ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನಷ್ಟು ಕಾರ್ಪೋರೇಟ್ ಜೆಟ್‌ಗಳ ವಶ  Search similar articles
PTI
ತೆರಿಗೆಗಳ್ಳತನದ ಪತ್ತೆಗೆ ಬಿಗಿನೀತಿಯನ್ನು ಅನುಸರಿಸುತ್ತಿರುವ ಸರಕಾರ, ಜಿಎಂಆರ್, ಒಬೆರಾಯ್, ಇಂಡಿಯಾ ಬುಲ್ಸ್ ಮುಂತಾದ ಮುಂಚೂಣಿಯ ಕಂಪೆನಿಗಳಿಗೆ ಸೇರಿದ ವಿಮಾನಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಸರಕಾರವು ಕಳೆದ ವರ್ಷದಿಂದ ಇಂತಹ ಸುಮಾರು 250 ವಿಮಾನಗಳನ್ನು ವಶಪಡಿಸಿಕೊಂಡಿದೆ ಎಂದು ವೈಮಾನಿಕ ಮೂಲಗಳು ತಿಳಿಸಿವೆ.

ನಿಯಮಿತವಲ್ಲದ ಕಾರ್ಯಾಚರಣಾ ಪರವಾನಗಿ ಯೋಡನಯಡಿ ಅನುಮತಿ ಪಡೆದು ತೆರಿಗೆ ವಂಚನೆ ನಡೆಸಿದ್ದು ಕಂಡುಬಂದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ತೆರಿಗೆ ದರದ ಐದು ಪಟ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗುವುದು ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ತಿಂಗಳಿನಲ್ಲಿ 6 ವಿಮಾನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಮಾನಗಳ ಮಾಲಿಕರ ಬ್ಯಾಂಕ್‌ ಭಧ್ರತೆ ಹಾಗೂ ವಿಮಾನದ ಖರೀದಿ ದರಕ್ಕೆ ಸಂಬಂಧಿಸಿದ ಬಾಂಡ್‌‌ಗಳನ್ನು ಸಲ್ಲಿಸಿದ ನಂತರ ಬಿಡುಗಡೆ ಮಾಡಲಾಗಿದೆ ಎಂದು ತೆರಿಗೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ರಿಲಯನ್ಸ್‌ಗೆ ಸೇರಿದ ಎರಡು ವಿಮಾನಗಳನ್ನು ವಶಪಡಿಸಿಕೊಂಡ ನಂತರ ಈ ವಿಚಾರ ಮೊದಲಿಗೆ ಬೆಳಕಿಗೆ ಬಂದಿತು. ಆದರೆ ಆ ಬಳಿಕ ಟಾಟಾ, ಡಿಎಲ್‌ಎಫ್, ಎಸ್ಕಾರ್ಟ್ಸ್, ಕಿಂಗ್‌ಫಿಶರ್, ಪುಂಜ್ ಲಾಯ್ಡ್ ಕಂಪೆನಿಗಳಿಗೆ ಸೇರಿದ ವಿಮಾನಗಳೂ ಸರಕಾರದ ಕೂಲಂಕಷ ಪರೀಕ್ಷೆಗೊಳಪಟ್ಟಿವೆ.
ಮತ್ತಷ್ಟು
ಶೇ.11.89ಕ್ಕೇರಿದ ಹಣದುಬ್ಬರ
ಇನ್ಫೋಸಿಸ್ ತ್ರೈಮಾಸಿಕ ಆದಾಯ ಶೇ.21ರಷ್ಟು ಹೆಚ್ಚಳ
ಕೈಗಾರಿಕಾ ಅಭಿವೃದ್ಧಿ ಕುಂಠಿತಗೊಳ್ಳಲಿದೆ:ಎಚ್ಎಸ್‌ಬಿಸಿ
ನೋಕಿಯಾದಿಂದ ಇ71,ಇ66 ಅನಾವರಣ
ಬಾರ್ಸ್‌ಲೇಸ್‌ನಿಂದ 'ಕ್ಯಾಶ್‌ಬ್ಯಾಕ್' ಕೊಡುಗೆ
ಏರ್‌ಲೈನ್ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಸಮಿತಿ