ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ಫೋಸಿಸ್ ತ್ರೈಮಾಸಿಕ ಆದಾಯ ಶೇ.21ರಷ್ಟು ಹೆಚ್ಚಳ  Search similar articles
ರೂಪಾಯಿ ಮೌಲ್ಯ ಇಳಿಕೆಯ ಬೆಂಬಲದಿಂದಾಗಿ, ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ಸರಬರಾಜು ಸಂಸ್ಥೆ ಇನ್ಫೋಸಿಸ್ ಟೆಕ್ನಾಲಜಿ, 2008 ಜೂನ್ 30ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸದಲ್ಲಿ 1302 ಕೋಟಿ ನಿವ್ವಳ ಆದಾಯ ಗಳಿಸುವ ಮೂಲಕ ಇನ್ಫೋಸಿಸ್ ಆದಾಯದಲ್ಲಿ ಶೇ.21ರಷ್ಟು ಹೆಚ್ಚಳ ಉಂಟಾಗಿದೆ.

ಜೂನ್ 30,2007ರಲ್ಲಿ ಇನ್ಫೋಸಿಸ್‌ನ ಒಟ್ಟು ಆದಾಯವು 1079 ಕೋಟಿಗಳಷ್ಟಿತ್ತು ಎಂದು ಇನ್ಫೋಸಿಸ್ ಹೇಳಿಕೆಗಳು ತಿಳಿಸಿವೆ.

ಜಾಗತಿಕ ಆರ್ಥಿಕ ವಾತಾವರಣದ ಅಸ್ಥಿರತೆಯು ಮುಂದುವರಿದಿದ್ದರೂ ಮತ್ತು ಕಿರು ಹಂತದಲ್ಲಿ ಐಟಿ ವೆಚ್ಚದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದರೂ, ಗ್ರಾಹಕರು ಇತ್ತೀಚೆಗೆ ದಕ್ಷತೆ ಅಭಿವೃದ್ಧಿಯತ್ತ ಹೆಚ್ಚು ಗಮನಹರಿಸುವ ಕಾರಣ, ಕಂಪನಿ ಅಭಿವೃದ್ಧಿಗೆ ಅವಕಾಶವಿದೆ ಎಂದು ಇನ್ಫೋಸಿಸ್ ಸಿಇಒ ಮತ್ತು ಆಡಳಿತ ನಿರ್ದೇಶಕ ಎಸ್.ಗೋಪಾಲಕೃಷ್ಣನ್ ತಿಳಿಸಿದ್ದಾರೆ.

ರೂಪಾಯಿ ಮೌಲ್ಯ ವರ್ಧನೆಯಿಂದಾಗಿ ಭಾರತೀಯ ಸಾಫ್ಟ್‌ವೇರ್ ಕ್ಷೇತ್ರದ ಅಭಿವೃದ್ಧಿಯು ಕಳೆದ ವರ್ಷ ಇಳಿಮುಖಗೊಂಡಿತ್ತು.

ಕಿರುಹಂತದಲ್ಲಿ ಕರೆನ್ಸಿ ಮಾರುಕಟ್ಟೆಯು ಚಂಚಲವಾಗಿಯೇ ಉಳಿಯಲಿರುವುದಾಗಿ ಇನ್ಫೋಸಿಸ್‌ನ ಮುಖ್ಯ ಹಣಕಾಸು ಅಧಿಕಾರಿ ವಿ.ಬಾಲಕೃಷ್ಣನ್ ತಿಳಿಸಿದ್ದಾರೆ.

ಜೂನ್ 30ಕ್ಕೆ ಅಂತ್ಯಗೊಂಡ ತ್ರೈಮಾಸದಲ್ಲಿ ಇನ್ಫೋಸಿಸ್ ಹೆಚ್ಚುವರಿ 7,182 ನೌಕರರನ್ನು ನೇಮಕ ಮಾಡಿಕೊಂಡಿದ್ದು, ಈ ಮೂಲಕ ಇನ್ಫೋಸಿಸ್‌ನ ಒಟ್ಟು ನೌಕರರ ಸಂಖ್ಯೆಯು 94,379ಕ್ಕೆ ಏರಿದೆ.
ಮತ್ತಷ್ಟು
ಕೈಗಾರಿಕಾ ಅಭಿವೃದ್ಧಿ ಕುಂಠಿತಗೊಳ್ಳಲಿದೆ:ಎಚ್ಎಸ್‌ಬಿಸಿ
ನೋಕಿಯಾದಿಂದ ಇ71,ಇ66 ಅನಾವರಣ
ಬಾರ್ಸ್‌ಲೇಸ್‌ನಿಂದ 'ಕ್ಯಾಶ್‌ಬ್ಯಾಕ್' ಕೊಡುಗೆ
ಏರ್‌ಲೈನ್ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಸಮಿತಿ
ಇರಾನ್ ಆತಂಕ: 136 ಡಾಲರ್‌ಗೇರಿದ ಕಚ್ಛಾತೈಲ ಬೆಲೆ
ದೇಶದ ಆರ್ಥಿಕತೆಯು ಚೇತರಿಕೆಗೊಳ್ಳಲಿದೆ: ಚಿದಂಬರಂ