ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆವಶ್ಯಕ ವಸ್ತುಗಳ ಬೆಲೆ ಸ್ಥಿರ: ಹಣಕಾಸು ಸಚಿವಾಲಯ  Search similar articles
ಆವಶ್ಯಕ ವಸ್ತುಗಳ ಬೆಲೆಯು ಬಹುತೇಕ ಸ್ಥಿರವಾಗಿದೆ ಎಂದು ಹಣಕಾಸು ಸಚಿವಾಲಯವು ಹೇಳಿದ್ದು, ಈ ಮೂಲಕ, 13 ವರ್ಷಗಳಲ್ಲೇ ಅಧಿಕ ಮಟ್ಟದಲ್ಲಿ ಶೇ.11.89ಕ್ಕೆ ಏರಿದ ಹಣದುಬ್ಬರದಿಂದ ಉಂಟಾಗಿರುವ ಬೆಲೆ ಏರಿಕೆ ಆತಂಕವನ್ನು ದೂರ ಮಾಡಿದೆ.

ಆಹಾರ ಧಾನ್ಯ, ಬೇಳೆಕಾಳು, ಖಾದ್ಯತೈಲ, ತರಕಾರಿ, ಹಾಲು ಉತ್ಪನ್ನ ಮತ್ತು ಇತರ ವಸ್ತುಗಳಾದ ಸೀಮೆಎಣ್ಣೆ, ಸೋಪು, ಬೆಂಕಿಕಡ್ಡಿ ಮುಂತಾದವುಗಳ ಬೆಲೆಗಳು ಬಹುತೇಕ ಸ್ಥಿರಾವಾಗಿದೆ ಎಂದು ಹಣಕಾಸು ಸಚಿವಾಲಯವು ಸ್ಪಷ್ಟಪಡಿಸಿದೆ.

ಪ್ರಾಥಮಿಕ ವಸ್ತುಗಳ ಸಮೂಹದಲ್ಲಿ ಒಟ್ಟು 98 ವಸ್ತುಗಳಲ್ಲಿ ಗೋಧಿ, ಅಕ್ಕಿ, ಮೆಕ್ಕೆಜೋಳ, ಬೆಳ್ಳುಳ್ಳಿ, ಕ್ಯಾಬೇಜ್, ಜೀರಿಗೆ, ಕರಿಮೆಣಸು, ಶುಂಠಿ, ಸೂರ್ಯಕಾಂತಿ ಬೀಜ ಸೇರಿದಂತೆ 12 ವಸ್ತುಗಳ ಬೆಲೆಯಲ್ಲಿ ಕಳೆದ ವಾರಕ್ಕಿಂತ ಇಳಿಕೆ ಉಂಟಾಗಿದ್ದು, ಇತರ 55 ವಸ್ತುಗಳ ಬೆಲೆಯಲ್ಲೂ ಏರಿಕೆ ಉಂಟಾಗಿಲ್ಲ ಎಂದು ಸಚಿವಾಲಯದ ಹೇಳಿಕೆಗಳು ತಿಳಿಸಿವೆ.

ಉತ್ಪಾದಕ ವಸ್ತುಗಳಲ್ಲಿ ಒಟ್ಟು 320 ವಸ್ತುಗಳಲ್ಲಿ 278 ವಸ್ತುಗಳ ಬೆಲೆಯಲ್ಲಿ ಕಳೆದ ವಾರಕ್ಕಿಂತ ಯಾವುದೇ ಏರಿಕೆ ಉಂಟಾಗಿಲ್ಲ ಎಂದು ಅದು ಹೇಳಿದೆ.
ಮತ್ತಷ್ಟು
ಜೆಕೆ ಟ್ರಕ್ ಟೈರುಗಳ ದರದಲ್ಲಿ ಶೇ.6ರಷ್ಟು ಏರಿಕೆ
ಕಿಂಗ್‌ಫಿಶರ್-ಡೆಕ್ಕನ್ ವಿಲೀನಕ್ಕೆ ಹೈಕೋರ್ಟ್ ಸಮ್ಮತಿ
ಇನ್ನಷ್ಟು ಕಾರ್ಪೋರೇಟ್ ಜೆಟ್‌ಗಳ ವಶ
ಶೇ.11.89ಕ್ಕೇರಿದ ಹಣದುಬ್ಬರ
ಇನ್ಫೋಸಿಸ್ ತ್ರೈಮಾಸಿಕ ಆದಾಯ ಶೇ.21ರಷ್ಟು ಹೆಚ್ಚಳ
ಕೈಗಾರಿಕಾ ಅಭಿವೃದ್ಧಿ ಕುಂಠಿತಗೊಳ್ಳಲಿದೆ:ಎಚ್ಎಸ್‌ಬಿಸಿ