ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸದ್ಯವೇ ಹಣದುಬ್ಬರ ಶೇ.17ಕ್ಕೆ ನೆಗೆತ?  Search similar articles
WD
ಸೆಪ್ಟೆಂಬರ್ ತಿಂಗಳಲ್ಲಿ ಇನ್ನೊಂದು ಸುತ್ತಿನ ಇಂಧನ ಬೆಲೆ ಏರಿಕೆಯ ಸಂಭವವಿದ್ದು, ಒಂದೊಮ್ಮೆ ಇದು ನಿಜವಾದರೆ, ಆ ವೇಳೆಗೆ ರಾಷ್ಟ್ರದ ಹಣದುಬ್ಬರ ಶೇ.17ಕ್ಕೆ ನೆಗೆಯುವ ಸಾಧ್ಯತೆ ಇದೆ ಎಂದು ಜಾಗತಿಕ ಹೂಡಿಕಾ ಬ್ಯಾಂಕ್ ಬಾರ್ಕ್ಲೇಸ್ ಕ್ಯಾಪಿಟಲ್ ಅಂದಾಜು ಮಾಡಿದೆ.

ಜೂನ್ 28ಕ್ಕೆ ಅಂತ್ಯಗೊಂಡ ವಾರದಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರ ಶೇ.11.89 ತಲುಪಿದು ಕಳೆದ 13 ವರ್ಷಗಳಲ್ಲೇ ಇದು ಗರಿಷ್ಠ ದರವಾಗಿದೆ. ಆರ್ಥಿಕ ಅಪಾಯವನ್ನುಮಿತಿಗೊಳಿಸಲು ಸರಕಾರ ಸೆಪ್ಟೆಂಬರಿನಲ್ಲಿ ಮತ್ತೊಮ್ಮೆ ಶೇ.10-20ರಷ್ಟು ಇಂಧನ ಬೆಲೆ ಏರಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.

ಜಾಗತಿಕವಾಗಿ ಕಚ್ಛಾತೈಲ ಬೆಲೆ ಪ್ರತಿ ಬ್ಯಾರೆಲೊಂದರ 145-150 ಡಾಲರ್ಗೆ ಏರಿಕೆಯಾಗಿದ್ದು, ಇದರಿಂದಾಗಿ ಸೆಪ್ಟಂಬರ್ ತಿಂಗಳಲ್ಲಿ ಇನ್ನೊಂದು ಸುತ್ತಿನ ಬೆಲೆ ಏರಿಕೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಬ್ಯಾಂಕಿನ ವರದಿಯಲ್ಲಿ ಹೇಳಲಾಗಿದೆ.

ಹಣಕಾಸು ಸಚಿವ ಚಿದಂಬರಂ ಸಲಹೆಗಾರ ಶುಭಾಷಿಸ್ ಗಂಗೋಪಾಧ್ಯಾಯ ಅವರು ಹಣದುಬ್ಬರ 2008 ವರ್ಷವಿಡೀ ಎರಡಂಕಿಯಲ್ಲಿ ಮುಂದುವರಿಯುವ ಬಗ್ಗೆ ಕಳೆದ ವಾರ ಮುನ್ಚೂಚನೆ ನೀಡಿದ್ದು, ಇದು ಆರ್ಥಿಕ ಬೆಳವಣಿಗೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದೆಂಬ ಆತಂಕ ವ್ಯಕ್ತಪಡಿಸಿದ್ದರು.
ಮತ್ತಷ್ಟು
'ಫ್ಲೈ' ಮೊಬೈಲ್ ರಾಯಭಾರಿಯಾಗಿ ಇಶಾಂತ್
ಇನ್‌ಫೋಸಿಸ್, ಟಿಸಿಎಸ್‌ಗೆ ಅತ್ಯುತ್ತಮ ಕಂಪೆನಿಗಳು-ಸಮೀಕ್ಷೆ
ದಕ್ಷಿಣ ಏಷಿಯಾದ ವಹಿವಾಟಿನಲ್ಲಿ ಭಾರತಕ್ಕೆ ಆದ್ಯತೆ
ಭಾರ್ತಿ ಆಕ್ಸಾ‌ನಿಂದ ಮ್ಯೂಚುವಲ್ ಫಂಡ್ ಬಿಡುಗಡೆ
ಚಾನೆಲ್ ವಿಸ್ತರಣೆಗೆ ಸ್ಯಾಮ್‌ಸಂಗ್ ಆದ್ಯತೆ
ಚಿನ್ನದ ಬೆಲೆಯಲ್ಲಿ ಏರಿಕೆ