ಭಾರತದ ಆರ್ಥಿಕತೆಯಲ್ಲಿ ಹಿಂಜರಿತ ಉಂಟಾಗುತ್ತಿಲ್ಲ ಎಂಬುದಾಗಿ ಭಾರತೀಯ ಉದ್ಯಮ ಒಕ್ಕೂಟ(ಸಿಐಐ)ದ ಅಧ್ಯಕ್ಷ ಕೆ.ವಿ.ಕಾಮತ್ ಸ್ಪಷ್ಟಪಡಿಸಿದ್ದು, ಭಾರತೀಯ ಉದ್ಯಮಗಳ ನಿರ್ವಹಣೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಆರು ತಿಂಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಸುಮಾರು 700 ಶತಕೋಟಿ ಡಾಲರ್‌ನಿಂದ 750 ಶತಕೋಟಿ ಡಾಲರ್ ಹೂಡಿಕೆಯನ್ನು ಕಾರ್ಪೋರೇಟ್‌ಗಳು ಹೊಂದಿದ್ದು, ಈ ಪ್ರಮಾಣವು ಹೆಚ್ಚಾಗಿದೆ ಎಂದು ಐಸಿಐಸಿಐ ಬ್ಯಾಂಕಿನ ಸಿಇಒ ಮತ್ತು ಆಡಳಿತ ನಿರ್ದೇಶಕರೂ ಆಗಿರುವ ಕಾಮತ್ ಹೇಳಿದ್ದಾರೆ.
ಹಣದುಬ್ಬರ, ತೈಲ ಬೆಲೆ ಏರಿಕೆ ಮತ್ತು ಆಹಾರ ಉತ್ಪನ್ನಗಳ ಬೆಲೆ ಏರಿಕೆಯು ಅತಿ ದೊಡ್ಡ ಸವಾಲಾಗಿದ್ದರೂ, ಒಟ್ಟು ಭಾರತದ ಜಿಡಿಪಿಯಲ್ಲಿ ಶೇ.60ರಷ್ಟು ಪ್ರಮಾಣವು ಸೇವಾ ಕ್ಷೇತ್ರದಿಂದ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಾಗತಿಕ ಮನೋವೃತ್ತಿಯು ಸ್ಪಷ್ಟವಾಗಿಯೂ ಒತ್ತಡದಲ್ಲಿದ್ದು, ಅತ್ಯಂತ ಆತಂಕದ ಪರಿಸ್ಥಿತಿಯನ್ನು ಹೊಂದಿದೆ. ಆದರೆ, ಇದರ ನಡುವೆಯೂ, ಭಾರತವು ಅಭಿವೃದ್ಧಿಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.
|