ದಕ್ಷಿಣ ಏಷಿಯಾದಲ್ಲಿ ವಹಿವಾಟಿಗೆ ನೆರೆ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಉತ್ತಮ ಪರಿಸರವಿದ್ದು 1990ರ ನಂತರ ದರವನ್ನು ಕಡಿತಗೊಳಿಸಲಾಗಿದೆ ಎಂದು ವಿಶ್ವಬ್ಯಾಂಕ್ ವರದಿಯಲ್ಲಿ ಪ್ರಕಟಿಸಲಾಗಿದೆ.
ದಕ್ಷಿಣ ಏಷಿಯಾದ ಸರಾಸರಿ ಕಡಿಮೆ ಆದಾಯದ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಪ್ರಸ್ತುತ ವಹಿವಾಟಿಗಾಗಿ ಉತ್ತಮ ಪರಿಸರ ನಿರ್ಮಾಣವಾಗಿದ್ದು ಹೂಡಿಕೆದಾರರ ಪರವಾಗಿದೆ ಎಂದು ವಿಶ್ವ ಬ್ಯಾಂಕ್‌ನ ಖ್ಯಾತ ಆರ್ಥಿಕ ತಜ್ಞ ಗಿಯಾನ್ನಿ ಝಾನೈನಿ ಪ್ರಕಟಿಸಿದ ವರದಿಯಲ್ಲಿ ತಿಳಿಸಿದ್ದಾರೆ.
ಎಫ್‌ಸಿಸಿಐ ಹಾಗೂ ವಿಶ್ವಬ್ಯಾಂಕ್ ಆಯೋಜಿಸಿದ ಜಂಟಿ ಸಭೆಯಲ್ಲಿ ಮಾತನಾಡಿದ ಝನೈನಿ , ಭಾರತ ಕೃಷಿ ರಫ್ತಿನಲ್ಲಿ ಹೆಚ್ಚಿನ ಅಡೆತಡೆಗಳನ್ನು ಎದುರಿಸುತ್ತಿದ್ದು ಅಗತ್ಯವಾದಂತಹ ಪಾಲುದಾರರ ಕೊರತೆಯನ್ನು ಎದುರಿಸುತ್ತಿದೆ ಎಂದು ತಿಳಿಸಿದರು.
|