ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾಕ್ಸ್: ಬಿಎಸ್ಎನ್ಎಲ್‌ನಿಂದ 5,000 ಕೋಟಿ ರೂ.ಬಂಡವಾಳ  Search similar articles
ದೇಶದ ಅತಿ ದೊಡ್ಡ ಸರಕಾರಿ ನಿಯಂತ್ರಿತ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್, ವಿಮಾಕ್ಸ್ ಯೋಜನೆಗಾಗಿ ಸುಮಾರು 5,000 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಬಿಎನ್ಎಸ್ಎನ್ ತಿಳಿಸಿದೆ.

ವಿಮಾಕ್ಸ್ ಯೋಜನೆಯಲ್ಲಿ ಸುಮಾರು 5,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಕಂಪನಿಯು ನಿರ್ಧರಿಸಿದೆ ಎಂದು ಬಿಎಸ್ಎನ್ಎಲ್ ನಿರ್ದೇಶಕ ಎಸ್.ಡಿ.ಸೆಕ್ಸೆನಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿಮಾಕ್ಸ್ ತಂತ್ರಜ್ಞಾನದ ಮೂಲಕ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ನಿಸ್ತಂತು ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಪ್ರಾರಂಭಿಸುವ ಗುರಿಯನ್ನು ಬಿಎಸ್ಎನ್ಎಲ್ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಪ್ರಾಥಮಿಕವಾಗಿ, ಮಹಾರಾಷ್ಟ್ರ(ಮುಂಬಯಿ ಹೊರತಾಗಿ), ಗುಜರಾತ್ ಮತ್ತು ಆಂಧ್ರಪ್ರದೇಶಗಳಲ್ಲಿ ಕಾರ್ಯನಿರ್ವಹಣೆಯನ್ನು ಇದು ಪ್ರಾರಂಭಿಸಲಿದೆ.

ಇದರೊಂದಿಗೆ, ವಿಮಾಕ್ಸ್ ತಂತ್ರಜ್ಞಾನ ಹೊಂದಿರುವ 50,000 ಸಾಮಾನ್ಯ ಸೇವಾ ಕೇಂದ್ರ(ಸಿಎಸ್‌ಸಿ)ವನ್ನು ಸ್ಥಾಪಿಸುವ ಯೋಜನೆಯನ್ನೂ ಇದು ಹೊಂದಿದೆ.
ಮತ್ತಷ್ಟು
ಐಪೋನ್ :ಬಿಡುಗಡೆಯ ವಾರಾಂತ್ಯದಲ್ಲೇ 1 ಮಿಲಿಯನ್ ಮಾರಾಟ
ಭಾರತದಲ್ಲಿ ಆರ್ಥಿಕ ಹಿಂಜರಿತವಿಲ್ಲ: ಸಿಐಐ
ಟೀನಾ, ಉಷಾ ಶತಕೋಟ್ಯಾಧಿ'ಪತ್ನಿ'ಯರು
ಅನಿವಾಸಿ ಭಾರತೀಯರಿಗೆ ಎಲ್ಐಸಿ ಹೊಸ ಯೋಜನೆ
ಉದ್ಯಮ ಸ್ಪರ್ಧಾತ್ಮಕತೆ: ಭಾರತಕ್ಕೆ 41ನೇ ಸ್ಥಾನ
ನೂತನ ಇಂಧನ ಕೇಂದ್ರ ಸ್ಥಾಪಿನೆಗೆ ನಿರ್ಬಂಧ