ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅನಿವಾಸಿ ಭಾರತೀಯರಿಗೆ ಎಲ್ಐಸಿ ಹೊಸ ಯೋಜನೆ  Search similar articles
ಭಾರತೀಯ ಜೀವ ವಿಮಾ ಸಂಸ್ಥೆಯ ಜಾಗತಿಕ ಸಹ ಸಂಸ್ಥೆಯಾಗಿರುವ ಎಲ್ಐಸಿ ಇಂಟರ್ನಾಶನಲ್ ಅನಿವಾಸಿ ಭಾರತೀಯರನ್ನು ಗುರಿಯಾಗಿರಿಸಿಕೊಂಡು ನೂತನ ವಿಮಾ ಉತ್ಪನ್ನವನ್ನು ಪ್ರಾರಂಭಿಸಿದೆ.

ಫಾರ್ಚ್ಯೂನ್ ಬಿಲ್ಡರ್ ಎಂಬು ನೂತನ ಯೂನಿಟ್ ಲಿಂಕ್ಡ್ ವಿಮಾ ಯೋಜನೆಯನ್ನು(ಯುಎಲ್ಐಪಿ)ಗಲ್ಫ್‌ನಲ್ಲಿ ಎಲ್ಐಸಿಯ 20 ವರ್ಷಗಳ ಸೇವೆಯ ನೆನಪಿಗಾಗಿ ಪ್ರಾರಂಭಿಸಲಾಗಿದೆ.

ಗ್ರಾಹಕರ ವಿಮಾ ಮತ್ತು ಬಂಡವಾಳ ಎರಡೂ ಅಗತ್ಯತೆಗಳನ್ನು ಈ ನೂತನ ಉತ್ಪನ್ನವು ಪೂರೈಸುತ್ತದೆ ಎಂದು ಎಲ್ಐಸಿ ಇಂಟರ್ನಾಶನಲ್‌ನ ಆಡಳಿತ ನಿರ್ದೇಶಕ ಅವರು ತಿಳಿಸಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಬಹು ಪ್ರಯೋಜನವನ್ನು ಹೊಂದಿರುವ ಈ ಉತ್ಪನ್ನವು, ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಯ ಲಾಭಾಂಶದ ಪ್ರಯೋಜನವನ್ನು ಪಡೆಯಲು ಅವಕಾಶ ನೀಡುತ್ತದೆ. ಅಲ್ಲದೆ, ಜೀವ ವಿಮಾ ರಕ್ಷಣೆಯ ಜೊತೆಗೆ ಸಂಪತ್ ನಿರ್ಮಾಣ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಶೇರು ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು, ವಿಶ್ವ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ಮತ್ತು ಮುಕ್ತ ಉತ್ಪನ್ನಗಳು ಮುಂತಾದ ಮೂರು ಉತ್ಪನ್ನಗಳನ್ನು ಫಾರ್ಚ್ಯೂನ್ ಬಿಲ್ಡರ್ ಹೊಂದಿದೆ.
ಮತ್ತಷ್ಟು
ಉದ್ಯಮ ಸ್ಪರ್ಧಾತ್ಮಕತೆ: ಭಾರತಕ್ಕೆ 41ನೇ ಸ್ಥಾನ
ನೂತನ ಇಂಧನ ಕೇಂದ್ರ ಸ್ಥಾಪಿನೆಗೆ ನಿರ್ಬಂಧ
ಬಿಎಐಎಲ್ ಅಭಿವೃದ್ಧಿಗೆ ವಿಮಾನಯಾನ ಸಚಿವರ ಕರೆ
ಸದ್ಯವೇ ಹಣದುಬ್ಬರ ಶೇ.17ಕ್ಕೆ ನೆಗೆತ?
'ಫ್ಲೈ' ಮೊಬೈಲ್ ರಾಯಭಾರಿಯಾಗಿ ಇಶಾಂತ್
ಇನ್‌ಫೋಸಿಸ್, ಟಿಸಿಎಸ್‌ಗೆ ಅತ್ಯುತ್ತಮ ಕಂಪೆನಿಗಳು-ಸಮೀಕ್ಷೆ