ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಫ್ಲೈ' ಮೊಬೈಲ್ ರಾಯಭಾರಿಯಾಗಿ ಇಶಾಂತ್  Search similar articles
PR
ಭಾರತ ಕ್ರಿಕೆಟ್ ತಂಡದ ಆಕ್ರಮಣಕಾರಿ ಬೌಲರ್ ಇಶಾಂತ್ ಶರ್ಮಾ ಅವರನ್ನು 'ಫ್ಲೈ' ಬ್ರಾಂಡ್ ಮೊಬೈಲ್ ಕಂಪೆನಿ ಮೆರಿಡಿಯನ್ ಮೊಬೈಲ್, ತನ್ನ ಹೆಚ್ಚುವರಿ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ. ಇದೀಗಾಗಲೇ ಚಿತ್ರನಟಿ, ರೂಪದರ್ಶಿ ಮಲೈಕಾ ಅರೋರಾ ಖಾನ್ ಮೆರಿಡಿಯನ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

"ಇಶಾಂತ್ ಶರ್ಮಾ ಭಾರತದ ಮುಂದಿನ ಯುವ ಆದರ್ಶವಾಗುವುದು ನಿಸ್ಸಂಶಯ. ಈತ ಮಾರಣಾಂತಿಕ ಬೌಲರ್ ಮತ್ತು ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರ ವ್ಯಕ್ತಿತ್ವದಲ್ಲಿನ ಕಿಡಿ, ಹೊಸ ಶೈಲಿಯ ನೋಟ, ಆಕ್ರಮಣಕಾರಿ ಮನೋಭಾವ ಮತ್ತು ಉಲ್ಲಾಸದ ಸ್ವಭಾವ ಮುಂತಾದ ಲಕ್ಷಣಗಳು, ಪ್ರಶ್ನಾತೀತವಾಗಿ ಫ್ಲೈ ಫೋನುಗಳ ಆಕರ್ಷಣೀಯ ಅನುಲಕ್ಷಣಗಳಿಗೆ ಹೊಂದುತ್ತದೆ" ಎಂದು ಹೊಸ ಬ್ರಾಂಡ್ ಅಂಬಾಸಿಡರ್ ಕುರಿತು, ಸಂಸ್ಥೆಯ ಭಾರತೀಯ ಕಾರ್ಯಾಚರಣೆಯ ಸಿಇಓ ರಾಜೀವ್ ಖನ್ನಾ ಹೇಳಿದ್ದಾರೆ.

ಇಶಾಂತ್ ತನ್ನ ಯುವ, ಉತ್ಸಾಹ ಮತ್ತು ಆಕರ್ಷಣೀಯ ವ್ಯಕ್ತಿತ್ವಕ್ಕೆ ಹೆಸರಾಗಿದ್ದರೆ, ಫ್ಲೈ ಅದರ ಶೈಲಿ ಮತ್ತು ಶಕ್ತಿಗೆ ಹೆಸರಾಗಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಶಾಂತ್ ಮತ್ತು ಫ್ಲೈ ಆಕ್ರಮಣಶೀಲತೆ ಮತ್ತು ಕೆಚ್ಚಿನ ಕಿಚ್ಚಿನಿಂದ ಜತೆಜತೆಯಾಗಿ ಸ್ಫರ್ಧಿಸುತ್ತವೆ. ಮೊಬೈಲ್ ಹ್ಯಾಂಡ್‌ಸೆಟ್ ಪ್ರಪಂಚದಲ್ಲಿ ಹೊಸ 'ಪಟು'ವಾಗಿರುವ ಫ್ಲೈ, ಸವಾಲಿನ ಹುರುಪನ್ನು ಹೊಂದಿದ್ದು ಇದರೊಂದಿಗೆ ಆಕ್ರಮಣಶೀಲತೆಯೊಂದಿಗೆ ಉದಯಿಸುತ್ತಿದೆ. ಫ್ಲೈ ತನ್ನ ಕ್ರೀಡಾ ಮತ್ತು ಉನ್ನತ-ತಂತ್ರಜ್ಞಾನದ ಗುಣಲಕ್ಷಣಗಳೊಂದಿಗೆ ಇಶಾಂತ್ ಶರ್ಮಾ ಅವರ ಕ್ರೀಡಾ ಮತ್ತು ತಾಂತ್ರಿಕ ವ್ಯಕ್ತಿತ್ವಕ್ಕೆ ಸರಿಹೊಂದುತ್ತದೆ" ಎಂದು ಖನ್ನಾ ಫ್ಲೈ ಹಾಗೂ ಶರ್ಮಾರನ್ನು ಸಮೀಕರಿಸಿದ್ದಾರೆ.

ಇಶಾಂತ್ ಹಾಗೂ ಮಲೈಕಾ ಆರೋರಾರೊಂದಿಗೆ ಥಳುಕಿನ ಜಾಹೀರಾತು ಆಂದೋಲನವನ್ನು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಹಮ್ಮಿಕೊಳ್ಳಲು ಮೆರಿಡಿಯನ್ ಯೋಜಿಸಿದೆ.

2006ರ ಜೂನ್‌ನಲ್ಲಿ ಭಾರತದಲ್ಲಿ ಫ್ಲೈ ಬಿಡುಗಡೆ ಗೊಂಡಿದ್ದು, ಈ ವರ್ಷ ಸಂಸ್ಥೆಯು 250 ಕೋಟಿ ರೂಪಾಯಿ ತೊಡಗಿಸಲು ಯೋಜನೆ ಹಮ್ಮಿಕೊಂಡಿದೆ. ಮೆರಿಡಿಯನ್ ಮೊಬೈಲ್ ಕಂಪೆನಿಯು ಫೀಚರ್ ಫೋನ್‌ಗಳು, ಸ್ಮಾರ್ಟ್ ಫೋನ್‌ಗಳು, ಮತ್ತು ಮೊಬೈಲ್ ಫೋನ್ ಬಿಡಿಭಾಗಗಳನ್ನು ಉತ್ಪಾದಿಸುತ್ತಿದೆ.

ಟಿವಿ ಹೊಂದಿರುವ ಮೊಬೈಲ್ ಫೋನ್, ಅಲ್ಟ್ರಾ ಸ್ಲಿಮ್ ವಿನ್ಯಾಸಗಳು, ಟೆಕ್ಟಿಯಂ-ಬ್ಯಾಕ್-ಯು-ಪವರ್ ತಾಂತ್ರಿಕತೆಗಳು ಈ ಮೊಬೈಲ್‌ಗಳ ವೈಶಿಷ್ಠ್ಯ. ಮಾರುಕಟ್ಟೆಯಲ್ಲಿ ಇರುವ ಮೊಬೈಲ್‌ಗಳಿಗೆ ಹೋಲಿಸಿದರೆ, ಫ್ಲೈ ಮೊಬೈಲ್ ಬ್ಯಾಟರಿ ಹೆಚ್ಚುಕಾಲ ಬಾಳುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಸದ್ಯ ಮಾರುಕಟ್ಟೆಯಲ್ಲಿ ಮೆರಿಡಿಯನ್‌ನ 24 ಮಾದರಿಗಳು ಲಭ್ಯವಿದೆ. ಫ್ಲೈ ಉತ್ಪನ್ನಗಳು ಉದ್ಯಮ ತಜ್ಞರು, ಮಾಧ್ಯಮಗಳ ವಿಮರ್ಷೆಗೀಡಾಗಿದ್ದು, ಉತ್ತಮ ಪ್ರತಿಸ್ಪಂದನ ಲಭಿಸಿದೆ ಎಂದು ಖನ್ನಾ ಹೇಳಿದ್ದಾರೆ.

ಪೆಂಟಲೂನ್, ಬಿಗ್‌ಬಜಾರ್, ಎಸ್ಸಾರ್, ದಿ ಮೊಬೈಲ್ ಸ್ಟೋರ್, ಸುಭಿಕ್ಷ, ಹಾಟ್‌ಸ್ಪಾಟ್ ಮತ್ತು ಆರ್‌ಪಿಜಿ ಸಂಸ್ಥೆಗಳು ಮೆರಿಡಿಯನ್‌ನ ವ್ಯಾಪಾರಿ ಭಾಗಿದಾರರ ಪಟ್ಟಿಯಲ್ಲಿದ್ದಾರೆ. ಭಾರತೀಯ ಮಾರುಕಟ್ಟೆಯ ಜಿಎಸ್ಎಂ ಹ್ಯಾಂಡ್ ಸೆಟ್‌ ಉದ್ಯಮದಲ್ಲಿ, ಫ್ಲೈ ಪ್ರಸ್ತುತ ಶೇ.6ರ ಪಾಲು ಹೊಂದಿದೆ.
ಮತ್ತಷ್ಟು
ಇನ್‌ಫೋಸಿಸ್, ಟಿಸಿಎಸ್‌ಗೆ ಅತ್ಯುತ್ತಮ ಕಂಪೆನಿಗಳು-ಸಮೀಕ್ಷೆ
ದಕ್ಷಿಣ ಏಷಿಯಾದ ವಹಿವಾಟಿನಲ್ಲಿ ಭಾರತಕ್ಕೆ ಆದ್ಯತೆ
ಭಾರ್ತಿ ಆಕ್ಸಾ‌ನಿಂದ ಮ್ಯೂಚುವಲ್ ಫಂಡ್ ಬಿಡುಗಡೆ
ಚಾನೆಲ್ ವಿಸ್ತರಣೆಗೆ ಸ್ಯಾಮ್‌ಸಂಗ್ ಆದ್ಯತೆ
ಚಿನ್ನದ ಬೆಲೆಯಲ್ಲಿ ಏರಿಕೆ
ಆವಶ್ಯಕ ವಸ್ತುಗಳ ಬೆಲೆ ಸ್ಥಿರ: ಹಣಕಾಸು ಸಚಿವಾಲಯ