ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.11.89ಕ್ಕೇರಿದ ಹಣದುಬ್ಬರ  Search similar articles
ಜೂನ್ 28ಕ್ಕೆ ಅಂತ್ಯಗೊಂಡ ವಾರದಲ್ಲಿ ದೇಶದ ಸಗಟು ಬೆಲೆ ಆಧಾರಿತ ಹಣದುಬ್ಬರವು ಶೇ.11.89ರಷ್ಟು ಏರಿಕೆಗೊಂಡಿದ್ದು, ಏಪ್ರಿಲ್ 1995ರ ನಂತರ ಹಣದುಬ್ಬರದ ಗರಿಷ್ಠ ಪ್ರಮಾಣವು ಇದೇ ಆಗಿದೆ ಎಂದು ಸರಕಾರಿ ಅಂಕಿಅಂಶಗಳು ತಿಳಿಸಿವೆ.

ಆಹಾರ ಬೆಲೆ ಏರಿಕೆ ಮತ್ತು ಕೆಲವು ಉತ್ಪಾದಕಾ ವಸ್ತುಗಳಾದ ಕಬ್ಬಿಣ ಮತ್ತು ಸ್ಟೀಲ್ ಉತ್ಪನ್ನಗಳ ಬೆಲೆಯಲ್ಲಿನ ಏರಿಕೆಯು ಹಣದುಬ್ಬರ ವರ್ಧನೆಗೆ ಮುಖ್ಯ ಕಾರಣವಾಗಿದೆ.

ಜೂನ್ 21ಕ್ಕೆ ಅಂತ್ಯಗೊಂಡ ವಾರದಲ್ಲಿ ಹಣದುಬ್ಬರವು ಶೇ.11.63ಕ್ಕೇರಿದ್ದು, ಸಗಟು ಬೆಲೆ ಆಧಾರಿತ ಹಣದುಬ್ಬರವು ಶೇ.13ಕ್ಕೇರಲಿದೆ ಎಂದು ಈಗಾಗಲೇ ಹಣಕಾಸು ಸಚಿವಾಲಯವು ಸ್ಪಷ್ಟಪಡಿಸಿತ್ತು.

ಹಣದುಬ್ಬರದ ಮತ್ತಷ್ಟು ಏರಿಕೆಯ ಫಲವಾಗಿ, ಇದನ್ನು ಹತೋಟಿಗೆ ತರಲು ಹೆಚ್ಚು ಹಣಕಾಸು ಕ್ರಮಗಳನ್ನು ಸರಕಾರಿ ಮೂಲಗಳು ಅಲ್ಲಗಳೆದಿಲ್ಲ.

ಹಣದುಬ್ಬರದ ಏರುಮುಖ ಪ್ರವೃತ್ತಿಯನ್ನು ನಿಯಂತ್ರಿಸಲು ಬಾರತೀಯ ರಿಸರ್ವ್ ಬ್ಯಾಂಕ್ ಇನ್ನಷ್ಟು ಬಿಗಿ ಹಣಕಾಸು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಇನ್ಫೋಸಿಸ್ ತ್ರೈಮಾಸಿಕ ಆದಾಯ ಶೇ.21ರಷ್ಟು ಹೆಚ್ಚಳ
ಕೈಗಾರಿಕಾ ಅಭಿವೃದ್ಧಿ ಕುಂಠಿತಗೊಳ್ಳಲಿದೆ:ಎಚ್ಎಸ್‌ಬಿಸಿ
ನೋಕಿಯಾದಿಂದ ಇ71,ಇ66 ಅನಾವರಣ
ಬಾರ್ಸ್‌ಲೇಸ್‌ನಿಂದ 'ಕ್ಯಾಶ್‌ಬ್ಯಾಕ್' ಕೊಡುಗೆ
ಏರ್‌ಲೈನ್ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಸಮಿತಿ
ಇರಾನ್ ಆತಂಕ: 136 ಡಾಲರ್‌ಗೇರಿದ ಕಚ್ಛಾತೈಲ ಬೆಲೆ