ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್‌ಫೋಸಿಸ್, ಟಿಸಿಎಸ್‌ಗೆ ಅತ್ಯುತ್ತಮ ಕಂಪೆನಿಗಳು-ಸಮೀಕ್ಷೆ  Search similar articles
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇನ್‌ಫೋಸಿಸ್ ಹಾಗೂ ಟಾಟಾ ಕನ್ಸಲ್‌ಟನ್ಸಿ ಸರ್ವಿಸ್ ಮತ್ತು ವಿಪ್ರೋ ಸಂಸ್ಥೆಗಳು ಭಾರತದ ಪ್ರಮುಖ ಸ್ಥಾನ ಪಡೆದಿರುವ ಕಂಪೆನಿಗಳು ಎಂದು ವಾಲ್‌ಸ್ಟ್ರೀಟ್ ಜನರಲ್ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಿದೆ.

ಕಳೆದ ಎಂಟು ವರ್ಷಗಳ ಕಂಪೆನಿಯ ಪ್ರಗತಿಯನ್ನು ಪರಿಗಣಿಸಿದ್ದು ಭಾರ್ತಿ ಏರ್‌ಟೆಲ್ ಹಾಗೂ ಐಸಿಐಸಿಐ ಬ್ಯಾಂಕ್‌ ಟಾಪ್10ರಲ್ಲಿ ಸ್ಥಾನ ಪಡೆದಿವೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.

ಇನ್‌ಫೋಸಿಸ್ ಪ್ರಥಮ ಸ್ಥಾನವನ್ನು ಪಡೆದಿದ್ದು ಟಾಟಾ ಕನ್ಸಲ್‌ಟನ್ಸಿ ಸರ್ವಿಸ್ ಎರಡನೇ ಸ್ಥಾನವನ್ನು ಪಡೆದಿದ್ದು ವಿಪ್ರೋ ಮೂರನೇ ಸ್ಥಾನವನ್ನು ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ಭಾರ್ತಿ ಏರ್‌ಟೆಲ್ ಹಾಗೂ ಟಾಟಾಸ್ಟೀಲ್ ಕ್ರಮವಾಗಿ ನಾಲ್ಕನೇ ಹಾಗೂ ಐದನೇ ಸ್ಥಾನವನ್ನು ಪಡೆದಿದ್ದು ಲಾರ್ಸನ್ ಆಂಡ್ ಟರ್ಬೊ, ಐಟಿಸಿ, ಟಾಟಾ ಮೋಟಾರ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಮಹೀಂದ್ರಾ ಆಂಡ್ ಮಹೀಂದ್ರಾ ನಂತರದ ಸ್ಥಾನಗಳನ್ನು ಪಡೆದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮತ್ತಷ್ಟು
ದಕ್ಷಿಣ ಏಷಿಯಾದ ವಹಿವಾಟಿನಲ್ಲಿ ಭಾರತಕ್ಕೆ ಆದ್ಯತೆ
ಭಾರ್ತಿ ಆಕ್ಸಾ‌ನಿಂದ ಮ್ಯೂಚುವಲ್ ಫಂಡ್ ಬಿಡುಗಡೆ
ಚಾನೆಲ್ ವಿಸ್ತರಣೆಗೆ ಸ್ಯಾಮ್‌ಸಂಗ್ ಆದ್ಯತೆ
ಚಿನ್ನದ ಬೆಲೆಯಲ್ಲಿ ಏರಿಕೆ
ಆವಶ್ಯಕ ವಸ್ತುಗಳ ಬೆಲೆ ಸ್ಥಿರ: ಹಣಕಾಸು ಸಚಿವಾಲಯ
ಜೆಕೆ ಟ್ರಕ್ ಟೈರುಗಳ ದರದಲ್ಲಿ ಶೇ.6ರಷ್ಟು ಏರಿಕೆ