ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಪೋನ್ :ಬಿಡುಗಡೆಯ ವಾರಾಂತ್ಯದಲ್ಲೇ 1 ಮಿಲಿಯನ್ ಮಾರಾಟ  Search similar articles
ಬಹು ನಿರೀಕ್ಷಿತ ಸಂಪರ್ಕ ಸಾಧನ ಆಪಲ್ ಐಫೋನ್ ಬಿಡುಗಡೆಗೊಂಡ ವಾರಾಂತ್ಯದಲ್ಲೇ ಒಂದು ದಶಲಕ್ಷ ಐಫೋನ್‌ಗಳನ್ನು ಆಪಲ್ ಮಾರಾಟ ಮಾಡಿದೆ ಎಂದು ಕಂಪನಿಯು ತಿಳಿಸಿದೆ.

ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಕೆನಡಾ, ಡೆನ್ಮಾರ್ಕ್, ಪೈನ್ಲಾಂಡ್, ಜರ್ಮನಿ, ಹಾಂಗ್‌ಕಾಂಗ್, ಐರ್ಲ್ಯಾಂಡ್, ಇಟಲಿ, ಜಪಾನ್, ಮೆಕ್ಸಿಕೋ, ನೆದರ್ಲ್ಯಾಂಡ್, ನ್ಯೂಜಿಲ್ಯಾಂಡ್, ನಾರ್ವೇ, ಪೋರ್ಚುಗಲ್, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲ್ಯಾಂಡ್, ಬ್ರಿಟನ್ ಮತ್ತು ಅಮೆರಿಕ ಸೇರಿದಂತೆ ಸುಮಾರು 21 ರಾಷ್ಟ್ರಗಳಲ್ಲಿ ಐಫೋನ್ ಮಾರಾಟ ಮಾಡಲಾಗಿದ್ದು, ಫ್ರಾನ್ಸ್‌ನಲ್ಲಿಯೂ ಮಾರಾಟ ಮಾಡಲಿದೆ ಎಂದು ಆಪಲ್ ಹೇಳಿದೆ.

ಈ ಮೊದಲಿನ ನೈಜ ಐಫೋನ್‌ನ ಮಾರಾಟವು ಒಂದು ದಶಲಕ್ಷ ತಲುಪಲು 74 ದಿನಗಳು ತಗುಲಿತ್ತು. ಆದರೆ, ನೂತನ ಐಫೋನ್ 3ಜಿ ಬಿಡುಗಡೆಗೊಂಡ ವಾರಾಂತ್ಯದಲ್ಲೇ ಒಂದು ಮಿಲಿಯನ್ ಮಾರಾಟಗೊಳ್ಳುವ ಮೂಲಕ ಜಗತ್ತಿನಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಐಫೋನ್ 3ಜಿ ಬಿಡುಗಡೆಯ ಸಂದರ್ಭದಲ್ಲೇ ಈ ಹಿಂದಿನ ಮಾಡೆಲ್‌ಗಳ ಅಪ್‌ಗ್ರೇಡ್‌ಗೆ ನೂತನ ಸಾಫ್ಟ್‌ವೇರ್‌ನ್ನು ಒದಗಿಸಲು ಆಪಲ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಆಪಲ್‌ನ ಈ ಹಿಂದಿನ ಸಮಸ್ಯೆಗಳು ಬಗೆಹರಿದಂತಾಗಿದೆ.
ಮತ್ತಷ್ಟು
ಭಾರತದಲ್ಲಿ ಆರ್ಥಿಕ ಹಿಂಜರಿತವಿಲ್ಲ: ಸಿಐಐ
ಟೀನಾ, ಉಷಾ ಶತಕೋಟ್ಯಾಧಿ'ಪತ್ನಿ'ಯರು
ಅನಿವಾಸಿ ಭಾರತೀಯರಿಗೆ ಎಲ್ಐಸಿ ಹೊಸ ಯೋಜನೆ
ಉದ್ಯಮ ಸ್ಪರ್ಧಾತ್ಮಕತೆ: ಭಾರತಕ್ಕೆ 41ನೇ ಸ್ಥಾನ
ನೂತನ ಇಂಧನ ಕೇಂದ್ರ ಸ್ಥಾಪಿನೆಗೆ ನಿರ್ಬಂಧ
ಬಿಎಐಎಲ್ ಅಭಿವೃದ್ಧಿಗೆ ವಿಮಾನಯಾನ ಸಚಿವರ ಕರೆ