ಮುಂಬೈ: ರಬ್ಬರ್ ಮತ್ತು ಕಚ್ಚಾತೈಲಗಳ ದರ ಏರಿಕೆಯ ಹಿನ್ನೆಲೆಯಲ್ಲಿ ಟೈರುಗಳ ದರಗಳಲ್ಲಿ ಶೇ6 ರಷ್ಟು ದರ ಹೆಚ್ಚಳ ಮಾಡಲಾಗಿದೆ ಎಂದು ಟೈರುಗಳ ಉತ್ಪಾದಕ ಸಂಸ್ಥೆಯಾದ ಜೆಕೆ ಟೈರ್ಸ್ ಆಂಡ್ ಇಂಡಸ್ಟ್ರೀಸ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಾಣಿಜ್ಯರಹಿತ ವಾಹನಗಳ ಉತ್ಪಾದಕ ದರಗಳಲ್ಲಿ ಜುಲೈ ಮೂರನೆಯ ವಾರದಲ್ಲಿ ಏರಿಕೆಯಾಗಲಿದೆ. ಆದರೆ ಏರಿಕೆಯ ದರವನ್ನು ಇನ್ನೂ ನಿಗದಿಪಡಿಸಿಲ್ಲ ಎಂದು ಹಿರಿಯ ಅಧಿಕಾರಿ ಮೆಹತಾ ತಿಳಿಸಿದ್ದಾರೆ.
ಜೆಕೆ ಇಂಡಸ್ಟ್ರೀಸ್‌ನ ಎದುರಾಳಿಯಾದ ಮುಂಬೈ ಮೂಲದ ಸಿಯೆಟ್ ಕಂಪೆನಿ ಕೂಡಾ ವಾಣಿಜ್ಯ ರಹಿತ ವಾಹನಗಳ ಉತ್ಪಾದಕ ದರಗಳಲ್ಲಿ ಶೇ.6ರಷ್ಟು ಹೆಚ್ಚಳ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ರಬ್ಬರ್ ಮತ್ತು ಕಚ್ಚಾ ತೈಲದ ದರಗಳಲ್ಲಿ ಏರಿಕೆ ಮುಂದುವರಿದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಸಿಯೆಟ್ ಉತ್ಪನ್ನಗಳ ದರಗಳಲ್ಲಿ ಏರಿಕೆ ಮಾಡಲಿದೆ ಎಂದು ಕಂಪೆನಿಯ ಮಾರುಕಟ್ಟೆ ಮುಖ್ಯಸ್ಥ ಅರ್ನಾಬ್ ಬ್ಯಾನರ್ಜಿ ತಿಳಿಸಿದ್ದಾರೆ.
ಅಪೋಲೊ ಟೈರ್ಸ್ ಲಿಮಿಟೆಡ್ ಕೂಡಾ ಜುಲೈ 1 ರಂದು ಉತ್ಪನ್ನ ದರಗಳನ್ನು ಹೆಚ್ಚಿಸಿದೆ ಎಂದು ಕಂಪೆನಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
|