ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಎಐಎಲ್ ಅಭಿವೃದ್ಧಿಗೆ ವಿಮಾನಯಾನ ಸಚಿವರ ಕರೆ  Search similar articles
ಪ್ರಯಾಣಿಕರ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೂತನ ವಿಮಾನ ನಿಲ್ದಾಣವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ.(ಬಿಎಐಎಲ್)ಗೆ ವಿಮಾನಯಾನ ಸಚಿವ ಪ್ರಪುಲ್ ಪಟೇಲ್ ಕರೆ ನೀಡಿದ್ದಾರೆ.

ಪ್ರಸಕ್ತ ಬೆಂಗಳೂರು ವಿಮಾನ ನಿಲ್ದಾಣವು ಪ್ರತಿ ವರ್ಷಕ್ಕೆ 11 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ ಎಂಬುದಾಗಿ ವಿಮಾನಯಾನ ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ರಸಕ್ತ ಟರ್ಮಿನಲ್‌ ರೂಪದಲ್ಲೇ ಎರಡನೇ ಟರ್ಮಿನಲ್‌ನ್ನು ನಿರ್ಮಿಸುವಂತೆ ಬಿಎಐಎಲ್‌ಗೆ ಸೂಚನೆ ನೀಡಲಾಗಿದ್ದು, ಅದು ಪೂರ್ಣಗೊಳ್ಳುವವರೆಗೆ ಮುಂದಿನ ಎಂಟು ತಿಂಗಳವರೆಗೆ ಪ್ರಯಾಣಿಕರ ಸಾಮರ್ಥ್ಯವನ್ನು ಹೆಚ್ಚಿಸಲು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡುವಂತೆ ತಿಳಿಸಿಲಾಗಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ಬೆಂಗಳೂರು ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ಮತ್ತು ದೇಶೀಯ ಕಾರ್ಯಾಚರಣೆಗೆ ಕೇವಲ ಒಂದು ಟರ್ಮಿನಲ್‌ನ್ನು ಮಾತ್ರವೇ ಹೊಂದಿದೆ.
ಮತ್ತಷ್ಟು
ಸದ್ಯವೇ ಹಣದುಬ್ಬರ ಶೇ.17ಕ್ಕೆ ನೆಗೆತ?
'ಫ್ಲೈ' ಮೊಬೈಲ್ ರಾಯಭಾರಿಯಾಗಿ ಇಶಾಂತ್
ಇನ್‌ಫೋಸಿಸ್, ಟಿಸಿಎಸ್‌ಗೆ ಅತ್ಯುತ್ತಮ ಕಂಪೆನಿಗಳು-ಸಮೀಕ್ಷೆ
ದಕ್ಷಿಣ ಏಷಿಯಾದ ವಹಿವಾಟಿನಲ್ಲಿ ಭಾರತಕ್ಕೆ ಆದ್ಯತೆ
ಭಾರ್ತಿ ಆಕ್ಸಾ‌ನಿಂದ ಮ್ಯೂಚುವಲ್ ಫಂಡ್ ಬಿಡುಗಡೆ
ಚಾನೆಲ್ ವಿಸ್ತರಣೆಗೆ ಸ್ಯಾಮ್‌ಸಂಗ್ ಆದ್ಯತೆ