ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೈಗಾರಿಕಾ ಅಭಿವೃದ್ಧಿ ಕುಂಠಿತಗೊಳ್ಳಲಿದೆ:ಎಚ್ಎಸ್‌ಬಿಸಿ  Search similar articles
ಬಡ್ಡಿದರ ಹೆಚ್ಚಳದ ಪರಿಣಾಮವಾಗಿ, ಭಾರತ ಕೈಗಾರಿಕ ಉತ್ಪನ್ನದ ಪ್ರಮಾಣವು ಹಂತಹಂತವಾಗಿ ಇಳಿಮುಖಗೊಳ್ಳುವ ಸಾಧ್ಯತೆಯಿದ್ದು, ಅಕ್ಟೋಬರ್ ತಿಂಗಳ ವೇಳೆ ಶೇ.4.3ಕ್ಕೆ ಇಳಿಯಲಿದೆ ಎಂದು ಎಚ್‌ಎಸ್‌ಬಿಸಿ ತಿಳಿಸಿದೆ.

ಏಪ್ರಿಲ್ ತಿಂಗಳಲ್ಲಿ ಕೈಗಾರಿಕ ಉತ್ಪಾದನೆಯ ಅಭಿವೃದ್ಧಿಯುಂಟಾಗಿದ್ದರೂ, ಮುಂದಿನ ಕೆಲವು ತಿಂಗಳುಗಳಲ್ಲಿ ಕೈಗಾರಿಕಾ ಅಭಿವೃದ್ಧಿಯು ಇಳಿಮುಖ ಹಾದಿಯಲ್ಲಿಯೇ ಮುಂದುವರಿಯಲಿದೆ ಎಂದು ಎಚ್‌ಎಸ್‌ಬಿಸಿ ಅಭಿಪ್ರಾಯಪಟ್ಟಿದೆ.

ಏಪ್ರಿಲ್ ತಿಂಗಳಲ್ಲಿ ಶೇ.7.0ರಷ್ಟಿದ್ದ ಕೈಗಾರಿಕಾ ಉತ್ಪಾದನೆಯು ಮೇ ತಿಂಗಳಲ್ಲಿ ಶೇ.7.2ಕ್ಕೆ ಏರಿತ್ತು. ಆದರೆ, 2006 ಮತ್ತು 2007ರ ಪ್ರಾರಂಭದಲ್ಲಿದ್ದ ಎರಡಂಕಿ ಅಭಿವೃದ್ಧಿಯನ್ನು ಮರುಪಡೆಯಲು ಸಾಧ್ಯವಾಗಿಲ್ಲ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಹಣದುಬ್ಬರ ಮತ್ತು ಬೆಲೆ ಏರಿಕೆ ಹತೋಟಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ರೇಪೋ ದರ ಮತ್ತು ನಗದು ಮೀಸಲು ಪ್ರಮಾಣವನ್ನು 2008ರಲ್ಲಿ ಏರಿಕೆಗೊಳಿಸಿದ್ದು, ಇದು ಕೂಡಾ ಕೈಗಾರಿಕಾ ಉತ್ಪಾದನಾ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

2006-07ರ ಬಡ್ಡಿದರ ಹೆಚ್ಚಳವು ಕೈಗಾರಿಕಾ ಕ್ಷೇತ್ರ ಸೇರಿದಂತೆ ಆರ್ಥಿಕತೆಯ ಮೇಲೆ ಹೆಚ್ಚು ಪ್ರಭಾವ ಬೀರುವ ನಿರೀಕ್ಷೆಯಿದೆ ಎಂಬುದಾಗಿ ಪ್ರಮುಖ ಆರ್ಥಿಕತಜ್ಞರೊಬ್ಬರು ಹೇಳುತ್ತಾರೆ.

ಏನೇ ಆದರೂ, 2008ರ ಅಂತ್ಯದ ವೇಳೆಗೆ ರೇಪೋ ದರ ಮತ್ತು ನಗದು ಮೀಸಲು ಪ್ರಮಾಣವನ್ನು ಶೇ.1ರಷ್ಟು ಕೇಂದ್ರ ಬ್ಯಾಂಕ್ ಹೆಚ್ಚಳಗೊಳಿಸುವ ಸಾಧ್ಯತೆ ಇದೆ ಎಂದು ಎಚ್‌ಎಸ್‌ಬಿಸಿ ಅಭಿಪ್ರಾಯಪಟ್ಟಿದೆ.
ಮತ್ತಷ್ಟು
ನೋಕಿಯಾದಿಂದ ಇ71,ಇ66 ಅನಾವರಣ
ಬಾರ್ಸ್‌ಲೇಸ್‌ನಿಂದ 'ಕ್ಯಾಶ್‌ಬ್ಯಾಕ್' ಕೊಡುಗೆ
ಏರ್‌ಲೈನ್ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಸಮಿತಿ
ಇರಾನ್ ಆತಂಕ: 136 ಡಾಲರ್‌ಗೇರಿದ ಕಚ್ಛಾತೈಲ ಬೆಲೆ
ದೇಶದ ಆರ್ಥಿಕತೆಯು ಚೇತರಿಕೆಗೊಳ್ಳಲಿದೆ: ಚಿದಂಬರಂ
ರಾಜಕೀಯ ಬಿಕ್ಕಟ್ಟಿನಿಂದ ಆರ್ಥಿಕ ಅಬಿವೃದ್ಧಿಗೆ ಧಕ್ಕೆಯಿಲ್ಲ: ಸರಕಾರ