ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೂತನ ಇಂಧನ ಕೇಂದ್ರ ಸ್ಥಾಪಿನೆಗೆ ನಿರ್ಬಂಧ  Search similar articles
ಮಾರುಕಟ್ಟೆ ದರಕ್ಕಿಂತ ಅತಿ ಕಡಿಮೆ ದರದಲ್ಲಿ ಇಂಧನ ಮಾರಾಟ ಮಾಡುವುದರಿಂದ ತೈಲ ಕಂಪನಿಗಳಿಗೆ ಉಂಟಾಗುವ ನಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ, ಮುಂದಿನ ಎರಡು ವರ್ಷಗಳಲ್ಲಿ ನೂತನ ಇಂಧನ ಕೇಂದ್ರಗಳನ್ನು ಸ್ಥಾಪಿಸದಂತೆ ಸರಕಾರವು ರಾಜ್ಯ ನಿಯಂತ್ರಿತ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಜೂನ್ ತಿಂಗಳಲ್ಲಿ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸಿದ್ದು, ಇದು 12 ವರ್ಷಗಳ ಬಳಿಕ ಅತಿ ಹೆಚ್ಚು ಪ್ರಮಾಣದ ಏರಿಕೆಯಾಗಿದೆ. ಆದರೆ, ಇತ್ತೀಚೆಗೆ ಬ್ಯಾರಲ್ ಒಂದಕ್ಕೆ ತೈಲವು 147 ಡಾಲರ್ ತಲುಪಿರುವ ಹಿನ್ನೆಲೆಯಲ್ಲಿ ಈ ಏರಿಕೆಯು ತೈಲ ಕಂಪನಿಗಳಿಗೆ ಅಷ್ಟೊಂದು ಉಪಯೋಗವನ್ನು ಉಂಟುಮಾಡಿಲ್ಲ.

ಎರಡು ವರ್ಷಗಳವರೆಗೆ ರಖಂ ಮಳಿಗೆಗಳನ್ನು ಸ್ಥಾಪಿಸುವುದನ್ನು ಕೂಡಲೇ ನಿಲ್ಲಿಸುವಂತೆ ಪೆಟ್ರೋಲಿ ಕಾರ್ಯದರ್ಶಿಗಳು ರಾಜ್ಯ ನಿಯಂತ್ರಿತ ತೈಲ ಸಂಸ್ಥೆಗಳಿಗೆ ಸೂಚನೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾರುಕಟ್ಟೆ ಬೆಲೆಗಿಂತ ಅತಿ ಕಡಿಮೆ ಬೆಲೆಯಲ್ಲಿ ಇಂಧನವನ್ನು ಮಾರಾಟ ಮಾಡುತ್ತಿರುವುದರಿಂದ, ಇಂಡಿಯನ್ ಆಯಿಲ್ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ ಕಾರ್ಪ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಂ ಕಾರ್ಪ್ ಪ್ರತಿದಿನ ಮಿಲಿಯನ್ ಡಾಲರ್‌ಗಳಷ್ಟು ನಷ್ಟವನ್ನು ಅನುಭವಿಸುತ್ತಿದೆ.
ಮತ್ತಷ್ಟು
ಬಿಎಐಎಲ್ ಅಭಿವೃದ್ಧಿಗೆ ವಿಮಾನಯಾನ ಸಚಿವರ ಕರೆ
ಸದ್ಯವೇ ಹಣದುಬ್ಬರ ಶೇ.17ಕ್ಕೆ ನೆಗೆತ?
'ಫ್ಲೈ' ಮೊಬೈಲ್ ರಾಯಭಾರಿಯಾಗಿ ಇಶಾಂತ್
ಇನ್‌ಫೋಸಿಸ್, ಟಿಸಿಎಸ್‌ಗೆ ಅತ್ಯುತ್ತಮ ಕಂಪೆನಿಗಳು-ಸಮೀಕ್ಷೆ
ದಕ್ಷಿಣ ಏಷಿಯಾದ ವಹಿವಾಟಿನಲ್ಲಿ ಭಾರತಕ್ಕೆ ಆದ್ಯತೆ
ಭಾರ್ತಿ ಆಕ್ಸಾ‌ನಿಂದ ಮ್ಯೂಚುವಲ್ ಫಂಡ್ ಬಿಡುಗಡೆ