗೆ ಹೆಚ್ಚಿನ ಸುರಕ್ಷತೆಯನ್ನು ನೀಡುವುದರೊಂದಿಗೆ ಸೌಂದರ್ಯವನ್ನು ದೀರ್ಘಸಮಯದವರೆಗೆ ಕಾಪಾಡಿಕೊಂಡು ಬರುತ್ತದೆ ಎಂದು ಅವರು ಹೇಳಿದ್ದಾರೆ.

PR
ನೋಕಿಯಾ 71 ಮತ್ತು ನೋಕಿಯಾ 66 ವೈಯಕ್ತಿಕ ಮತ್ತು ಖಾಸಗಿ ಇಮೈಲ್‌ಗಳ ಸುಲಭ ಬಳಕೆ ಮತ್ತು ಸುಲಭ ಅಳವಡಿಕೆಗೆ ಸಜ್ಜುಗೊಂಡಿದ್ದು, ಎಚ್‌ಎಸ್‌ಡಿಪಿಎ, ನಿಸ್ತಂತು ಲ್ಯಾನ್ ಮತ್ತು 3 ಜಿ ಸಂಪರ್ಕವನ್ನು ಹೊಂದಿದೆ. ಜಿಪಿಎಸ್(ಎ-ಜಿಪಿಎಸ್) ನೊಂದಿಗೆ 3.2 ಮೆಗಾಪಿಕ್ಸೆಲ್ ಕ್ಯಾಮರಾ ಹೊಂದಿರುವ ಇ71 ಮತ್ತು ಇ66, 8 ಜಿಬಿ ಹೆಚ್ಚುವರಿ ಮೆಮರಿಗೆ ಅವಕಾಶ ಮಾಡಿಕೊಡುತ್ತದೆ.
ಮತ್ತಷ್ಟು
ಬಾರ್ಸ್‌ಲೇಸ್‌ನಿಂದ 'ಕ್ಯಾಶ್‌ಬ್ಯಾಕ್' ಕೊಡುಗೆ
ಏರ್‌ಲೈನ್ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಸಮಿತಿ
ಇರಾನ್ ಆತಂಕ: 136 ಡಾಲರ್‌ಗೇರಿದ ಕಚ್ಛಾತೈಲ ಬೆಲೆ
ದೇಶದ ಆರ್ಥಿಕತೆಯು ಚೇತರಿಕೆಗೊಳ್ಳಲಿದೆ: ಚಿದಂಬರಂ
ರಾಜಕೀಯ ಬಿಕ್ಕಟ್ಟಿನಿಂದ ಆರ್ಥಿಕ ಅಬಿವೃದ್ಧಿಗೆ ಧಕ್ಕೆಯಿಲ್ಲ: ಸರಕಾರ
ಜುಲೈ 25ರಿಂದ ಸುಗರ್ಏಶಿಯಾ-2008